ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ ಗೆ ಪ್ರಜ್ವಲ್, ಪೃಥ್ವಿ ಆಯ್ಕೆ

KannadaprabhaNewsNetwork | Published : Jan 31, 2024 2:19 AM

ಸಾರಾಂಶ

ಮಹಾಲಿಂಗಪುರ: ಸಮೀಪದ ಕೆಸರಗೊಪ್ಪ ಗ್ರಾಮದ ಪ್ರಜ್ವಲ್ ಬ್ಯಾಕೋಡ ಮತ್ತು ಪೃಥ್ವಿ ಬ್ಯಾಕೋಡ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. ಶಿಕ್ಷಕ ಧರೆಪ್ಪ ಮಾ.ಬ್ಯಾಕೋಡ ಮತ್ತು ಶಿಕ್ಷಕಿ ಸವಿತಾ ಇವರ ಪುತ್ರ ಪ್ರಜ್ವಲ್ 16 ವರ್ಷ ವಯೋಮಿತಿಯ 60 ಮೀ, 80 ಮೀ ಹಡಲ್ಸ್, ಗುಂಡು ಎಸೆತ, ಉದ್ದ ಜಿಗಿತ, 600 ಮೀ.ಓಟ ಹಾಗೂ ಮಗಳು ಪೃಥ್ವಿ 14 ವರ್ಷ ವಯೋಮಿತಿಯ 60 ಮೀ.ಓಟ, ಉದ್ದ ಜಿಗಿತ ಹಾಗೂ 600 ಮೀ ಓಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದು ಫೆ.16 ರಿಂದ 18 ರವರೆಗೆ ಗುಜರಾತಿನ ಅಹಮದಾಬಾದನಲ್ಲಿ ನಡೆಯುವ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಸಮೀಪದ ಕೆಸರಗೊಪ್ಪ ಗ್ರಾಮದ ಪ್ರಜ್ವಲ್ ಬ್ಯಾಕೋಡ ಮತ್ತು ಪೃಥ್ವಿ ಬ್ಯಾಕೋಡ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. ಶಿಕ್ಷಕ ಧರೆಪ್ಪ ಮಾ.ಬ್ಯಾಕೋಡ ಮತ್ತು ಶಿಕ್ಷಕಿ ಸವಿತಾ ಇವರ ಪುತ್ರ ಪ್ರಜ್ವಲ್ 16 ವರ್ಷ ವಯೋಮಿತಿಯ 60 ಮೀ, 80 ಮೀ ಹಡಲ್ಸ್, ಗುಂಡು ಎಸೆತ, ಉದ್ದ ಜಿಗಿತ, 600 ಮೀ.ಓಟ ಹಾಗೂ ಮಗಳು ಪೃಥ್ವಿ 14 ವರ್ಷ ವಯೋಮಿತಿಯ 60 ಮೀ.ಓಟ, ಉದ್ದ ಜಿಗಿತ ಹಾಗೂ 600 ಮೀ ಓಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದು ಫೆ.16 ರಿಂದ 18 ರವರೆಗೆ ಗುಜರಾತಿನ ಅಹಮದಾಬಾದನಲ್ಲಿ ನಡೆಯುವ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಈರ್ವರೂ ತೇರದಾಳದ ಡಾ.ಸಿದ್ಧಾಂತ ದಾನಿಗೊಂಡ ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳಾಗಿದ್ದು ಪ್ರಜ್ವಲ್ 9ನೇ ತರಗತಿ, ಪೃಥ್ವಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಪ್ರೇರಕಶಕ್ತಿ ಧರೆಪ್ಪ: ಶಿಕ್ಷಕ ಧರೆಪ್ಪ ಬ್ಯಾಕೋಡ ಹಂದಿಗುಂದ ಗ್ರಾಮದ ಅನುದಾನಿತ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿದ್ದು, ಶಾಲಾ ಅವಧಿಯ ನಂತರ ಸ್ವಗ್ರಾಮ ಕೆಸರಗೊಪ್ಪದಲ್ಲಿ ಬಡ ವಿದ್ಯಾರ್ಥಿನಿಯರಿಗೆ ಸ್ವಂತ ಖರ್ಚಿನಲ್ಲಿ ಹಗಲಿರುಳೆನ್ನದೇ ಕ್ರೀಡಾತರಬೇತಿ ನೀಡಿ ಕೆಸರಗೊಪ್ಪ ಗ್ರಾಮವೊಂದರಿಂದ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ರಾಷ್ಟ್ರೀಯ ಕಬ್ಬಡ್ಡಿ ತಂಡ ಪ್ರತಿನಿಧಿಸುವಂತೆ ಹಾಗೂ ಗ್ರಾಮದ 5 ಮಕ್ಕಳು ರಾಜ್ಯಮಟ್ಟದ ಅಥ್ಲೆಟಿಕ್‌ನಲ್ಲಿ ಭಾಗವಹಿಸುವಂತೆ ಮಾಡಿರುವುದು ಇವರ ಹೆಗ್ಗಳಕೆಯಾಗಿದ್ದು ಈಗ ಇವರ ಮಕ್ಕಳೇ ರಾಷ್ಟ್ರಮಟ್ಟದ ಅಥ್ಲೆಟಿಕ್‌ಗೆ ಆಯ್ಕೆಯಾಗಿರುವುದು ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಕೆಸರಗೊಪ್ಪ ಗ್ರಾಮ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯ ಒಂದು ಚಿಕ್ಕ ಗ್ರಾಮವಾಗಿದ್ದು, ಇಲ್ಲಿನ ಮಕ್ಕಳು ಇಷ್ಟೊಂದು ಸಂಖ್ಯೆಯಲ್ಲಿ ರಾಷ್ಟ್ರ ಮತ್ತು ರಾಜ್ಯ ತಂಡ ಪ್ರತಿನಿಧಿಸುವಲ್ಲಿ ಪ್ರೇರಕ ಶಕ್ತಿಯಾದ ಧರೆಪ್ಪ ಬ್ಯಾಕೋಡ ಅವರ ಕಾರ್ಯವನ್ನು ಜನ ಕೊಂಡಾಡುತ್ತಿದ್ದಾರೆ.

Share this article