ಆಂಜನೇಯ ಸ್ವಾಮಿ ನೂತನ ದೇವಸ್ಥಾನದ ಲೋಕಾರ್ಪಣೆಗೆ ಸಿದ್ಧತೆ

KannadaprabhaNewsNetwork |  
Published : Feb 28, 2025, 12:45 AM IST
ಕೆಂಪುಸಾಗರ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ನೂತನ ದೇವಸ್ಥಾನದ ಲೋಕಾರ್ಪಣೆ.ಮಾರ್ಚ್ 1 ,2 ರಂದು | Kannada Prabha

ಸಾರಾಂಶ

ತಾಲೂಕಿನ ಕೆಂಪುಸಾಗರ ಗ್ರಾಮದಲ್ಲಿ ಸುಮಾರು 150 ವರ್ಷಕ್ಕೂ ಹಿಂದಿನ ನದೇವಸ್ಥಾನದ ಲೋಕಾರ್ಪಣೆ ಮಾರ್ಚ್ ಒಂದು ಹಾಗೂ 2ರಂದು ನಡೆಯಲಿದೆ. 2021ರಲ್ಲಿ ಕೆಂಪುಸಾಗರ ಗ್ರಾಮಸ್ಥರು ದೇವಸ್ಥಾನದ ಜೀವನೋದ್ಧಾರಕ್ಕಾಗಿ ಶ್ರೀ ಆಂಜನೇಯ ಸ್ವಾಮಿ ಜೀರ್ಣೋದ್ಧಾರ ಸಮಿತಿ ರಚಿಸಿ ಇದೀಗ ದೇವಸ್ಥಾನದ ಗರ್ಭಗುಡಿ, ಪರಿಕ್ರಮ ಮತ್ತು ಗೋಪುರವು ನೂತನವಾಗಿ ನಿರ್ಮಾಣ ಪೂರ್ಣಗೊಂಡಿದ್ದು ಮಾರ್ಚ್ 1 ಹಾಗೂ 2ರೊಂದು ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಕೆಂಪುಸಾಗರ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಸಮಿತಿಯ ಪರವಾಗಿ ಗೋಪಿನಾಥ್ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಕೆಂಪುಸಾಗರ ಗ್ರಾಮದಲ್ಲಿ ಸುಮಾರು 150 ವರ್ಷಕ್ಕೂ ಹಿಂದಿನ ನದೇವಸ್ಥಾನದ ಲೋಕಾರ್ಪಣೆ ಮಾರ್ಚ್ ಒಂದು ಹಾಗೂ 2ರಂದು ನಡೆಯಲಿದೆ.

ಶ್ರೀ ಆಂಜನೇಯ ಸ್ವಾಮಿಯವರ ವಿಗ್ರಹದ ಪುನರ್ ಪ್ರತಿಷ್ಠಾಪನೆ ನೆರವೇರಲಿದೆ. ಈ ಹಿಂದೆ ದೇವಸ್ಥಾನವು ಶಿಥಿಲಗೊಂಡಿದ್ದರಿಂದ ಗ್ರಾಮಸ್ಥರು ಹಾಗೂ ಗ್ರಾಮದ ಹಿರಿಯರಾದ ಪೋಸ್ಟ್ ನಂಜಪ್ಪನವರು 1986-87ರಲ್ಲಿ ದೇವಸ್ಥಾನದ ಗರ್ಭಗುಡಿಯಯನ್ನು ಕಲ್ಲು ಹಾಗೂ ಮಣ್ಣಿನಲ್ಲಿ ನಿರ್ಮಿಸಿದರು. 2021ರಲ್ಲಿ ಕೆಂಪುಸಾಗರ ಗ್ರಾಮಸ್ಥರು ದೇವಸ್ಥಾನದ ಜೀವನೋದ್ಧಾರಕ್ಕಾಗಿ ಶ್ರೀ ಆಂಜನೇಯ ಸ್ವಾಮಿ ಜೀರ್ಣೋದ್ಧಾರ ಸಮಿತಿ ರಚಿಸಿ ಇದೀಗ ದೇವಸ್ಥಾನದ ಗರ್ಭಗುಡಿ, ಪರಿಕ್ರಮ ಮತ್ತು ಗೋಪುರವು ನೂತನವಾಗಿ ನಿರ್ಮಾಣ ಪೂರ್ಣಗೊಂಡಿದ್ದು ಮಾರ್ಚ್ 1 ಹಾಗೂ 2ರೊಂದು ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಕೆಂಪುಸಾಗರ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಸಮಿತಿಯ ಪರವಾಗಿ ಗೋಪಿನಾಥ್ ಮನವಿ ಮಾಡಿದ್ದಾರೆ. ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಲೋಕಾರ್ಪಣೆ ಅಂಗವಾಗಿ ಶ್ರೀ ಬಿಂದು ಮಾಧವ ಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ಬೆಲಗೂರು ಶ್ರೀ ಮಾರುತಿ ಪೀಠಾಧಿಪತಿಗಳಾದ ವಿಜಯ ಮಾರುತಿ ಶರ್ಮ ಗುರುಗಳ ಪೂರ್ಣಾನುಗ್ರಹದೊಂದಿಗೆ ಮಾರ್ಚ್ 1ರ ಶನಿವಾರಗಳಿಗೆ ಒಂಬತ್ತು ಗಂಟೆಗೆ ದೇವತಾ ಪ್ರಾರ್ಥನೆ ಸಭಾ ವಂದನೇ ಸಂಕಲ್ಪ ಮಹಾ ಗಣಪತಿ ಪೂಜೆ ಮಹಾ ಸಂಕಲ್ಪ ಸಂಜೆ 5:30ಕ್ಕೆ ಮಂಡಲ ಪೂಜೆ ವಾಸ್ತು ಹೋಮ ಪೂರ್ಣಾವತಿ ರಾತ್ರಿ 9ಗೆ ಕೊಂಡಬಾಗಿಲು ಶ್ರೀ ವೀರಭದ್ರ ಸ್ವಾಮಿ ಹಾಗೂ ಸುತ್ತಮುತ್ತ ಗ್ರಾಮ ದೇವತೆಗಳ ನಾನಾ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯಲಿದೆ.

ಮಾ. 2ರ ಭಾನುವಾರ ಬೆಳಿಗ್ಗೆ ನಾಲ್ಕು ಗಂಟೆಗೆ ಸುಪ್ರಭಾತ ಪಿಡಿಕಾ ಸ್ಥಾಪನೆ, 10ರಿಂದ 11ರವರೆಗೆ ಸಲ್ಲುವ ಶುಭ ವೈಶಾಖ ಲಗ್ನದಲ್ಲಿ ಕುಂಭಾಭಿಷೇಕ ಮಹಾಪೂಜೆ ಮಹಾಮಂಗಳಾರತಿ ಸಕಲ ಭಕ್ತರು ಸಕಲ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳ ಕೃಪೆಗೆ ಪಾತ್ರರಾಗಬೇಕೆಂದು ಭಕ್ತ ಮಂಡಳಿ ವಿನಂತಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ