ಶಿಕ್ಷಣ ಕೇವಲ ಜ್ಞಾನ, ತಂತ್ರಜ್ಞಾನಗಳ ಆಗರವಾಗದೇ ಮಾನವೀಯ ಮೌಲ್ಯಗಳನ್ನೊಳಗೊಂಡ ಸಂಸ್ಕಾರಯುತ ಶಿಕ್ಷಣ ಪ್ರಸ್ತುತ ದಿನದಲ್ಲಿ ಅತ್ಯವಶ್ಯಕ ಎಂದು ಶಾಲಾ ನಿರ್ವಹಣಾ ಪೋಷಕರ ಸಮಿತಿ (ಎಸ್‌ಎಂಸಿ)ಯ ಅಧ್ಯಕ್ಷ ಡಾ.ಸಂತೋಷ ಎಲ್.ಮಗದುಮ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಶಿಕ್ಷಣ ಕೇವಲ ಜ್ಞಾನ, ತಂತ್ರಜ್ಞಾನಗಳ ಆಗರವಾಗದೇ ಮಾನವೀಯ ಮೌಲ್ಯಗಳನ್ನೊಳಗೊಂಡ ಸಂಸ್ಕಾರಯುತ ಶಿಕ್ಷಣ ಪ್ರಸ್ತುತ ದಿನದಲ್ಲಿ ಅತ್ಯವಶ್ಯಕ ಎಂದು ಶಾಲಾ ನಿರ್ವಹಣಾ ಪೋಷಕರ ಸಮಿತಿ (ಎಸ್‌ಎಂಸಿ)ಯ ಅಧ್ಯಕ್ಷ ಡಾ.ಸಂತೋಷ ಎಲ್.ಮಗದುಮ ಹೇಳಿದರು.

ನಗರದ ಬೆನಕನಹಳ್ಳಿಯಲ್ಲಿರುವ ಸತ್ ಸಂಸ್ಕಾರ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಶನಿವಾರ ನಡೆದ ಶಾಲಾ ನಿರ್ವಹಣಾ ಪೋಷಕರ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಶಾಲಾ ವಾತಾವರಣ ಚೆನ್ನಾಗಿರುವಂತೆ ರೂಪಿಸಲು ಕೇವಲ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಮಾತ್ರ ಜವಾಬ್ದಾರಿಯಲ್ಲ, ಪಾಲಕರಾದ ನಮ್ಮೆಲ್ಲ ಕರ್ತವ್ಯಗಳು ಇರುತ್ತವೆ. ಶಾಲೆಯ ನಿಯಮಗಳಿಗೆ ಅನುಗುಣವಾಗಿ ನಮ್ಮಲ್ಲಿಯೂ ಹಲವು ಬದಲಾವಣೆ ಮಾಡಿಕೊಳ್ಳುವ ಮೂಲಕ ಮಕ್ಕಳ ಹಾಗೂ ಶಾಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಹಾಗೂ ಕರ್ತವ್ಯ ಎಂದು ವಿವರಿಸಿದರು.ಶಾಲೆಯ ಪ್ರಾಂಶುಪಾಲರಾದ ಶ್ರುತಿ ಅಭಿಜೀತ ಮಹಾಜನ ಮಾತನಾಡಿ, ಮಕ್ಕಳ ಸರ್ವೋತೋಮುಖ ಬೆಳವಣಿಗೆ ಶಾಲಾ ವಾತಾವರಣ ಪೂರವಾಗಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಶಾಲೆಯ ಪ್ರಗತಿಗೆ ಶಿಕ್ಷಕ ವೃಂದ ಹೆಚ್ಚು ಶ್ರಮಿಸುತ್ತಿದೆ. ಇದು ಮುಂದುವರೆಸಿಕೊಂಡು ಹೋಗಲು ಪಾಲಕರ ಸಹಕಾರ, ಸಹಾಯ ಇರಲಿ ಎಂದು ಕೋರಿದರು.ಉಪ ಪ್ರಾಂಶುಪಾಲರಾದ ಗೀತಾ ಜೈನ್ ಮಾತನಾಡಿ, ಶಾಲೆಯ ಬೆಳೆದು ಬಂದ ಹಾದಿ ಹಾಗೂ ಮುಂದಿನ ದಿನಗಳಲ್ಲಿನ ಹಲವು ಬದಲಾವಣೆಗಳೊಂದಿಗೆ ಸಂಸ್ಥೆಯ ಬೆಳವಣಿಗೆಯ ಜತೆಗೆ ಶೈಕ್ಷಣಿಕ ಸಾಧನೆಗೆ ಪೂರಕವಾಗುವ ವಾತಾವರಣ ನಿರ್ಮಾಣಕ್ಕೆ ಕೈಗೊಳ್ಳುವ ಕ್ರಮಗಳ ಕುರಿತು ವಿಸ್ತೃತವಾಗಿ ವಿವರಿಸಿದರು.ಎಸ್‌ಎಂಸಿ ಪೋಷಕರ ಉಪಾಧ್ಯಕ್ಷೆ ಹಾಗೂ ಇಂಜನಿಯರ್‌ ದೀಪಾ ಸಹಜಸಿಂಗ್ ಮೊಕಾಶಿ, ಎಸ್‌ಎಂಸಿ ಪೋಷಕರ ಸದಸ್ಯರಾದ ಡಾ.ರಘುರಾಜ್ ರಾವ್‌, ಪ್ರಾಧ್ಯಾಪಕಿ ಪಲ್ಲವಿ ಶ್ರೀಧರ ಜಲಗೇಕರ, ಶಿಕ್ಷಕ ರಮೇಶ ಕಾಂಬಳೆ, ಶಿಕ್ಷಕಿ ಸವಿತಾ ಮಹೇಶ ಡೊಂಗರೆ, ನಿರ್ಮಲಾ ಬಾಳಪ್ಪ ದಾವಣಿ, ಬಾಲು ಹಣಮಂತ್ ದೇಸುರ್ಕರ, ವಸಂತರಾವ್ ಪೋತದಾರ, ಮಿನಲ ವಿಶಾಲ ಚವಾಣ, ನಾಮನಿರ್ದೇಶಿತ ಸದಸ್ಯರಾದ, ವಕೀಲ ಅರವಿಂದ ದೇವೇಂದ್ರ ಉಪಾಧ್ಯೆ, ಶಿಕ್ಷಕಿ ದಾನೇಶ್ವರಿ ಅವಿನಾಶ ಕೆಂಗಲಗುತ್ತಿ ಉಪಸ್ಥಿತರಿದ್ದರು.ಇಂದಿನ ಮಕ್ಕಳಿಗೆ ಶಿಕ್ಷಣವನ್ನು ಪ್ರಾಯೋಗಿಕವಾಗಿ ಕಲಿಸುವ ಜತೆ ಜತೆಗೆ ಭಾಷಾ ವೈವಿಧ್ಯತೆಯ ವಿಶೇಷತೆಗಳನ್ನು ಕಲಿಸುವ ಅನಿವಾರ್ಯತೆ ಹೆಚ್ಚಾಗಿದೆ. ಭಾಷೆಯಲ್ಲಿನ ಪದಗಳ ಉಚ್ಚಾರ ಹಾಗೂ ಅದರಲ್ಲಿರುವ ಧ್ವನಿ ಏರಿಳಿತದ ಭಾವಗಳ ಆಳ ಜ್ಞಾನ ಕಲಿಸಬೇಕಾಗಿದೆ. ಮಕ್ಕಳಿಗೆ ಹೆಚ್ಚೆಚ್ಚು ಓದುವ ಹವ್ಯಾಸಗಳನ್ನು ರೂಢಿಗತ ಮಾಡಿಸಬೇಕಾಗಿದೆ. ಇದರೊಂದಿಗೆ ಶಿಕ್ಷಕರು ಹೆಚ್ಚೆಚ್ಚು ಉತ್ಸಾಹಿಗಳಾಗಿ ಮಕ್ಕಳೊಂದಿಗೆ ಬೆರೆತು ಶೈಕ್ಷಣಿಕ ಸಾಧನೆಗೆ ಕೈ ಜೋಡಿಸಬೇಕು.

-ಡಾ.ಸಂತೋಷ ಎಲ್.ಮಗದುಮ, ಅಧ್ಯಕ್ಷರು, ಶಾಲಾ ನಿರ್ವಹಣಾ ಪೋಷಕ ಸಮಿತಿ (SMC) ಬೆನಕನಹಳ್ಳಿ. ಕೇವಲ ಶಿಕ್ಷಣ ಕಲಿಸುವುದರಿಂದ ಮಾತ್ರ ಮಕ್ಕಳ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಲು ಸಾಧ್ಯವಿಲ್ಲ. ಸಂಸ್ಕಾರಯುತ ಶಿಕ್ಷಣದ ಮೂಲಕ ನಮ್ಮ ಮಕ್ಕಳನ್ನು ಬೆಳೆಸಬೇಕು. ಗುರು ಪರಂಪರೆ ಹಾಗೂ ಗುರುಕುಲ ಮಾದರಿಯ ಆಧುನಿಕತೆಯಲ್ಲಿ ರಾಷ್ಟ್ರ ನಿರ್ಮಾಣ ಮಾಡಬೇಕಾಗಿದೆ.

-ಶ್ರುತಿ ಅಭಿಜೀತ ಮಹಾಜನ,

ಪ್ರಾಂಶುಪಾಲರು, ಸತ್‌ ಸಂಸ್ಕಾರ ಅಂತಾರಾಷ್ಟ್ರೀಯ ಶಾಲೆ ಬೆನಕನಹಳ್ಳಿ.ಪಾಲಕರ ಸಹಕಾರವಿದ್ದರೇ ಶಾಲೆಯ ಧ್ಯೇಯೋದ್ದೇಶಗಳೊಂದಿಗೆ ಶೈಕ್ಷಣಿಕ ಸಾಧನೆ ಹಾಗೂ ಗುರಿ ಸಾಧಿಸುವುದು ತುಂಬಾ ಸರಳ. ಅಂತಹ ವಾತಾವರಣ ಶಾಲೆಯಲ್ಲಿ ನಿರ್ಮಿಸಲು ಪಾಲಕರು ಶಾಲಾ ಆಡಳಿತ ಮಂಡಳಿಯೊಂದಿಗೆ ಕೈ ಜೋಡಿಸಿ ಮಕ್ಕಳ ಶ್ರೇಯೋಭಿವೃದ್ಧಿಗೆ ಒಗ್ಗಾಟ್ಟಾಗಿ ಶ್ರಮಿಸೋಣ.

-ಗೀತಾ ಜೈನ್, ಉಪ ಪ್ರಾಂಶುಪಾಲರು, ಸತ್ ಸಂಸ್ಕಾರ್ ಅಂತಾರಾಷ್ಟ್ರೀಯ ಶಾಲೆ ಬೆನಕನಹಳ್ಳಿ.