ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡುವೆ

KannadaprabhaNewsNetwork |  
Published : Mar 22, 2026, 01:15 AM IST
ಗುಬ್ಬಿಯ ಕಳ್ಳಿಪಾಳ್ಯ ಗ್ರಾಮದಲ್ಲಿ  ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೀಕ್ಷಣೆ ಹಾಗೂ ಕಳ್ಳಿಪಾಳ್ಯ ಗ್ರಾಮದಲ್ಲಿ ಹಲವು ರೈತರಿಂದ ಹಾಗೂ ಸಾರ್ವಜನಿಕರಿಂದ ಕೆಲಸ ಕಾರ್ಯಗಳ ಮನವಿ ಸ್ವೀಕಾರ ಮಾಡಿದರು. | Kannada Prabha

ಸಾರಾಂಶ

ತುಮಕೂರು ಜಿಲ್ಲೆಯಲ್ಲಿ ರೈಲ್ವೆ ಕಾಮಗಾರಿ ಸೇರಿದಂತೆ ಹತ್ತು ಹಲವು ಕಾಮಗಾರಿಗಳನ್ನು ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡಿದ್ದು ನನಗೆ ತೃಪ್ತಿ ತಂದಿದೆ ಎಂದು ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವ ವಿ ಸೋಮಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ತುಮಕೂರು ಜಿಲ್ಲೆಯಲ್ಲಿ ರೈಲ್ವೆ ಕಾಮಗಾರಿ ಸೇರಿದಂತೆ ಹತ್ತು ಹಲವು ಕಾಮಗಾರಿಗಳನ್ನು ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡಿದ್ದು ನನಗೆ ತೃಪ್ತಿ ತಂದಿದೆ ಎಂದು ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವ ವಿ ಸೋಮಣ್ಣ ಹೇಳಿದರು. ಗುಬ್ಬಿಯ ಕಳ್ಳಿಪಾಳ್ಯ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೀಕ್ಷಣೆ ಹಾಗೂ ಕಳ್ಳಿಪಾಳ್ಯ ಗ್ರಾಮದಲ್ಲಿ ಹಲವು ರೈತರಿಂದ ಹಾಗೂ ಸಾರ್ವಜನಿಕರಿಂದ ಕೆಲಸ ಕಾರ್ಯಗಳ ಮನವಿಯನ್ನು ಪಡೆದು ಮಾತನಾಡಿದರು. ಜಿಲ್ಲೆಗೆ ಬಹಳ ವರ್ಷ ಗಳಿಂದ ನೆನೆ ಗುದಿಗೆ ಬಿದ್ದಿದ್ದ ಹಲವು ರೈಲ್ವೆ ಕಾಮಗಾರಿ ಮಾಡಲಾಗಿದೆ ಗುಬ್ಬಿಯಲ್ಲಿ ಸಹ ರೈಲ್ವೆ ಮೇಲು ಸೇತುವೆಗಳು ರಾಷ್ಟ್ರಿಯ ಹೆದ್ದಾರಿ ಟಾಪಿಂಗ್ ವ್ಯವಸ್ಥೆ ಸೇರಿದಂತೆ ಹಲವು ಕಾಮಗಾರಿ ಮಾಡಿದೆ ಎಂದು ತಿಳಿಸಿದರು. ಜೆಡಿಎಸ್ ಮುಖಂಡ ಬಿಎಸ್ ನಾಗರಾಜ ಮಾತನಾಡಿ, ವಿ.ಸೋಮಣ್ಣನವರು ನಮಗೆ ಸಚಿವರಾಗಿ ಬಂದಿರುವುದು ಎನ್‌ಡಿಎ ಕಾರ್ಯಕರ್ತರಿಗೆ ಮುಖಂಡರಿಗೆ ಶಕ್ತಿ ಬಂದಿದ್ದು, ನೂರಾರು ಕೋಟಿ ವೆಚ್ಚದ ಕಾಮಗಾರಿ ತುಮಕೂರು ಜಿಲ್ಲೆಯಲ್ಲಿ ನಡೆಯುತ್ತಿದೆ ಮುಂದೆ ಬರುವ ಎಂ ಇಲ್ ಸಿ ಚುನಾವಣೆಯನ್ನು ಸಹ ಒಟ್ಟಾಗಿ ಮಾಡಿ ನಮ್ಮ ಅಭ್ಯರ್ಥಿ ಗೆಲ್ಲಿಸುತ್ತೇವೆ ಎಂದು ತಿಳಿಸಿದರು. ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೊಕೇಶ ಮಾತನಾಡಿ, ನನ್ನಂತ ಕಾರ್ಯಕರ್ತರ ಮನೆಗೂ ಸಚಿವರು ಆಗಮಿಸಿರುವುದು ಅವರ ಸರಳತನಕ್ಕೆ ಹಿಡಿದ ಕನ್ನಡಿಯಾಗಿದೆ ನಮ್ಮೂರಿಗೆ ಅವಶ್ಯಕತೆ ಇದ್ದಂತಹ ಅಂಡರ್ ಗ್ರೌಂಡ್ ರಸ್ತೆ ಕಾಮಗಾರಿಗೂ ಸಹ ಸಂಸದರು ಹಣವನ್ನು ಹಾಕಿ ಕೆಲಸ ಮಾಡುತ್ತಿರುವುದು ನಿಜವಾಗಿಯೂ ಈ ಭಾಗದ ಜನರಿಗೆ ಅತ್ಯಂತ ಹೆಚ್ಚಿನ ಅನುಕೂಲವಾಯಿತು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಚ್ ನಿಂಗಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹುಚ್ಚಯ್ಯ, ಮುಖಂಡರಾದ ಜಿ ಎನ್ ಬೆಟ್ಟಸ್ವಾಮಿ,ಯೋಗಾನಂದ ಕುಮಾರ್, ಸಾಗರನ ಹಳ್ಳಿ ವಿಜಯ್ ಕುಮಾರ್, ಶಿವು, ಶಿವಕುಮಾರ್ ಸೇರಿದಂತೆ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವಕುಲದ ಒಳಿತಿಗೆ ಪ್ರಾರ್ಥಿಸುವುದು ಅವಶ್ಯ: ಶಾಸಕ ಪ್ರದೀಪ್ ಈಶ್ವರ್
ಜಿಲ್ಲಾದ್ಯಂತ ಶ್ರದ್ಧಾಭಕ್ತಿಯ ರಂಜಾನ್ ಆಚರಣೆ