ಪವರ್​ ಬಿಲ್ ಮೊತ್ತ 236 ಕೋಟಿ ರು. ಪಾವತಿ

KannadaprabhaNewsNetwork |  
Published : Jul 11, 2025, 01:47 AM IST
4.ಗೃಹ ಜ್ಯೋತಿ ಲೋಗೋ | Kannada Prabha

ಸಾರಾಂಶ

ರಾಮನಗರ: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲೊಂದಾದ ಗೃಹಜ್ಯೋತಿ ಯೋಜನೆ ಅಡಿ ಜಿಲ್ಲೆಯಲ್ಲಿ 3.26 ಲಕ್ಷ ಕುಟುಂಬಗಳು ಉಚಿತ ವಿದ್ಯುತ್ ಬಳಕೆ ಮಾಡಿದ್ದು, ಇದರ ಮೊತ್ತ 236 ಕೋಟಿ ರುಪಾಯಿಗಳಾಗಿದೆ. 2023ರ ಆಗಸ್ಟ್‌ನಿಂದ 2025ರ ಏಪ್ರಿಲ್‌ವರೆಗೆ ಅಂದರೆ 21 ತಿಂಗಳ ಅವಧಿಯಲ್ಲಿ 3,26,063 ಬಡ ಕುಟುಂಬಗಳು ವಿದ್ಯುತ್ ಬಿಲ್‌ನ ಹೊರೆಯಿಂದ ಮುಕ್ತಿ ಹೊಂದಿವೆ.

ರಾಮನಗರ: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲೊಂದಾದ ಗೃಹಜ್ಯೋತಿ ಯೋಜನೆ ಅಡಿ ಜಿಲ್ಲೆಯಲ್ಲಿ 3.26 ಲಕ್ಷ ಕುಟುಂಬಗಳು ಉಚಿತ ವಿದ್ಯುತ್ ಬಳಕೆ ಮಾಡಿದ್ದು, ಇದರ ಮೊತ್ತ 236 ಕೋಟಿ ರುಪಾಯಿಗಳಾಗಿದೆ. 2023ರ ಆಗಸ್ಟ್‌ನಿಂದ 2025ರ ಏಪ್ರಿಲ್‌ವರೆಗೆ ಅಂದರೆ 21 ತಿಂಗಳ ಅವಧಿಯಲ್ಲಿ 3,26,063 ಬಡ ಕುಟುಂಬಗಳು ವಿದ್ಯುತ್ ಬಿಲ್‌ನ ಹೊರೆಯಿಂದ ಮುಕ್ತಿ ಹೊಂದಿವೆ.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಗೃಹ ಜ್ಯೋತಿ ಪ್ರಮುಖ ಗ್ಯಾರಂಟಿ ಯೋಜನೆಯಾಗಿದೆ. 200 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಈ ಯೋಜನೆ 2023ರ ಆಗಸ್ಟ್​ನಿಂದ ಜಾರಿಯಾಗಿದೆ. ಆ ತಿಂಗಳಿನಿಂದಲೇ ಬಿಲ್​ಗಳನ್ನು ಗೃಹ ಜ್ಯೋತಿಯಡಿ ನೀಡಲಾಗುತ್ತಿದೆ.

ಮೊದಲ ವರ್ಷ 136 ಕೋಟಿ ಪಾವತಿ:

ಜಿಲ್ಲೆಯ 5 ತಾಲೂಕುಗಳಲ್ಲಿ ಗೃಹಜ್ಯೋತಿ ಯೋಜನೆ ಅಡಿ 3,26,063 ಕುಟುಂಬಗಳು ಅರ್ಹ ಫಲಾನುಭವಿ ಕುಟುಂಬಗಳಾಗಿದ್ದು, ಸರಾಸರಿ 16.62ರಷ್ಟು ಮಿಲಿಯನ್ ಯೂನಿಟ್ ಗಳನ್ನು ಬಳಕೆ ಮಾಡಿದ್ದಾರೆ. ಇದರ ಸಹಾಯ ಧನದ ಸರಾಸರಿ ಮೊತ್ತ 12.74 ಕೋಟಿ ರುಪಾಯಿಗಳಾಗಿದೆ.

ಜಿಲ್ಲೆಯಲ್ಲಿ ಅತಿ ಹೆಚ್ಚು ರಾಮನಗರ ತಾಲೂಕಿನಲ್ಲಿ 88,279 ಫಲಾನುಭವಿ ಕುಟುಂಬಗಳಿದ್ದು, ವಿದ್ಯುತ್ ಸಹಾಯ ಧನದ ಮೊತ್ತ 75.2 ಕೋಟಿ ರುಪಾಯಿ ಪಾವತಿಯಾಗಿದ್ದರೆ, ಅತಿ ಕಡಿಮೆ ಹಾರೋಹಳ್ಳಿ ತಾಲೂಕಿನಲ್ಲಿ 25,923 ಫಲಾನುಭವಿ ಕುಟುಂಬಗಳ ಶೂನ್ಯ ಬಿಲ್ ಮೊತ್ತ 19.26 ಕೋಟಿ ರುಪಾಯಿ ಪಾವತಿ ಮಾಡಲಾಗಿದೆ.

ಉಳಿದಂತೆ ಚನ್ನಪಟ್ಟಣ ತಾಲೂಕಿನಲ್ಲಿ 74,080 ಕುಟುಂಬಗಳ ವಿದ್ಯುತ್ ಸಹಾಯ ಧನ 53.91 ಕೋಟಿ, ಕನಕಪುರ ತಾಲೂಕಿನಲ್ಲಿ 84,275 ಕುಟುಂಬಗಳ ಶೂನ್ಯ ಬಿಲ್ ದರ 55.23 ಕೋಟಿ ಹಾಗೂ ಮಾಗಡಿ ತಾಲೂಕಿನಲ್ಲಿ 53,506 ಕುಟುಂಬಗಳ ಶೂನ್ಯ ವಿದ್ಯುತ್ ಬಿಲ್ ನ ಮೊತ್ತ 32.43 ಕೋಟಿ ರುಪಾಯಿಗಳನ್ನು ರಾಜ್ಯ ಸರ್ಕಾರ ಬೆಸ್ಕಾಂಗೆ ಭರಿಸಿದೆ.

ಬಾಕ್ಸ್‌................

ಗೃಹ ಜ್ಯೋತಿ ಯೋಜನೆ ವಿವರ (2025ರ ಏಪ್ರಿಲ್)

ತಾಲೂಕುನೊಂದಾಯಿತ ಗ್ರಾಹಕರುಸರಾಸರಿ ಮಿಲಿಯನ್ ಯೂನಿಟ್‌ಗಳುಸಹಾಯದಧನದ ಸರಾಸರಿ ಮೊತ್ತ ಪಾವತಿಯಾದ ಮೊತ್ತ (ಕೋಟಿ ರು.ಗಳಲ್ಲಿ)

ರಾಮನಗರ88,2795.333.9175.2

ಚನ್ನಪಟ್ಟಣ74,0804.122.6853.91

ಕನಕಪುರ84,2753.543.1755.23

ಹಾರೋಹಳ್ಳಿ25,9231.101.0419.26

ಮಾಗಡಿ53,502.171.9432.43

ಒಟ್ಟು3,26,06316.2612.74236.03

ಕೋಟ್ ...............

ಗೃಹಜ್ಯೋತಿಯು 2ನೇ ವರ್ಷ ಪೂರೈಸುವತ್ತಾ ಹೆಜ್ಜೆ ಇಟ್ಟಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಗೃಹ ಜ್ಯೋತಿ ಯೋಜನೆ ಸಮರ್ಪಕವಾಗಿ ಜಾರಿಯಾಗಿದ್ದು, ಪ್ರತಿ ಮನೆಗೆ 200 ಯೂನಿಟ್‌ ವಿದ್ಯುತ್‌ ಉಚಿತವಾಗಿ ನೀಡುವ ಈ ಯೋಜನೆಯು ಬಡವರ ಮನೆಗೆ ನೆಮ್ಮದಿಯ ಬೆಳಕಾಗಿದೆ. 3.26 ಲಕ್ಷ ಕುಟುಂಬಗಳು ವಿದ್ಯುತ್‌ ಬಿಲ್‌ ಹೊರೆಯಿಂದ ಮುಕ್ತರಾಗಿದ್ದಾರೆ.

- ಕೆ.ರಾಜು, ಜಿಲ್ಲಾಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ

9ಕೆಆರ್ ಎಂಎನ್ 4,5.ಜೆಪಿಜಿ

4.ಗೃಹ ಜ್ಯೋತಿ ಲೋಗೋ

5. ಕೆ.ರಾಜು, ಜಿಲ್ಲಾಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಬೆಂಗಳೂರು ದಕ್ಷಿಣ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ