ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರತಿಭಾಕಾರಂಜಿ ಮದ್ದು: ವೈ.ಕೆ.ತಿಮ್ಮೇಗೌಡ

KannadaprabhaNewsNetwork |  
Published : Nov 05, 2026, 01:45 AM IST
4ಕೆಎಂಎನ್ ಡಿ13 | Kannada Prabha

ಸಾರಾಂಶ

ಪ್ರತಿಭಾಕಾರಂಜಿ ಮಕ್ಕಳ ಸರ್ವಾಂಗೀಣ ವಿಕಸನಕ್ಕೆ ವೇದಿಕೆಯಾಗಿದೆ. ಮಕ್ಕಳನ್ನು ಹಂಸಕ್ಷೀರ ನ್ಯಾಯದಂತೆ ಗುರುತಿಸುವ ಕೆಲಸ ಶಿಕ್ಷಕರು, ತೀರ್ಪುಗಾರರಲ್ಲಿ ಬರಬೇಕು. ಪ್ರತಿಭಾವಂತ ಮಕ್ಕಳು ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಮಕ್ಕಳು ಕೀರ್ತಿ ಪಡೆಯಲು ಸಹಕರಿಸಬೇಕು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಮಕ್ಕಳಲ್ಲಿ ಹಾಡು, ನೃತ್ಯದಂತಹ ಪ್ರತಿಭೆ ಬಾಲ್ಯದಿಂದಲೇ ಬರುತ್ತವೆ. ಇವುಗಳನ್ನು ಗುರುತಿಸಿ ಆಸಕ್ತಿ ಮೂಡಿಸಲು ಪ್ರತಿಭಾಕಾರಂಜಿ ಮೊದಲ ಮೆಟ್ಟಿಲಾಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಹೇಳಿದರು.

ಹೋಬಳಿಯ ಚಿಕ್ಕಳಲೆ ಗ್ರಾಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಕಿಕ್ಕೇರಿ ಕ್ಲಸ್ಟರ್ ಮಟ್ಟದಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ಶಾಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಮೊಬೈಲ್ ಛಟ ಬಿಡಿಸಬೇಕು. ಪ್ರತಿಭೆ ಎನ್ನುವುದು ಶಿಸ್ತು, ಶ್ರದ್ಧೆಯ ಜತೆ ಸಾಧಕರ ಸ್ವತ್ತು. ಮಕ್ಕಳಲ್ಲಿ ನೈಜ್ಯ ಪ್ರತಿಭೆ ಸಾಕಷ್ಟಿವೆ. ಇವರನ್ನು ಗುರುತಿಸಿ ತಿದ್ದಿತೀಡುವ ಕೆಲಸ ಬೇಕಿದೆ ಎಂದರು.

ಪ್ರತಿಭಾಕಾರಂಜಿ ಮಕ್ಕಳ ಸರ್ವಾಂಗೀಣ ವಿಕಸನಕ್ಕೆ ವೇದಿಕೆಯಾಗಿದೆ. ಮಕ್ಕಳನ್ನು ಹಂಸಕ್ಷೀರ ನ್ಯಾಯದಂತೆ ಗುರುತಿಸುವ ಕೆಲಸ ಶಿಕ್ಷಕರು, ತೀರ್ಪುಗಾರರಲ್ಲಿ ಬರಬೇಕು. ಪ್ರತಿಭಾವಂತ ಮಕ್ಕಳು ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಮಕ್ಕಳು ಕೀರ್ತಿ ಪಡೆಯಲು ಸಹಕರಿಸಬೇಕು ಎಂದರು.

ಕ್ಲಸ್ಟರ್‌ ಮಟ್ಟದ ವಿವಿಧ ಗ್ರಾಮಗಳ ಶಾಲೆಯ ಮಕ್ಕಳು ಭಾಗವಹಿಸಿದ್ದರು. ಭಾಷಣ, ಮಿಮಿಕ್ರಿ, ಜಾನಪದಗೀತೆ, ಭರತ ನಾಟ್ಯ, ಜಾನಪದ ನೃತ್ಯ, ಕಂಠಪಾಠ, ಧಾರ್ಮಿಕ ಪಠಣ, ಭಾವಗೀತೆ, ಛದ್ಮವೇಷ, ದೇವರನಾಮ, ರಸಪ್ರಶ್ನೆ, ರಂಗೋಲಿ, ಚಿತ್ರಕಲೆ ಮತ್ತಿತರ ಸ್ಪರ್ಧೆಗಳಲ್ಲಿ ಸಂಭ್ರಮದಿಂದ ಭಾಗವಹಿಸಿ ಬಹುಮಾನ ಪಡೆದರು.

ಕಾರ್ಯಕ್ರಮದಲ್ಲಿ ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಕೆ.ಮಂಜುನಾಥ್, ಶಿಕ್ಷಣ ಸಂಯೋಜಕ ಆರ್.ಎ.ನವೀನಕುಮಾರ್, ಸಮೂಹ ಸಂಪನ್ಮೂಲ ವ್ಯಕ್ತಿ ಎಚ್.ಎಲ್.ಆಶಾರಾಣಿ, ತಾಲೂಕು ನೌಕರ ಸಂಘದ ಅಧ್ಯಕ್ಷ ಅನಂದಕುಮಾರ್, ಕಾರ್ಯದರ್ಶಿ ಎಲ್.ಎಸ್. ಧರ್ಮಪ್ಪ, ತಾಲೂಕು ಪ್ರಾಥಮಿಕ ಶಿಕ್ಷಕ ಸಂಘದ ಅಧ್ಯಕ್ಷರವಿಕುಮಾರ್, ಮುಖ್ಯಶಿಕ್ಷಕ ಶಿವಲಿಂಗೇಗೌಡ, ವಿವಿಧ ಶಾಲಾ ಶಿಕ್ಷಕ ಸಮೂಹ, ಎಸ್‌ಡಿಎಂಸಿ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ