ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪ್ರತಿಭಾ ಕಾರಂಜಿ ಸಹಕಾರಿ: ಎಚ್.ಎನ್. ನಾಯ್ಕ

KannadaprabhaNewsNetwork |  
Published : Dec 29, 2025, 03:00 AM IST
ಪೊಟೋ-ಪಟ್ಟಣದ ಫಿನಿಕ್ಸ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿಯನ್ನು ಬಿಇಓ ಎಚ್.ಎನ್.ನಾಆಯ್ಕ ಉದ್ಘಾಟಿಸಿ ಮಾತನಾಡಿದರು.  | Kannada Prabha

ಸಾರಾಂಶ

ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಸ್.ಕೆ. ಹವಾಲ್ದಾರ ಮಾತನಾಡಿ, ಶಿಕ್ಷಣದ ಮುಖ್ಯ ಉದ್ದೇಶ ಸರ್ವತೋಮುಖ ಅಭಿವೃದ್ಧಿ. ಇದು ಸಾಧಿತವಾಗಬೇಕಾದರೆ ಕಲೆ, ಸಂಸ್ಕೃತಿ, ಸಾಹಿತ್ಯ ಎಲ್ಲವುಗಳಲ್ಲಿಯೂ ಮಗು ವಿಕಸನ ಹೊಂದುವುದು ಮುಖ್ಯ ಎಂದರು.

ಲಕ್ಷ್ಮೇಶ್ವರ: ಪ್ರತಿಭಾ ಕಾರಂಜಿ, ಕಲೋತ್ಸವದಂಥ ಕಾರ್ಯಕ್ರಮಗಳು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೂರಕ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ ತಿಳಿಸಿದರು.

ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿನ ಫಿನಿಕ್ಸ್‌ ಸ್ಕೂಲ್‌ನಲ್ಲಿ ನಡೆದ ಲಕ್ಷ್ಮೇಶ್ವರ ಉತ್ತರ ವಲಯದ ಪ್ರತಿಭಾ ಕಾರಂಜಿ ಹಾಗೂ ಲಕ್ಷ್ಮೇಶ್ವರ ಉತ್ತರ ಮತ್ತು ಮಾಗಡಿ ಕ್ಲಸ್ಟರ್ ಮಟ್ಟದ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಂದು ಮಗು ತನ್ನದೇ ಆದ ವಿಶೇಷತೆ ಹೊಂದಿರುತ್ತದೆ. ಆ ಮಗುವಿನಲ್ಲಿರುವ ವಿಶೇಷತೆ ಹುಡುಕಿ ವೇದಿಕೆ ಒದಗಿಸುವುದೇ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಂಥ ಕಾರ್ಯಕ್ರಮಗಳು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪುರ ಮಾತನಾಡಿ, ಪ್ರತಿವರ್ಷ ಈ ಭಾಗದ ಮಕ್ಕಳು ತಾಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ತೋರುತ್ತಿದ್ದಾರೆ. ಅವರಿಗೆ ಪಾಲಕರು, ಶಿಕ್ಷಕರು ಪ್ರೇರಣೆ ತುಂಬಿ ಪ್ರೋತ್ಸಾಹಿಸಬೇಕಾಗಿದೆ ಎಂದರು.

ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಸ್.ಕೆ. ಹವಾಲ್ದಾರ ಮಾತನಾಡಿ, ಶಿಕ್ಷಣದ ಮುಖ್ಯ ಉದ್ದೇಶ ಸರ್ವತೋಮುಖ ಅಭಿವೃದ್ಧಿ. ಇದು ಸಾಧಿತವಾಗಬೇಕಾದರೆ ಕಲೆ, ಸಂಸ್ಕೃತಿ, ಸಾಹಿತ್ಯ ಎಲ್ಲವುಗಳಲ್ಲಿಯೂ ಮಗು ವಿಕಸನ ಹೊಂದುವುದು ಮುಖ್ಯ ಎಂದರು.

ಆನಂದ ಮುಳಗುಂದ ಮಾತನಾಡಿದರು. ಎಸ್.ಬಿ. ಕೊಣ್ಣೂರ ಅಧ್ಯಕ್ಷತೆ ವಹಿಸಿದ್ದರು. ಫಿನಿಕ್ಸ್ ಸಂಸ್ಥೆಯ ಆಡಳಿತ ಮಂಡಳಿಯ ರಾಜಶೇಖರ ಹಾಲೇವಾಡಿಮಠ, ಶಿವಯೋಗಿ ಗಾಂಜಿ, ವಿಜಯ ಹತ್ತಿಕಾಳ, ಚಂದ್ರು ಕಗ್ಗಲಗೌಡರ, ಕಿರಣ, ಸುನಿತಾ ಯರ್ಲಗಟ್ಟಿ, ಕವಿತಾ ಮೆಣಸಗಿ, ಮಂಗಳಾ ಹುಲಮನಿ, ಶಿಕ್ಷಕರ ಸಂಘಟನೆಗಳ ಬಿ.ಸಿ. ಪಟ್ಟೇದ, ಎಚ್.ಎಂ. ಗುತ್ತಲ, ಚಂದ್ರು ನೇಕಾರ, ಸಂಗಮೇಶ ಅಂಗಡಿ, ಎಸ್.ಡಿ. ಲಮಾಣಿ, ಎ.ಎಂ. ಅಕ್ಕಿ, ಬಿ.ಬಿ. ಯತ್ತಿನಹಳ್ಳಿ, ಡಿ.ಡಿ. ಲಮಾಣಿ, ಎಲ್.ಎನ್. ನಂದೆಣ್ಣವರ, ಗೀತಾ ಹಳ್ಯಾಳ, ಎಂ.ಎ. ನದಾಫ್, ಎಂ.ಡಿ. ವಾರದ, ಬಿ.ಎಂ. ಯರಗುಪ್ಪಿ, ಎ.ಎಂ. ಛತ್ರದ, ಗಿರೀಶ ಸುಗಜಾನವರ, ಬಿ.ಎಂ. ಕುಂಬಾರ, ಎಸ್.ಸಿ. ಗೋಲಪ್ಪನವರ, ಎಸ್.ಜಿ. ಇಟಗಿ, ಜಿ.ಎನ್. ಮೆಳ್ಳಳ್ಳಿ, ಸಿಆರ್‌ಪಿ ಗಿರೀಶ ನೇಕಾರ, ಜ್ಯೋತಿ ಗಾಯಕವಾಡ, ಕೆ.ಪಿ. ಕಂಬಳಿ, ನವೀನ ಅಂಗಡಿ, ಶಿವಾನಂದ ಅಸುಂಡಿ, ಸಿ.ವಿ. ವಡಕಣ್ಣವರ, ಎನ್.ಎನ್. ಸಾವಿರಕುರಿ, ಎಸ್ ಎಚ್. ಮತ್ತೂರ ಇದ್ದರು. ಶಾಂಭವಿ ಅಕ್ಕೂರ ಸ್ವಾಗತಿಸಿದರು. ಬಿಆರ್‌ಪಿ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಆರ್‌ಪಿ ಉಮೇಶ ನೇಕಾರ ನಿರೂಪಿಸಿದರು. ಎಲ್.ಎಂ. ಹುರಳಿಕುಪ್ಪಿ ವಂದಿಸಿದರು.

ಎನ್. ಎಸ್. ಬಂಕಾಪುರ, ಎಚ್.ಡಿ. ನಿಂಗರೆಡ್ಡಿ, ಎನ್.ಎನ್. ಶಿಗ್ಲಿ ನಿರ್ವಹಿಸಿದರು. ಪ್ರತಿಭಾ ಕಾರಂಜಿಯಲ್ಲಿ 15 ಶಾಲೆಗಳ ಸುಮಾರು 400 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕ್ಲಸ್ಟರ್‌ ಶಿಕ್ಷಕರು, ಬೇರೆ ಕ್ಲಸ್ಟರ್‌ನ ಶಿಕ್ಷಕರು ನಿರ್ಣಾಯಕರಾಗಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕ ಸಂಸ್ಕೃತಿ ಸಂವೇದನೆಗೆ ಸಂಬಂಧಿಸಿದ್ದು: ಬರಗೂರು
ಜಿಬಿಎ ಚುನಾವಣೆಗೆ ಕಾಂಗ್ರೆಸ್‌ ಅರ್ಜಿಗೆ ₹50 ಸಾವಿರ!