ಕನ್ನಡಪ್ರಭ ವಾರ್ತೆ ಹಾಸನ
ನಗರದ ಅಂಬೇಡ್ಕರ್ ಭವನದಲ್ಲಿ ಆ.3 ಮತ್ತು 4ರಂದು ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಸೀನಿಯರ್ ಪುರುಷರ ಮತ್ತು ಮಹಿಳೆಯರ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಹಮ್ಮಿಕೊಂಡಿರುವುದಾಗಿ ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ಶಿಕ್ಷಕ ಹನುಮಂತೇಗೌಡ ತಿಳಿಸಿದರು.ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್, ಜಿಲ್ಲಾ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಜಂಟಿಯಾಗಿ ಹಮ್ಮಿಕೊಂಡ ಸೀನಿಯರ್ ಪುರುಷ ಹಾಗೂ ಮಹಿಳೆಯರ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ - 2024-25 ಮೊದಲ ಬಾರಿಗೆ ಹಾಸನ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಹೇಳಿದರು.
ಎಂಟು ವಿಭಾಗದಲ್ಲಿ ತೂಕದ ಮೂಲಕ ಸ್ಪರ್ಧೆ ಆಯೋಜಿಸಲಾಗಿದೆ. ಈ ವೇಳೆ ರಾಷ್ಟ್ರಮಟ್ಟಕ್ಕೆ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ ಮಾಡಲಾಗುವುದು. ರಾಜ್ಯದ ಸ್ಟ್ರಾಂಗ್ ಮೆನ್ ಮತ್ತು ವುಮೆನ್ ಹಾಗೂ ಆಕರ್ಷಕ ಟ್ರೋಫಿ ಪದಕಗಳ ವಿತರಣೆ ಮಾಡಲಾಗುವುದು ಎಂದರು. ಆ.3 ಮತ್ತು 4ರಂದು ಎರಡು ದಿನಗಳ ಕಾಲ ನಡೆಯುವ ಸ್ಪರ್ಧೆಗೆ ರಾಜ್ಯದ ಮೂಲೆ ಮೂಲೆಯಿಂದ ಸುಮಾರು 300 ಕ್ರೀಡಾ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ತೀರ್ಪುಗಾರರಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಿಂದ 15 ಜನರು ಬರಲಿದ್ದಾರೆ. ಮುಖ್ಯವಾಗಿ ಮಂಗಳೂರಿನ ಪವರ್ ಲಿಫ್ಟಿಂಗ್ ಇಂಡಿಯಾ ಅಧ್ಯಕ್ಷ ಸತೀಶ್ ಕುಮಾರ್ ಕುದ್ರೋಳಿ ಪಾಲ್ಗೊಳ್ಳುವರು. ಹೆಚ್ಚಿನ ಮಾಹಿತಿಗಾಗಿ 9483467084 ಹಾಗೂ 9964182654 ಸಂಪರ್ಕಿಸಬಹುದು ಎಂದು ಹೇಳಿದರು.ನಾನು ಕೂಡ ಆಕಸ್ಮಿಕವಾಗಿ ಪವರ್ ಲಿಫ್ಟಿಂಗ್ ಕ್ರೀಡೆಗೆ ಬಂದಿದ್ದೇನೆ. ಈಗ ಸಂಸ್ಥೆಯನ್ನು ಸದೃಢವಾಗಿ ಕಟ್ಟಲಾಗಿದೆ. ನಾನು ಕಳೆದ ಎರಡು ವರ್ಷಗಳಿಂದ ಉಚಿತವಾಗಿ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ಮಕ್ಕಳಿಗೆ ತರಬೇತಿ ಕೊಡಲಾಗುತ್ತಿದೆ. ಈ ಹಿಂದೆ ನಾನು ಕೂಡ ಗೋಲ್ಡ್ ಮೆಡಲ್ ಪಡೆದಿದ್ದು, ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಸ್ಪರ್ದೆಗೆ ಶುಕ್ರವಾರದಂದು ರಾತ್ರಿ ಮಧ್ಯಪ್ರದೇಶಕ್ಕೆ ನಾವು ಕೂಡ ಪ್ರಯಣ ಬೆಳೆಸಲಾಗುತ್ತಿದ್ದು, ಜು.21 ರಿಂದ ಕ್ರೀಡೆ ಆರಂಭವಾಗಲಿದೆ. ಹಿಂದೆ ಬೆಂಗಳೂರಿನಲ್ಲಿ ನಡೆದ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಶಿವಣ್ಣರವರು ಕೂಡ ಗೋಲ್ಡ್ ಮೆಡಲ್ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಕಳೆದ ವರ್ಷ ನಮಗೆ ಬೇಕಾದ ಪವರ್ ಲಿಫ್ಟಿಂಗ್ ಪರಿಕರವನ್ನು ಮಾಜಿ ಶಾಸಕ ಪ್ರೀತಂಗೌಡರು ಕೊಡಿಸಿದ್ದು, ಆ ಮೂಲಕ ಪ್ರಾರಂಭ ಮಾಡಲಾಗಿದೆ. ಇದಾದ ನಂತರ ಹಾಲಿ ಶಾಸಕ ಎಚ್.ಪಿ. ಸ್ವರೂಪ್ ಕೂಡ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ಜಾಗವನ್ನು ಕೊಡಿಸಿದ್ದಾರೆ. ಉಚಿತವಾಗಿ ತರಬೇತಿಯನ್ನು ಕೊಡಲಾಗುತ್ತಿದೆ ಎಂದರು.ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ ಮಾತನಾಡಿ, ಆ.3ರಿಂದ ಎರಡು ದಿನಗಳ ಕಾಲ ಅಂಬೇಡ್ಕರ್ ಭವನದಲ್ಲಿ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆ ಏರ್ಪಡಿಸಲಾಗಿದೆ. ಇದೊಂದು ಉತ್ತಮ ಕ್ರೀಡೆಯಾಗಿದ್ದು, ರಾಜ್ಯ ಮಟ್ಟದಿಂದ ಸ್ಪರ್ಧಾಳುಗಳು ಆಗಮಿಸಲಿದ್ದಾರೆ ಎಂದರು.
ಜಿಲ್ಲಾ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿ ಮೋಹನ್ ಕುಮಾರ್, ಸದಸ್ಯ ನಿರಂಜನ್, ನಿರ್ದೇಶಕ ವೇಣುಗೋಪಾಲ್, ಧರ್ಮ, ಕೆಎಸ್‌ಆರ್‌ಟಿಸಿ ಶಿವಸ್ವಾಮಿ ಇದ್ದರು.ಫೋಟೋ: ಹಾಸನದಲ್ಲಿ ಹಮ್ಮಿಕೊಂಡ ಸೀನಿಯರ್ ಪುರುಷ ಹಾಗೂ ಮಹಿಳೆಯರ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಬಗ್ಗೆ ಶಿಕ್ಷಕ ಹನುಮಂತೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.