ಹರಪನಹಳ್ಳಿ: ಪ್ರತಿಯೊಬ್ಬರು ಮಾತೃಭಾಷೆಗೆ ಆದ್ಯತೆ ನೀಡಿ, ಇತರ ಭಾಷೆಗಳನ್ನು ಕಲಿಯಬೇಕು ಎಂದು ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ತಿಳಿಸಿದ್ದಾರೆ.
ಇಂದು ನಮ್ಮ ಭಾಷೆ ಮರೆತು ಆಂಗ್ಲ ಭಾಷಾ ವ್ಯಾಮೋಹ ಜಾಸ್ತಿಯಾಗುತ್ತಲಿದೆ. ಇಂತಹ ದಿನಗಳಲ್ಲಿ ಅಂತರಾಷ್ಟ್ರೀಯ ಉರ್ದು ದಿನಾಚರಣೆ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ ಮಾತನಾಡಿ, ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು. ಆ ಮಗುವಿಗೆ ಮೂಲ ಶಿಕ್ಷಣ ನೀಡಬೇಕು ಎಂದು ಹೇಳಿದರು. ಮೌಲಾನಾ ಅಬ್ದುಲ್ಕಲಾಂ ಅವರು ಶಿಕ್ಷಣ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.ಶಿಕ್ಷಕರ ಸಂಘದ ವಿಜಯನಗರ ಜಿಲ್ಲಾದ್ಯಕ್ಷ ಬಸವರಾಜ ಸಂಗಪ್ಪನವರ್ ಮಾತನಾಡಿ, ಭಾಷೆ ಎಂಬುದು ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಮಾಧ್ಯಮ, ಸಂವಿಧಾನದ ಅಂಗೀಕೃತ ಭಾಷೆ ಉರ್ದು ಭಾಷೆಯಾಗಿದೆ. ನಮ್ಮ ಭಾಷೆ ಪ್ರೀತಿಸುತ್ತಾ ಬೇರೆ ಭಾಷೆಯನ್ನು ಕಲಿಯಬೇಕು ಎಂದು ಹೇಳಿದರು.
ಶಿಕ್ಷಕರ ಸಂಘದ ರಾಜ್ಯ ಘಟಕದ ಉಪಾದ್ಯಕ್ಷೆ ಜಿ.ಪದ್ಮಲತಾ ಮಾತನಾಡಿ, ಅಬ್ದುಲ್ ಕಲಾಂ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸುದಾರಣೆ ತಂದ ಮಹಾನ್ ವ್ಯಕ್ತಿ ಎಂದ ಅವರು, ಶಿಕ್ಷಣ ಕೇವಲ ಓದುವುದು ಮಾತ್ರವಲ್ಲ ಇತರರಿಗೆ ಕಲಿಸುವುದು ಎಂದರು. ಅಮಾನ್ ಬೀ ಅಧ್ಯಕ್ಷತೆ ವಹಿಸಿದ್ದರು.
ಪುರಸಭಾ ಅಧ್ಯಕ್ಷೆ ಎಂ.ಫಾತಿಮಾಬಿ ಕಾರ್ಯಕ್ರಮ ಉದ್ಘಾಟಿಸಿದರು. ಉಪಾದ್ಯಕ್ಷ ಎಚ್.ಕೊಟ್ರೇಶ, ಸದಸ್ಯರಾದ ಅಬ್ದುಲ್ ರಹಿಮಾನ್, ಲಾಟಿ ದಾದಾಪೀರ, ಉದ್ದಾರ ಗಣೇಶ, ಜಾಕೀರ ಹುಸೇನ್, ಮುಖಂಡರಾದ ಎ.ಮೂಸಾಸಾಹೇಬ್, ಸೈಯದ್ ಇರ್ಫಾನ್, ಇಸ್ಮಾಯಿಲ್ ಎಲಿಗಾರ, ಎಂ.ಜಾವೇದ್, ರಿಜ್ವಾನ್, ಅಸ್ಲಂ, ದಾದಾಪೀರ, ಮನ್ಸೂರು ಅಹ್ಮದ್, ದೈಹಿಕ ಪರಿವೀಕ್ಷಕ ಷಣ್ಮೂಖಪ್ಪ, ಎಂ.ದಾದಖಲಂದರ, ಶಿಕ್ಷಕರ ಸಂಘದ ಅಧ್ಯಕ್ಷ ಬಿ.ರಾಜಶೇಖರ, ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಬಿ.ಚಂದ್ರಮೌಳಿ, ಎಸ್.ರಾಮಪ್ಪ, ಮಾದಿಹಳ್ಳಿ ಮಂಜುನಾಥ, ರಮೇಶ, ಎನ್ ಪಿ ಎಸ್ ಸಂಘದ ಅಧ್ಯಕ್ಷ ಅಂಜಿನಪ್ಪ, ರಮೇಶ ಉಪಸ್ಥಿತರಿದ್ದರು.