ವಿದ್ಯುತ್ ವಿತರಣೆಯನ್ನು ಖಾಸಗಿಕರಣ ಮಾಡುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ದ.ಕ. ಜಿಲ್ಲಾ ಘಟಕದ ವತಿಯಿಂದ ಬುಧವಾರ ಪುತ್ತೂರು ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪುತ್ತೂರು: ವಿದ್ಯುತ್ ವಿತರಣೆಯನ್ನು ಖಾಸಗಿಕರಣ ಮಾಡುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ದ.ಕ. ಜಿಲ್ಲಾ ಘಟಕದ ವತಿಯಿಂದ ಬುಧವಾರ ಪುತ್ತೂರು ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ರಾಜ್ಯ ಸರ್ಕಾರ ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸಿ ಟಾಟಾ ಕಂಪನಿಗೆ ನೀಡಲು ಮುಂದಾಗಿದೆ. ಇಂದರಿಂದ ಜನತೆ ಸಂಕಷ್ಟ ಅನುಭವಿಸಲಿದ್ದಾರೆ. ರೈತರು, ಕೈಗಾರಿಕೆಗಳಿಗೆ, ಗ್ರಾಹಕರಿಗೆ, ನೌಕರರ ಭವಿಷ್ಯಕ್ಕೆ ಅಪಾಯವಿದೆ. ಗೃಹಜ್ಯೋತಿ, ಬಾಗ್ಯಜ್ಯೋತಿ, ಗಂಗಾ ಕಲ್ಯಾಣ, ಸಣ್ಣ ಕೈಗಾರಿಕೆಗಳಿಗೆ ನೀಡುವ ಸಬ್ಸಿಡಿ ರದ್ದಾಗಲಿದೆ. ವಿದ್ಯುತ್ ದರ ಏರಿಕೆ ಮಾಡಿ ಆರ್ಥಿಕ ಹೊಡೆತ ಉಂಟಾಗಲಿದೆ. ಖಾಸಗೀಕರಣದಿಂದ ಸರ್ಕಾರಕ್ಕೆ ಕಂಪನಿ ಮೇಲೆ ಯಾವುದೇ ಹಿಡಿತವಿಲ್ಲದೆ ಜನರಿಗೆ ಸಮಸ್ಯೆ ಎದುರಿಸಬೇಕಾಗಬಹುದು. ಈ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣಕ್ಕೆ ಅವಕಾಶ ನೀಡದಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.
ರೈತರ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಪುಣಚ, ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಗೌಡ, ಗೌರವ ಸಲಹೆಗಾರ ಮಹಾಬಲ ಭಟ್, ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ, ರೈತ ಸಂಘದ ಮುಖಂಡರಾದ ಶಿವಣ್ಣ ಗೌಡ ಇಡ್ಯಾಡಿ, ರಾಜೇಂದ್ರ ಇಡ್ಯಾಡಿ, ಶೇಖರ ರೈ ಕುಂಬ್ರ, ಶಿವಚಂದ್ರ ಈಶ್ವರಮಂಗಲ, ರಾಮಕೃಷ್ಣ ಅಡ್ಯಂತಾಯ, ಹರ್ಷಕುಮಾರ್ ಹೆಗ್ಡೆ, ಇಬ್ರಾಹಿಂ, ಇದಿನಬ್ಬ, ಸುದೀಶ್ ಶೆಟ್ಟಿ, ರಾಜೀವ ಗೌಡ, ಹರಿಣಾಕ್ಷಿ, ಗೀತಾ, ಗುಮ್ಮಣ್ಣ ಗೌಡ ನೆಲ್ಯಾಡಿ, ರಾಮಣ್ಣ ಶೆಟ್ಟಿ ಪಾಲಿಗೆ, ಕುಶಾಲಪ್ಪ ಗೌಡ ಪಂಜ, ಕೃಷ್ಣಪ್ಪ ಗೌಡ ಸಹಿತ ಹಲವು ಮಂದಿ ರೈತರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.