ಸುಂಟಿಕೊಪ್ಪ ಸರ್ಕಾರಿ ಪಪೂ ಕಾಲೇಜಿನ ಪ್ರಾರಂಭೋತ್ಸವ

KannadaprabhaNewsNetwork |  
Published : Jun 03, 2025, 01:19 AM IST
ವಿದ್ಯಾರ್ಥಿ | Kannada Prabha

ಸಾರಾಂಶ

ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾರಂಭೋತ್ಸವವನ್ನು ಇಲಾಖೆಯ ಆದೇಶದ ಮೇರೆಗೆ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾರಂಭೋತ್ಸವವನ್ನು ಇಲಾಖೆಯ ಆದೇಶದ ಮೇರೆಗೆ ಆಚರಿಸಲಾಯಿತು.ಸೋಮವಾರ 2025-26 ನೇ ಸಾಲಿನ ಶೈಕ್ಷಣಿಕ ಅವಧಿಯ ಮೊದಲ ದಿನವನ್ನು ಕಾಲೇಜು ಪ್ರಾರಂಭೋತ್ಸವ ದಿನದ ಅಂಗವಾಗಿ ಕಾಲೇಜಿನ ಆವರಣವನ್ನು ತಳಿರು ತೋರಣದಿಂದ ಅಲಂಕರಿಸಿ ಇಲಾಖೆಯ ಸೂಚನೆಯಂತೆ ಪ್ರವೇಶ ದ್ವಾರದ ವಿದ್ಯಾರ್ಥಿಗಳನ್ನು ಸರ್ವ ಉಪನ್ಯಾಸಕರು ಕಾಲೇಜಿಗೆ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲೆ ಶ್ರೀಲತಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಥಮ ಪಿಯುಸಿಗೆ ದಾಖಲಾಗಿರುವ ವಿದ್ಯಾರ್ಥಿಗಳು ಕಾಲೇಜಿನ ನೀತಿ ನಿಯಮಗಳ ಕುರಿತು ಮಾಹಿತಿ ನೀಡಿದರು.ವಿದ್ಯಾರ್ಥಿಗಳು ಶಿಸ್ತಿನಿಂದ ವರ್ತಿಸಿ ತಮ್ಮನ್ನು ತಾವು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಿ ಹಿತಕರವೆನ್ನಿಸುವ ಕೇಶ ವಿನ್ಯಾಸ ಹೊಂದಿ ಕಾಲೇಜು ಪ್ರಾರಂಭವಾಗುವುದಕ್ಕೆ ಅರ್ಧ ಗಂಟೆ ಮುಂಚಿತವಾಗಿ ಹಾಜರಾಗಬೇಕೆಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಲಿಕೆಯನ್ನು ಒಂದು ಸಂಭ್ರಮದ ಪ್ರಕ್ರಿಯೆ ಎಂದು ಪರಿಭಾವಿಸಿ ವಿದ್ಯಾರ್ಥಿಗಳು ಆಧ್ಯಯನ ಶೀಲರಾಗಬೇಕೆಂದು ಕರೆನೀಡಿದರು.ನಂತರ ಪ್ರತೀ ವಿಷಯದ ಉಪನ್ಯಾಸಕರು, ತಮ್ಮ ತಮ್ಮ ಬೋಧನಾ ವಿಷಯದ ಕುರಿತಂತೆ ವಿದ್ಯಾರ್ಥಿಗಳು ಹೊಂದಿಸಿಕೊಳ್ಳಬೇಕಾಗಿರುವ ಕಲಿಕಾ ಸಾಮಾಗ್ರಿಗಳ ಬಗ್ಗೆ ವಿವರಣೆ ನೀಡಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು, ಸಂಭ್ರಮದಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಉಪನ್ಯಾಸಕರ ಮಾರ್ಗದರ್ಶನದಂತೆ ಸ್ವಾಗತ ಕೋರಿದರು.ನಂತರದಲ್ಲಿ ಹಾಜರಿದ್ದ ಸರ್ವ ವಿದ್ಯಾರ್ಥಿಗಳಿಗೂ ಉಪನ್ಯಾಸಕರು ಮಾತೃ ಪ್ರೇಮದಿಂದ ಸಿಹಿ ತಿಂಡಿ ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಕಸಿತ ಭಾರತ ಸಾಕಾರಕ್ಕೆ ಕೇಂದ್ರ ಬಜೆಟ್ ಪೂರಕ : ಕೆ ಜಿ ಬೋಪಯ್ಯ
ಸೇನೆಯಲ್ಲಿ 22 ವರ್ಷ ಸೇವೆ ಸಲ್ಲಿಸಿದ ಯೋಧ ಸ್ವಗ್ರಾಮಕ್ಕೆ ಆಗಮನ