ಹಾರೋಹಳ್ಳಿ: ತಾಲೂಕಿನ ಹಲವು ಕಡೆ ಬಿರುಗಾಳಿ ಸಹಿತ ಮಳೆಗೆ ವಿದ್ಯುತ್ ಕಂಬಗಳು, ಮರಗಳು ನೆಲಕ್ಕುರುಳಿವೆ. ಮುಂಗಾರು ಆರಂಭದಲ್ಲೇ ಬಿರುಗಾಳಿ, ಸಿಡಿಲ ಅಬ್ಬರ ಸಹಿತ ಮಳೆ ಆರ್ಭಟಿಸಿದೆ.
ಶುಕ್ರವಾರ ಸಂಜೆ ಬಿದ್ದ ಬಿರುಗಾಳಿ ಸಹಿತ ಮಳೆಗೆ ಹಾರೋಹಳ್ಳಿ ತಾಲೂಕಿನ ಹಲವು ಕಡೆ ತೆಂಗಿನಮರ ಹಾಗೂ ವಿದ್ಯುತ್ ಕಂಬಗಳು ಬಿದ್ದು ಅವಾಂತರ ಸೃಷ್ಟಿ ಮಾಡಿವೆ.ವಿದ್ಯುತ್ ಕಂಬಗಳು ನೆಲಕ್ಕುರುಳಿ ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ತಾಲೂಕಿನ ಕೆಂಪಯ್ಯನಪಾಳ್ಯ ಗ್ರಾಮದ ಬಳಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬಿದ್ದು ಹೋಗಿದ್ದರಿಂದ ವಿದ್ಯುತ್ ಕೂಡ ಕಡಿತವಾಗಿದೆ. ಮರಗಳು ನೆಲಕ್ಕುರುಳಿದ್ದು, ತಾಲೂಕಿನ ಕೊಳ್ಳಿಗಾನಹಳ್ಳಿ ಗ್ರಾಮದ ಬಳಿ ತೆಂಗಿನಮರ ಹಾಗೂ ಇತರೆಡೆ ಮರಗಳು ಬಿರುಗಾಳಿಗೆ ರಸ್ತೆಗೆ ಅಡ್ಡಲಾಗಿ ಬಿದ್ದು ಹೋಗಿದ್ದು ಕೆಲವು ಸಮಯ ಸಂಚಾರಕ್ಕೆ ತೊಂದರೆಯಾಗಿದೆ.
ಮಳೆಯಿಂದ ಯಾವುದೇ ಜೀವಹಾನಿ, ಅಪಾಯ ಸಂಭವಿಸಿಲ್ಲ. ಮಳೆ ಸುರಿಯುವುದಕ್ಕಿಂತ ಸಿಡಿಲು ಹಾಗೂ ಬಿರುಗಾಳಿಯ ಅಬ್ಬರವೇ ಜೋರಾಗಿತ್ತು, ಹಲವು ದಿನಗಳಿಂದ ರಣಬಿಸಿಲಿಗೆ ಕಾದ ಕಾವಲಿಯಂತಾಗಿದ್ದ ಜನರಿಗೆ ಕೊಂಚ ತಣ್ಣಗಾದಂತಾಗಿದೆ.4ಕೆಆರ್ ಎಂಎನ್ 1,2.ಜೆಪಿಜಿಬಿರುಗಾಳಿ ಸಹಿತ ಮಳೆಗೆ ಮರ ಮತ್ತು ವಿದ್ಯುತ್ ಕಂಬ ನೆಲಕ್ಕುರುಳಿರುವುದು.