ಶ್ರೀ ರಾಮಕೃಷ್ಣ ಸೊಸೈಟಿಯಿಂದ ಪ್ರತಿಭಾ ಪುರಸ್ಕಾರ

KannadaprabhaNewsNetwork |  
Published : Sep 06, 2024, 01:01 AM IST
ಶ್ರೀ ರಾಮಕೃಷ್ಣ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯಿಂದ ಪ್ರತಿಭಾ ಪುರಸ್ಕಾರ | Kannada Prabha

ಸಾರಾಂಶ

ಸಂಘದಲ್ಲಿ ೨೫ ವರ್ಷ ಸೇವೆ ಪೂರೈಸಿದ ಹಿರಿಯ ವ್ಯವಸ್ಥಾಪಕ ದಿನೇಶ್‌ ರೈ ಜೆ.ಎನ್. ಅವರನ್ನು ಅಭಿನಂದಿಸಲಾಯಿತು. ಒಟ್ಟು ೬೪ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಮಂಗಳೂರು: ಶ್ರೀ ರಾಮಕೃಷ್ಣ ಕ್ರೆಡಿಟ್‌ ಕೋ- ಆಪರೇಟಿವ್ ಸೊಸೈಟಿಯ ೨೦೨೩-೨೪ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿ ಸಾಧನೆ ಮಾಡಿದ ಸಂಘದ ಸದಸ್ಯರು ಮತ್ತು ಸಿಬ್ಬಂದಿ ಮಕ್ಕಳಿಗೆ ಸ್ಥಾಪಕಾಧ್ಯಕ್ಷ ಕೆ.ಬಿ. ಜಯಪಾಲ ಶೆಟ್ಟಿ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ ಉರ್ವ ಸೆಂಟನರಿ ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮವನ್ನು ನಿಟ್ಟೆ ಡೀಮ್ಡ್‌ ಯೂನಿವರ್ಸಿಟಿಯ ಐ.ಎಸ್.ಆರ್‌ ಅಂಡ್ ಸಿ.ಆರ್.ಎಲ್‌ನ ಉಪಾಧ್ಯಕ್ಷರು ಹಾಗೂ ಮಾಜಿ ಉಪಕುಲಪತಿ ಪ್ರೊ.ಡಾ. ಸತೀಶ್‌ ಕುಮಾರ್ ಭಂಡಾರಿ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಥಾಪಕಾಧ್ಯಕ್ಷ ದಿ.ಕೆ.ಬಿ. ಜಯಪಾಲ ಶೆಟ್ಟಿ ಅವರ ಪತ್ನಿ ಲಕ್ಷ್ಮೀ ಜಯಪಾಲ ಶೆಟ್ಟಿ ಮತ್ತು ಅವರ ಮಕ್ಕಳು ಸ್ಥಾಪಕಾಧ್ಯಕ್ಷರ ಹೆಸರಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ ವಿಷಯಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿಶೇಷ ಪ್ರತಿಭಾ ಪುರಸ್ಕಾರವನ್ನು ಸಂಘದ ಮುಖೇನ ನೀಡಲು ಪ್ರಸ್ತಾವಿಸಿದ್ದು, ಅದನ್ನುಕೂಡ ಮುಂದಿನ ವರ್ಷದಿಂದ ಅನುಷ್ಠಾನಿಸಲಾಗುವುದು ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷೆ ಲಕ್ಷ್ಮೀ ಜಯಪಾಲ ಶೆಟ್ಟಿ ಉಪಸ್ಥಿತಿಯಲ್ಲಿ ಶುಭ ಸಂದೇಶವನ್ನು ವಾಚಿಸಲಾಯಿತು. ಸಂಘದಲ್ಲಿ ೨೫ ವರ್ಷ ಸೇವೆ ಪೂರೈಸಿದ ಹಿರಿಯ ವ್ಯವಸ್ಥಾಪಕ ದಿನೇಶ್‌ ರೈ ಜೆ.ಎನ್. ಅವರನ್ನು ಅಭಿನಂದಿಸಲಾಯಿತು. ಒಟ್ಟು ೬೪ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಸಂಘದ ನಿರ್ದೇಶಕರಾದ ವಿಠಲ ಪಿ. ಶೆಟ್ಟಿ, ರಾಮಯ್ಯ ಶೆಟ್ಟಿ, ಅರುಣ್‌ ಕುಮಾರ್ ಶೆಟ್ಟಿ, ಪಿ.ಬಿ. ದಿವಾಕರ ರೈ, ಕುಂಬ್ರ ದಯಾಕರ ಆಳ್ವ ಮತ್ತು ಅರಿಯಡ್ಕ ಚಿಕ್ಕಪ್ಪ ನಾಯ್ಕ್‌, ಮಹಾಪ್ರಬಂಧಕ ಗಣೇಶ್‌ ಜಿ.ಕೆ. ಇದ್ದರು. ನಿರ್ದೇಶಕ ಪ್ರಸಾದ್‌ ಕೌಶಲ್ ಶೆಟ್ಟಿ ಉದ್ಘಾಟಕರ ವ್ಯಕ್ತಿ ಪರಿಚಯ ಮಾಡಿದರು. ನಿರ್ದೇಶಕ ಪಿ.ಬಿ. ದಿವಾಕರ ರೈ ವಂದಿಸಿದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ