ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಕಾರ್ಯಾಗಾರದಲ್ಲಿ ಡಿಸಿಪಿ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ವಿಶೇಷ ಎನ್‌ಜಿಓ ಸನ್ನೆ ಭಾಷೆ ತಜ್ಞರು ಸನ್ನೆ ಭಾಷೆ, ಸನ್ನೆ ಭಾಷೆ ಸಂವಹನ ಕುರಿತು ಉಪನ್ಯಾಸ ನೀಡಿದರು.
ಸನ್ನೆ ಭಾಷೆಯಲ್ಲಿ ಸುದ್ದಿಗೋಷ್ಠಿ:ಇದಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರ ನಗರದ ವಿವಿಧ ಠಾಣೆಗಳ ಪೊಲೀಸರು ಪತ್ತೆ ಮಾಡಿದ ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ವಿಶೇಷ ಎನ್‌ಜಿಓದ ಸನ್ನೆ ಭಾಷೆ ತಜ್ಞೆ ಮೋಕ್ಷಾ ಅವರು ನಗರ ಪೊಲೀಸ್ ಆಯುಕ್ತರ ಮಾತುಗಳನ್ನು ಸನ್ನೆ ಭಾಷೆಯಲ್ಲೇ ವಿವರಿಸಿದರು.
ಈ ವೇಳೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಸನ್ನೆ ಭಾಷೆ ಕೂಡ ಒಂದು ಸಂವಹನ ಮಾಧ್ಯಮವಾಗಿದೆ. ಎಲ್ಲ ಮಾಹಿತಿ, ಸಂದೇಶ ಎಲ್ಲರಿಗೂ ತಲುಪಬೇಕು. ಈ ನಿಟ್ಟಿನಲ್ಲಿ ಅರ್ಥವಾಗುವ ಭಾಷೆಯಲ್ಲಿ ಸಂವಹನ ನಡೆಸಲು ಪ್ರಯತ್ನಿಸುತ್ತಿದ್ದೇವೆ. ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಎಲ್ಲ ಜನರ ಗುಣ-ಅವಗುಣಗಳ ನಡುವೆ ದೈಹಿಕ ವಿಶಿಷ್ಟತೆ, ಬಲ-ದುರ್ಬಲಗಳ ನಡುವೆ ನಾವು ಎಲ್ಲರ ರಕ್ಷಣೆಗೆ ಇದ್ದೇವೆ ಎಂಬ ಸಂದೇಶ ನೀಡಬೇಕು. ಈ ನಿಟ್ಟಿನಲ್ಲಿ ಡಿಸಿಪಿ ಮಟ್ಟದ ಅಧಿಕಾರಿಗಳಿಗೆ ಸನ್ನೆ ಭಾಷೆ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಸನ್ನೆ ಭಾಷೆ ಬಳಕೆ, ಸಂವಹನ, ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಹೇಳಿದರು.