ಮನಸ್ಸಿನ ಚಂಚಲತೆ ನಿಯಂತ್ರಣಕ್ಕೆ ಪ್ರಾಣಯಾಮ: ಸ್ವಾಮಿ ಜಿತಕಾಮಾನಂದಜೀ

KannadaprabhaNewsNetwork |  
Published : Dec 12, 2024, 12:30 AM IST
ರಾಮಕೃಷ್ಣ ಮಠದಲ್ಲಿ ಯೋಗ ಶಿಬಿರ ಉದ್ಘಾಟನಾ ಸಮಾರಂಭ ನಡೆಯಿತು. | Kannada Prabha

ಸಾರಾಂಶ

ಮುಖ್ಯ ಅತಿಥಿ ಡಾ. ಜೀವರಾಜ ಸೊರಕೆ ಮಾತನಾಡಿ, ನಮ್ಮ ಆರೋಗ್ಯ ಭಾಗ್ಯಕ್ಕೆ ಯೋಗವನ್ನು ನಿತ್ಯ ನಿರಂತರ ಮಾಡಿದರೆ ಮಾತ್ರ ಅದರ ಫಲ ಪ್ರಾಪ್ತಿಯಾಗುತ್ತದೆ. ನಾನು ಸುಮಾರು 20 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಾ ಬಂದಿದ್ದು, ಪ್ರಸ್ತುತ 76ನೇ ವಯಸ್ಸಿನಲ್ಲೂ ನನಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿಲ್ಲದೆ ಆರೋಗ್ಯವಾಗಿ ಇದ್ದೇನೆ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮನಸ್ಸಿನ ಚಂಚಲತೆ ನಿಯಂತ್ರಣಕ್ಕೆ ಪ್ರಾಣಯಾಮ ರಾಮಬಾಣ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಹೇಳಿದ್ದಾರೆ.

ನಗರದ ಮಂಗಳಾದೇವಿ ಸಮೀಪದ ಶ್ರೀ ರಾಮಕೃಷ್ಣ ಮಠದಲ್ಲಿ ಡಿಸೆಂಬರ್‌ ತಿಂಗಳ ಯೋಗ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.ಅಷ್ಟಾಂಗ ಯೋಗದ 4ನೇ ಮೆಟ್ಟಿಲು, ಪ್ರಾಣಕ್ಕೆ ಹೊಸ ಆಯಾಮವೇ ಪ್ರಾಣಯಾಮ. ಪ್ರಾಣಾಯಾಮವು ಉಸಿರಾಟದ ಮೇಲೆ ಹಿಡಿತವುಂಟು ಮಾಡುವುದಲ್ಲದೆ, ಸಕ್ರಮಗೊಳಿಸಿ ಶ್ವಾಸಕೋಶ ಮತ್ತು ನರಮಂಡಲದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಾಡಿ ಶುದ್ಧಿಯಾಗಿ ಮನಸ್ಸಿನ ಚಂಚಲತೆ ಇಲ್ಲದಾಗಿ ಶಾಂತವಾಗುವುದು, ಸಂಯಮ ಉಂಟಾಗುವುದು ಎಂದರು.

ಮುಖ್ಯ ಅತಿಥಿ ಡಾ. ಜೀವರಾಜ ಸೊರಕೆ ಮಾತನಾಡಿ, ನಮ್ಮ ಆರೋಗ್ಯ ಭಾಗ್ಯಕ್ಕೆ ಯೋಗವನ್ನು ನಿತ್ಯ ನಿರಂತರ ಮಾಡಿದರೆ ಮಾತ್ರ ಅದರ ಫಲ ಪ್ರಾಪ್ತಿಯಾಗುತ್ತದೆ. ನಾನು ಸುಮಾರು 20 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಾ ಬಂದಿದ್ದು, ಪ್ರಸ್ತುತ 76ನೇ ವಯಸ್ಸಿನಲ್ಲೂ ನನಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿಲ್ಲದೆ ಆರೋಗ್ಯವಾಗಿದ್ದೇನೆ. ನನ್ನ ಅನುಭವದ ಪ್ರಕಾರ ಗ್ಯಾಸ್ಟ್ರಿಕ್, ಬೆನ್ನುನೋವು, ಸೊಂಟ ನೋವು ಇವೆಲ್ಲ ಯೋಗದ ಮೂಲಕ ನಿಯಂತ್ರಿಸಬಹುದು. ಯೋಗವನ್ನು ದಿನಕ್ಕೆ ಕನಿಷ್ಠ 30 ನಿಮಿಷವಾದರೂ ಮಾಡಿದರೆ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂದರು.

ಮುಖ್ಯ ಅತಿಥಿ ಡಾ. ಜೀವರಾಜ ಸೊರಕೆ ಅವರನ್ನು ಸ್ವಾಮಿ ಜಿತಕಾಮಾನಂದಜಿ ಸನ್ಮಾನಿಸಿದರು. ಯೋಗಗುರು ದೇಲಂಪಾಡಿ ಶಿಷ್ಯರಾದ ತುಕರಾಮ, ಚಂದ್ರಹಾಸ ಬಾಳ ಹಾಗೂ ಶ್ರೀಲಕ್ಷ್ಮೀ ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌