ತಾಳಿಕೋಟೆ ಪಟ್ಟಣದ ರಾಜವಾಡೆಯಲ್ಲಿರುವ ಪುರಾತನ ಭಾವಿಯಾದ ಭೀಮನಬಾವಿಯನ್ನು ಪುರಸಭೆ ವತಿಯಿಂದ ಶನಿವಾರ ಸ್ವಚ್ಛತೆ ಕಾರ್ಯ ಆರಂಭಿಸಲಾಯಿತು.
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಪಟ್ಟಣದ ರಾಜವಾಡೆಯಲ್ಲಿರುವ ಪುರಾತನ ಭಾವಿಯಾದ ಭೀಮನಬಾವಿಯನ್ನು ಪುರಸಭೆ ವತಿಯಿಂದ ಶನಿವಾರ ಸ್ವಚ್ಛತೆ ಕಾರ್ಯ ಆರಂಭಿಸಲಾಯಿತು.ತಾಳಿಕೋಟೆ ಪಟ್ಟಣದಲ್ಲಿ ಜು.೧೭ರಿಂದ ಪ್ರಾರಂಭಗೊಳ್ಳಲಿರುವ ಗ್ರಾಮದೇವತೆ ದ್ಯಾವವ್ವದೇವಿಯ ಜಾತ್ರಾ ಮಹೋತ್ಸವ ಹಾಗೂ ಜು.೧೯ ರಿಂದ ಪ್ರಾರಂಭಗೊಳ್ಳಲಿರುವ ಖಾಸ್ಗತೇಶ್ವರ ಜಾತ್ರಾ ಮಹೋತ್ಸವದಲ್ಲಿ ಇದೇ ಪುರಾತನ ಭೀಮನಬಾವಿಯಲ್ಲಿ ಗಂಗಸ್ಥಳ ಹಾಗೂ ವಿವಿಧ ಪೂಜಾ ಕಾರ್ಯಕ್ರಮ ನೆರವೇರುವುದರಿಂದ ಈ ಪುರಾತನ ಭೀಮನಭಾವಿಯನ್ನು ಸ್ವಚ್ಛತೆ ಕೈಗೊಳ್ಳಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ ತಿಳಿಸಿದರು.
ಬಾವಿಯಲ್ಲಿ ಬಿದ್ದ ಕಲ್ಲು, ಮಣ್ಣು, ಚಿಪ್ಪು ಅಲ್ಲದೇ ಬೆಳೆದ ಮುಲ್ಳಿನ ಗಿಡಗಂಟಿಗಳನ್ನು ಕತ್ತಿರಿಸಲಾಗಿದೆ. ಭಾವಿಯಲ್ಲಿಯ ನೀರಿನ ಸ್ವಚ್ಛತೆಗೆ ಬ್ಲೀಚಿಂಗ್ ಪೌಂಡರ್ ಬಳಿಸಿ ಭಾವಿಗೆ ಗಂಗಸ್ಥಳಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಅದರಂತೆ ರಾಜವಾಡೆಯಲ್ಲಿ ಕೆಲವೆಡೆ ನೀರು ನಿಂತುಕೊಳ್ಳುವುದನ್ನು ತಡೆಯಲು ಸಿಮೆಂಟ್ ಕಾಂಕ್ರೀಟ್‌ನಿಂದ ನೀರು ಚರಂಡಿಗೆ ಹರಿದು ಹೊಗುವಂತೆ, ಚರಂಡಿಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಮೆರವಣಿಗೆಯ ದಾರಿಯುದ್ದಕ್ಕೂ ರಸ್ತೆ ಚರಂಡಿ ದುರಸ್ತಿಯ ಜೊತೆಗೆ ಹೆಚ್ಚಿನ ರೀತಿಯಲ್ಲಿ ಸ್ವಚ್ಛತೆಗೆ ಸಿಬ್ಬಂದಿ ನಿಯೋಜಿಸುವ ಕುರಿತು ತಯಾರಿ ಮಾಡಿಕೊಳ್ಳಲಾಗಿದೆ. ಈ ಬಾರಿ ಗ್ರಾಮದೇವತೆ ಹಾಗೂ ಖಾಸ್ಗತೇಶ್ವರ ಜಾತ್ರೋತ್ಸವ ಒಟ್ಟಿಗೆ ಬಂದಿರುವುದರಿಂದ ಸುಮಾರು ೧೫ ದಿನಗಳ ಕಾಲ ಜಾತ್ರಾ ವೈಭವ ಪಟ್ಟಣದಲ್ಲಿ ಇರುವದರಿಂದ ಜಾತ್ರೋತ್ಸವದಲ್ಲಿ ಲಕ್ಷಾಂತರ ಜನರು ಆಗಮಿಸುತ್ತಾರೆ. ಹೀಗಾಗಿ ಪಟ್ಟಣದ ಸಂದರ್ಯಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ ತಿಳಿಸಿದರು.ಈ ಸಮಯದಲ್ಲಿ ಪುರಸಭೆ ಆರೋಗ್ಯ ನಿರಕ್ಷಕರಾದ ಫೀರೋಜ ಮುಲ್ಲಾ, ಶಿವಾನಂದ ಜುಮನಾಳ, ಸಿದ್ದು ಕೊಳ್ಳಿ, ಮೊದಲಾದವರು ಇದ್ದರು.