ಮಾನವಕುಲದ ಒಳಿತಿಗೆ ಪ್ರಾರ್ಥಿಸುವುದು ಅವಶ್ಯ: ಶಾಸಕ ಪ್ರದೀಪ್ ಈಶ್ವರ್

KannadaprabhaNewsNetwork |  
Published : Mar 22, 2026, 01:15 AM IST
ಸಿಕೆಬಿ-5 ತಾಲ್ಲೂಕಿನ ಸೇಠ್ ದಿನ್ನೆಯಲ್ಲಿ ಅಕ್ರಮವಾಗಿ ಗುಡಿಸಲು ನಿರ್ಮಿಸಿ ಕೊಂಡಿರುವ ವಸತಿ ಹೀನರನ್ನು  ಶಾಸಕ ಪ್ರದೀಪ್ಈಶ್ವರ್  ಬೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದರು | Kannada Prabha

ಸಾರಾಂಶ

ಪಂಚಗ್ಯಾರಂಟಿ ಜಾರಿಗೆ ತಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ, ಶ್ರಮಿಕರ, ಕೂಲಿ ಕಾರ್ಮಿಕರ, ರೈತರ, ಮಹಿಳೆಯರ ದಿನನಿತ್ಯದ ಬೇಗೆಗೆ ಬೆನ್ನೆಲುಬಾಗಿ ನಿಂತಿರುವುದು ಅಭಿನಂದನೀಯವಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಾನವಕುಲದ ಒಳಿತಿಗೆ ಪ್ರಾರ್ಥಿಸುವುದು ಇಂದು ಅತ್ಯಂತ ಅವಶ್ಯವಾಗಿದೆ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ರಂಜಾನ್ ಅಂಗವಾಗಿ ತಾಲೂಕಿನ ಪೆರೇಸಂದ್ರ ಗ್ರಾಮದ ಮಸೀದಿಯಲ್ಲಿ ಶನಿವಾರ ಮಸ್ಲಿಮರು ಪ್ರಾಥನೆ ಸಲ್ಲಿಸಿದ ನಂತರ ಮಸೀದಿಗೆ ಆಗಮಿಸಿಶುಭಾಶಯ ಕೋರಿ ಸುದ್ದಿಗಾರರೊಂದಿಗೆ ಮಾತನಾಡಿ, ಪೆರೇಸಂದ್ರ ಗ್ರಾಮದಲ್ಲಿ ನಿರ್ಮಾಣ ವಾಗುತ್ತಿರುವ ಶಾದಿ ಮಹಲ್ ಪೂರ್ಣಗೊಳ್ಳಲು ಒಂದು ಕೋಟಿ ರು. ಅನುದಾನ ನೀಡುವ ಭರವಸೆ ನೀಡಿದರು. ಮುಸ್ಲಿಂಮರ ಪ್ರತಿ ಮನೆಗೂ ಬೇಟಿ ನೀಡಿ ಶುಭಾಶಯ ಕೋರಿದರು.

ಪಂಚಗ್ಯಾರಂಟಿ ಜಾರಿಗೆ ತಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ, ಶ್ರಮಿಕರ, ಕೂಲಿ ಕಾರ್ಮಿಕರ, ರೈತರ, ಮಹಿಳೆಯರ ದಿನನಿತ್ಯದ ಬೇಗೆಗೆ ಬೆನ್ನೆಲುಬಾಗಿ ನಿಂತಿರುವುದು ಅಭಿನಂದನೀಯವಾಗಿದೆ ಎಂದು ಹೇಳಿದರು.ಮನೆ ಕಟ್ಟಿಕೊಡುವ ಭರವಸೆ:

ಪರೇಸಂದ್ರದಿಂದ ವಾಪಸ್ಸು ಚಿಕ್ಕಬಳ್ಳಾಪುರಕ್ಕೆ ತೆರಳುವ ಮಾರ್ಗ ಮಧ್ಯ ರಾಷ್ಟ್ರೀಯ ಹೆದ್ದಾರಿ 44ಕ್ಕೆ ಹೊಂದಿಕೊಂಡಿರುವ ಸೇಠ್ ದಿನ್ನೆಯಲ್ಲಿ ಅಕ್ರಮವಾಗಿ ಗುಡಿಸಲು ನಿರ್ಮಿಸಿ ಕೊಂಡಿರುವ ವಸತಿ ಹೀನರನ್ನು ಶಾಸಕ ಪ್ರದೀಪ್ ಈಶ್ವರ್ ಭೇಟಿ ಮಾಡಿದರು. ಇಲ್ಲಿನ 150 ಕುಟುಂಬಗಳವರು ತಮಗೆ ಕಾಯಂ ಮನೆ ನಿರ್ಮಿಸಿಕೊಡುವಂತೆ, ಪುಂಡಪೋಕರಿಗಳ ತಡೆಯಬೇಕು, ಕುಡಿಯುವ ನೀರಿನ ವ್ಯೆವಸ್ಥೆ ಮಾಡಿಕೊಡುವಂತೆ ಬೇಡಿಕೆ ಇಟ್ಟರು. ಶಾಸಕರು ಇಲ್ಲಿ ಕಾನೂನು ಬದ್ಧವಾಗಿ ಇರುವವರಿಗೆ ಮನೆ ನೀಡಲು ಜಿಲ್ಲಾಧಿಕಾರಿಗೆ ತಿಳಿಸುತ್ತೇನೆ ಎಂದು ಭರವಸೆ ನೀಡಿದರು.

ಪ್ರತಿ ನಿತ್ಯ ಒಂದು ಟ್ಯಾಕರ್ ಲೋಡ್ ನೀರು ಪೋರಯಸಲು ತಾಪಂ ಇಓಗೆ, ಕುಡುಕರ ,ಪುಂಡು ಪೋಕರಿಗಳ, ನಿವಾರಣೆಗಾಗಿ ಪೋಲಿಸ್ ಬೀಟ್ ವ್ಯೆವಸ್ಥೆ ಮಾಡುವಂತೆ ಪೋಲಿಸ್ ವರಿಷ್ಠಾಧಿಕಾರಿಗೆ ಪೋನ್ ಮೂಲಕ ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ರಕ್ಷಿತ್ ರೆಡ್ಡಿ, ಮುಖಂಡರಾದ ರಮೇಶ್, ಎನ್.ಬಿ.ಕೆ. ರಾಜು, ಆಲೂಗಡ್ಡೆ ಬಾಬು, ಹಫೀಜ್, ನೂರುಲ್ಲಾ, ಭಾಷಾ, ಸೇರಿ ಕಾಂಗ್ರೆಸ್ ಮುಖಂಡರು, ಸಾರ್ವಜನಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡುವೆ
ಜಿಲ್ಲಾದ್ಯಂತ ಶ್ರದ್ಧಾಭಕ್ತಿಯ ರಂಜಾನ್ ಆಚರಣೆ