ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಈ ಬಗ್ಗೆ ಮಾಹಿತಿ ನೀಡಿದ ಸದಸ್ಯರಾದ ಚಿನ್ನಯ್ಯ, ಓಬಯ್ಯ, ತಿಪ್ಪೇಸ್ವಾಮಿ, ಪಾರಿಜಾತ, ಸಣ್ಣಬೋರಮ್ಮ, ಕೆ.ಓಬಯ್ಯ, ಗೀತಮ್ಮ, ಬಾಲೇನಹಳ್ಳಿ ಓಬಯ್ಯ ಮುಂತಾದವರು ಈಗಾಗಲೇ ಕಟ್ಟಡ ನಿರ್ಮಾಣ ಕಾಮಗಾರಿಗೆ ಲಕ್ಷಾಂತರ ರುಪಾಯಿ ಹಣ ಪಡೆಯಲಾಗಿದೆ. ಆದರೆ, ಗುಣಮಟ್ಟದ ಕಾಮಗಾರಿ ಕಾಣುತ್ತಿಲ್ಲ. ಈ ಬಗ್ಗೆ ಪಂಚಾಯಿತಿ ಅಧಿಕಾರಿಯೂ ಗಮನಹರಿಸಿಲ್ಲ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟದ ಕಾಮಗಾರಿಗೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದ್ಧಾರೆ.
ಕಟ್ಟಡ ಕಾಮಗಾರಿ ಕಳಪೆಯಿಂದ ಕೂಡಿದೆ ಎಂಬ ಸದಸ್ಯರ ಆರೋಪದ ಬಗ್ಗೆ ಸ್ವಷ್ಟಣೆ ನೀಡಿದ ಪಿಡಿಒ ಇನಾಯಿತ್‌ಪಾಷ, ಇತ್ತೀಚೆಗೆ ನಡೆದ ಪಂಚಾಯಿತಿ ಸಭೆಯಲ್ಲಿ ಕಳಪೆ ಕಾಮಗಾರಿಯ ಬಗ್ಗೆ ಕೆಲವು ಸದಸ್ಯರು ಆರೋಪಿಸಿದಾಗ ಸ್ವಷ್ಟಣೆ ನೀಡಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸದಸ್ಯರ ಆರೋಪದ ಬಗ್ಗೆ ಮಾಹಿತಿ ನೀಡಿದ್ದು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಭರವಸೆ ನೀಡಿದ್ಧಾರೆ ಎಂದರು.---
ಪೋಟೋ: ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಕಳಪೆಯಾಗಿದೆ ಎಂದು ಆರೋಪಿಸಿದರು.೧೯ಸಿಎಲ್‌ಕೆ೩