ಮಂದ್‌ನಲ್ಲಿ ದೇವರ ಕರೆದು ಸಾಂಪ್ರದಾಯಿಕ ಆಚರಣೆ

KannadaprabhaNewsNetwork |  
Published : Sep 04, 2026, 03:00 AM IST
 | Kannada Prabha

ಸಾರಾಂಶ

ಪೊನ್ನಂಪೇಟೆ ತಾಲೂಕಿನ ಕಿರಗೂರು ಬೀಟೆವಾಡ ಗ್ರಾಮದ ಕೊಡಗು ಹೆಗ್ಗಡೆ ಜನಾಂಗದ ಕೊರಕುಟ್ಪಿರ, ಕಾಕೇರ, ಪಾನಿಕುಟ್ಟಿರ, ಚಾರಿಮಂಡ, ಪೊಕ್ಕಳಿಚಂಡ, ವಾನಂಡ ಹಾಗೂ ಚೂರಿರ ಸೇರಿದಂತೆ ವಿವಿಧ ಒಕ್ಕದವರು ಒಗ್ಗೂಡಿ ಸಾಂಪ್ರದಾಯಿಕ ಕೈಲ್ ಪೋಲ್ದ್ ಆಚರಣೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.

ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ಕಿರಗೂರು ಬೀಟೆವಾಡ ಗ್ರಾಮದ ಕೊಡಗು ಹೆಗ್ಗಡೆ ಜನಾಂಗದ ಕೊರಕುಟ್ಪಿರ, ಕಾಕೇರ, ಪಾನಿಕುಟ್ಟಿರ, ಚಾರಿಮಂಡ, ಪೊಕ್ಕಳಿಚಂಡ, ವಾನಂಡ ಹಾಗೂ ಚೂರಿರ ಸೇರಿದಂತೆ ವಿವಿಧ ಒಕ್ಕದವರು ಒಗ್ಗೂಡಿ ಸಾಂಪ್ರದಾಯಿಕ ಕೈಲ್ ಪೋಲ್ದ್ ಆಚರಣೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.

ಬೆಳಿಗ್ಗೆ ಗ್ರಾಮದ ಮಂದ್‌ನಲ್ಲಿ ಎಲ್ಲ ಒಕ್ಕದವರು ಸೇರಿ ದೇವರನ್ನು ಕರೆದು, ಸಂಪ್ರದಾಯದಂತೆ ಕೋವಿಯಿಂದ ಗುಂಡು ಹಾರಿಸಿ, ಕುಟ್ಟಿಚಾತ ಅಂಬಲದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಎಲ್ಲಾ ಒಕ್ಕದವರು ತಮ್ಮ ತಮ್ಮ ಮನೆಗಳಿಗೆ ತೆರಳಿ ಕುಟುಂಬಸ್ಥರೊಂದಿಗೆ ಕನ್ನಿಕೊಂಬರೆಯಲ್ಲಿ ಕೋವಿಗೆ ತೊಕ್‌ಪೂ ಇಟ್ಟು, ಅದರೊಂದಿಗೆ ಒಡಿಕತ್ತಿಯನ್ನು ಇರಿಸಿ, ಗಂಧದ ಕುರಿ ಹಚ್ಚಿ ವಿಶೇಷ ಪೂಜೆ ಸಲ್ಲಿಸಿದರು.ನಂತರ ವಿವಿಧ ಬಗೆಯ ಸಾಂಪ್ರದಾಯಿಕ ಅಡುಗೆಗಳನ್ನು ಬಾಳೆ ಎಲೆಯಲ್ಲಿ ಗುರುವಿಗೆ ಎಡೆ ಇಟ್ಟು, ಕುಟುಂಬಸ್ಥರು ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನದ ಬಳಿಕ ತೆಂಗಿನಕಾಯಿಗೆ ಗುಂಡು ಹೊಡೆಯುವ ಸಾಂಪ್ರದಾಯಿಕ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಆಚರಣೆಯ ಮೂಲಕ ಕೊಡಗು ಹೆಗ್ಗಡೆ ಜನಾಂಗದ ಪಾರಂಪರಿಕ ಸಂಪ್ರದಾಯ, ನಂಬಿಕೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಪ್ರಯತ್ನ ನಡೆಯಿತು.

ಕುಟ್ಟಿಚಾತ ದೇವಸ್ಥಾನದ ಅಧ್ಯಕ್ಷ ಕೊರಕುಟ್ಟೀರ ರಾಜಪ್ಪ, ಪ್ರಮುಖರಾದ ಚಾರಿಮಂಡ ದಿನು ದೇವಯ್ಯ ಹಾಗೂ ಗ್ರಾಮಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಷ್ಟ್ರೀಯ ಸೇವಾ ಯೋಜನೆ ಘಟಕ ಉದ್ಘಾಟನೆ
ಹಾರಂಗಿ ಸಾಕಾನೆ ಶಿಬಿರ ಪ್ರವಾಸಿಗರಿಗೆ ಶೀಘ್ರ ಮುಕ್ತ