ಕನ್ನಡಪ್ರಭ ವಾರ್ತೆ ಕುಣಿಗಲ್ ಕೇಂದ್ರ ಸರ್ಕಾರ ಮಹದೇವಯ್ಯ ಅವರನ್ನು ಹುದ್ದೆಯಿಂದ ವಜಾ ಮಾಡಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಗ್ರಾಮೀಣ ಅಂಚೆ ನೌಕರರ ಸಂಘದ ವಲಯ ಕಾರ್ಯಾಧ್ಯಕ್ಷ ರಾಜ್ ಕುಮಾರ್ ತಿಳಿಸಿದ್ದಾರೆ ಕುಣಿಗಲ್ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆದಿದ್ದ ಪ್ರತಿಭಟನಾ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು ಕೇಂದ್ರ ಸರ್ಕಾರ ಎಸ್ಎಸ್ ಮಹದೇವಯ್ಯ ಅವರನ್ನು ವಜಾ ಮಾಡಿರುವುದು ಖಂಡನೀಯ ವಿಚಾರ ಕಾರ್ಮಿಕರ ಮುಖಂಡರು ಕಾರ್ಮಿಕರ ಪರವಾಗಿ ಮಾತನಾಡುವ ಅನಿವಾರ್ಯತೆ ಇದೆ ಅದಕ್ಕಾಗಿ ಅವರನ್ನು ವಜಾ ಮಾಡುವುದು ಸರಿಯಲ್ಲ ಎಂದರು. ಅವರನ್ನು ಪುನಃ ಸರ್ಕಾರಿ ಹುದ್ದೆಗೆ ತೆಗೆದುಕೊಳ್ಳಬೇಕು ಎಂದು ಮರುತನಿಖೆಗೆ ಒತ್ತಾಯಿಸಿದರು .
ಬೆಂಗಳೂರಿನ ಮೂಲದ ಎಸ್ ಎಸ್ ಮಹದೇವಯ್ಯ ಕೇಂದ್ರ ಕಚೇರಿಯಲ್ಲಿ ಹಾಗೂ ಅಂಚೆ ನೌಕರರ ಸಂಘಟನೆಯ ಎಐಜಿಡಿಎಸ್ ಯು ನ ಜನರಲ್ ಸೆಕ್ರೆಟರಿ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಅನ್ಯಾಯ ಆಗಿದೆ ಪ್ರತಿಯೊಬ್ಬ ಕನ್ನಡಿಗರು ಕೂಡ ಇದಕ್ಕೆ ಕೈ ಜೋಡಿಸಬೇಕು ಕಾರ್ಮಿಕರು ಅಂಚೆ ನೌಕರರು ಸಹಕಾರ ಬಹು ಮುಖ್ಯ ಎಂದರು. ಈ ಸಂದರ್ಭದಲ್ಲಿ ವಲಯ ರಾಜ್ಯಾಧ್ಯಕ್ಷರಾದ ಆರ್ ಭೈರಪ್ಪ. ಪೋಸ್ಟ್ ಮ್ಯಾನ್ ವಲಯ ಹಲವಾರು ಗ್ರಾಮೀಣ ಅಂಚೆ ನೌಕರರು ಇದ್ದರು.