ದಾವಣಗೆರೆ ವಿವಿಧೆಡೆ ಇಂದು ವಿದ್ಯುತ್ ವ್ಯತ್ಯಯ

KannadaprabhaNewsNetwork |  
Published : Aug 28, 2024, 12:51 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಬೆಸ್ಕಾಂ ಎಸ್‌ಆರ್‌ಎಸ್ ಸ್ವೀಕರಣಾ ಕೇಂದ್ರದಲ್ಲಿ ತುರ್ತು ಕಾರ್ಯ ಹಮ್ಮಿಕೊಳ್ಳಲಾಗಿದೆ. ಇದರಿಂದಾಗಿ ಆ.28ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ಇರುವುದಿಲ್ಲ.

- ತುರ್ತು ಕಾರ್ಯಗಳ ಹಿನ್ನೆಲೆ ತಾತ್ಕಾಲಿಕ ವಿದ್ಯುತ್‌ ಸಮಸ್ಯೆಗೆ ಸಹಕರಿಸಲು ಬೆಸ್ಕಾಂ ಮನವಿ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಬೆಸ್ಕಾಂ ಎಸ್‌ಆರ್‌ಎಸ್ ಸ್ವೀಕರಣಾ ಕೇಂದ್ರದಲ್ಲಿ ತುರ್ತು ಕಾರ್ಯ ಹಮ್ಮಿಕೊಳ್ಳಲಾಗಿದೆ. ಇದರಿಂದಾಗಿ ಆ.28ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ಇರುವುದಿಲ್ಲ.

ಎಫ್-10 ಸರಸ್ವತಿ ಫೀಡರ್ ವ್ಯಾಪ್ತಿಯ ಸರಸ್ವತಿ ಬಡಾವಣೆ ಎ, ಬಿ, ಸಿ ಬ್ಲಾಕ್, ಜೀವನ್ ಭೀಮಾನಗರ, ಚಿಕ್ಕಮಣ್ಣಿ ದೇವರಾಜ ಅರಸು ಬಡಾವಣೆ, ಜಯನಗರ ಎ ಮತ್ತು ಬಿ ಬ್ಲಾಕ್, ಎಸ್.ಎಸ್. ಹೈಟೆಕ್ ಆಸ್ಪತ್ರೆ ರಸ್ತೆ, ಸಾಯಿಬಾಬ ದೇವಸ್ಥಾನದ ಸುತ್ತಮುತ್ತ, ಲಕ್ಷ್ಮೀ ಬಡಾವಣೆ ಹಾಗೂ ಸುತ್ತಮತ್ತಲಿನ ಪ್ರದೇಶಗಳು. ಎಫ್-11 ವಾಟರ್ ವರ್ಕ್ಸ್‌ ಫೀಡರ್ ವ್ಯಾಪ್ತಿಯ ದೂರದರ್ಶನ ಕೇಂದ್ರ, ಮಹಾನಗರ ಪಾಲಿಕೆ ನೀರು ಸರಬರಾಜು ಘಟಕಗಳು, ಸರ್ಕ್ಯೂಟ್ ಹೌಸ್, ಭೂಸೇನಾ ನಿಗಮ, ಜಿಪಂ ಕಚೇರಿ ಎಫ್-13 ಇಂಡಸ್ಟ್ರಿಯಲ್ ಏರಿಯ, ಲೋಕಿಕೆರೆ ರಸ್ತೆ, ಸುಬ್ರಹ್ಮಣ್ಯ ನಗರ, ಎಸ್.ಎ. ರವೀಂದ್ರನಾಥ ಬಡಾವಣೆ ಮತ್ತು ಸುತ್ತಮುತ್ತ. ಎಫ್-14 ವಿದ್ಯಾನಗರ ಫೀಡರ್ ವ್ಯಾಪ್ತಿಯ ಶಿವಕುಮಾರಸ್ವಾಮಿ ಬಡಾವಣೆ 1 ಮತ್ತು 2ನೇ ಹಂತ, ಹದಡಿ ರಸ್ತೆ, ಸೇಂಟ್ ಜಾನ್ ಸ್ಕೂಲ್, ಐ.ಟಿ.ಐ. ಕಾಲೇಜು, ರಿಂಗ್ ರಸ್ತೆ, ಶ್ರೀನಿವಾಸ ನಗರ, ತರಳಬಾಳು ಬಡಾವಣೆ ಮತ್ತು ಸುತ್ತ ಮುತ್ತ ಪ್ರದೇಶಗಳು. ಎಫ್-15 ರಂಗನಾಥ ಫೀಡರ್ ವ್ಯಾಪ್ತಿಯ ಯುಬಿಡಿಟಿ ಲೇಡಿಸ್ ಹಾಸ್ಟೆಲ್, ಜಮುನಾ ವಾಣಿಜ್ಯ ಮಳಿಗೆ, ಸವಿತಾ ಹೋಟೆಲ್, ವಿದ್ಯಾನಗರ, ತರಳಬಾಳು ಬಡಾವಣೆ ಗಾಂಧಿ ಮೂರ್ತಿ ವೃತ್ತದಿಂದ ಈಶ್ವರ ಪಾರ್ವತಿ ದೇವಸ್ಥಾನ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು. ಎಫ್-22 ಎಸ್‌ಎಸ್ ಹ್ಶೆಟೆಕ್ ಫೀಡರ್ ವ್ಯಾಪ್ತಿಯ ಎಸ್‌ಓಜಿ ಕಾಲೋನಿ ಎ, ಬಿ, ಸಿ ಬ್ಲಾಕ್, ಬುದ್ದ, ಬಸವ ಭೀಮ ನಗರ, ಕರ್ನಾಟಕ ಬೀಜ ನಿಗಮ ಹಾಗೂ ಸುತ್ತಮತ್ತಲಿನ ಪ್ರದೇಶಗಳು. ಎಫ್-23 ವಿವೇಕಾನಂದ ಸ್ವಾಮಿ ಫೀಡರ್ ವ್ಯಾಪ್ತಿಯ ವಿವೇಕಾನಂದ ಬಡಾವಣೆ, ಎಲ್.ಐ.ಸಿ ಕಾಲೋನಿ, ಆಂಜನೇಯ ಬಡಾವಣೆ, ವಿನಾಯಕ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

6ನೇ ಮತ್ತು 7ನೇ ಮೈಲಿಕಲ್ಲು, ಪಾಮೇನಹಳ್ಳಿ, ಬೆಳವನೂರು, ತುರ್ಚಗಟ್ಟ, ಹಳೇಬಿಸಲೇರಿ, ಹೊಸಬಿಸಲೇರಿ, ಜರಿಕಟ್ಟೆ, ಮುದಹದಡಿ, ಹಳೇಕುಂದವಾಡ, ಹೊಸಕುಂದವಾಡ, ಶಿರಮಗೊಂಡನಹಳ್ಳಿ, ನಾಗನೂರು, ಶಾಮನೂರು, ಜೆ.ಎಚ್.ಪಟೇಲ್ ಬಡಾವಣೆ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ವಿದ್ಯುತ್‌ ಗ್ರಾಹಕರು ಸಹಕರಿಸುವಂತೆ ಎಂದು ಬೆಸ್ಕಾಂ ಕೋರಿದೆ.

- - - (-ಸಾಂದರ್ಭಿಕ ಚಿತ್ರ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ