ಕನ್ನಡಪ್ರಭ ವಾರ್ತೆ ಮಧುಗಿರಿ
ಪಟ್ಟಣದ ಶಂಕರ ಭವನದಲ್ಲಿ ಶ್ರೀ ಶಾರದಾ ಮಹಿಳಾ ಮಂಡಲಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆದಿ ಕವಿ ಪಂಪನಿಂದ ಕುವೆಂಪುವರೆಗೆ ಎಲ್ಲ ಸಾಹಿತ್ಯಗಳು ತಮ್ಮ ಕೃತಿಗಳಲ್ಲಿ ಆದರ್ಶ ಸಮಾಜದ ಕಲ್ಪನೆಯನ್ನು ನೀಡಿದ್ದಾರೆ. ಹಳಗನ್ನಡದಿಂದ ಆಧುನಿಕ ಸಾಹಿತ್ಯದವರೆಗೆ ಕನ್ನಡದಲ್ಲಿ ಬಂದ ಎಲ್ಲ ಸಾಹಿತ್ಯ ಕೃತಿಗಳಲ್ಲಿ ಕವಿಗಳು ಮಾನವೀಯ ಮೌಲ್ಯಗಳಿಗೆ ಪ್ರಾಧಾನ್ಯತೆ ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಂಪರೆ ಮಾನವೀಯತೆಯಿಂದ ಕೂಡಿತ್ತು, ಪ್ರಗತಿಪರ ಹಾಗೂ ಜನಪರ ನಿಲುವನ್ನು ಪ್ರತಿಪಾದಿಸುತ್ತದೆ ಎಂದರು.ತಾಲೂಕು ಬ್ರಾಹ್ಮಣ ಸಭಾ ಕಾರ್ಯಾಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಮಾತನಾಡಿ, ಕನ್ನಡದಲ್ಲಿ ವ್ಯವಹರಿಸಬೇಕು.ಕನ್ನಡ ಚಲನ ಚಿತ್ರಗಳನ್ನೇ ನೋಡಬೇಕು. ಮತ್ತು ಕನ್ನಡದಲ್ಲೇ ಸಹಿ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಶ್ರೀಶಂಕರ ಸೇವಾ ಸಮಿತಿ ಅಧ್ಯಕ್ಷ ಬಿ.ಆರ್.ಸತ್ಯನಾರಾಯಣ್ ಮಾತನಾಡಿ, ಜನಪದ ಸಾಹಿತಿಗಳು ,ದಾಸರು , ಶರಣರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ಸಾಹಿತ್ಯ ಆರ್ಥಿಕ ,ಸಾಮಾಜಿಕ ಮತ್ತು ಸಾಂಸ್ಕೃತಿಕ ಉನ್ನತಿಗೆ ಅಮೂಲ್ಯಕೊಡುಗೆ ನೀಡಿದೆ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕ ನಾಗೇಶ್, ಅರುಣಶ್ರೀ ಮಾತನಾಡಿದರು. ಶ್ರೀಶಂಕರ ಸೇವಾ ಸಮಿತಿ ನಿರ್ದೇಶಕ ಸಂಜೀವಮೂರ್ತಿ , ಸತ್ಯಲಕ್ಷ್ಮೀ, ಸರಸ್ವತಿ, ಚೈತ್ರ ನಾಗೇಶ್ ಉಪಸ್ಥಿತರಿದ್ದರು.