ಜಿಲ್ಲೆಯಲ್ಲೂ ಅಹಿಂದ ಕಾರ್ಯಾಗಾರ ನಡೆಸಲು ಸಿದ್ಧತೆ: ಡಾ. ನಾಗೇಶ ನಾಯ್ಕ

KannadaprabhaNewsNetwork |  
Published : Apr 24, 2026, 01:15 AM IST
ಫೋಟೋ : ೨೨ಕೆಎಂಟಿ_ಎಪಿಆರ್_ಕೆಪಿ೨ : ಡಾ. ನಾಗೇಶ ನಾಯ್ಕ | Kannada Prabha

ಸಾರಾಂಶ

ಹುಬ್ಬಳ್ಳಿಯ ವಿಚಾರ ಸಂಕಿರಣಕ್ಕೆ ನಮ್ಮ ಜಿಲ್ಲೆಯಿಂದ ೧೫೦ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದೇವೆ.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹೇಳಿಕೆ

ಕನ್ನಡಪ್ರಭ ವಾರ್ತೆ ಕುಮಟಾಅಹಿಂದ ಪರಿಕಲ್ಪನೆಯು ಪುನರುಜ್ಜೀವನಗೊಂಡು ೨೫ ವರ್ಷವಾದ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಏ.೨೬ ರಂದು ಆಯೋಜಿಸಲಾಗಿರುವ ಅಹಿಂದ ೨೫ ರಾಜ್ಯಮಟ್ಟದ ವಿಚಾರ ಸಂಕಿರಣದ ಬಳಿಕ ಉತ್ತರ ಕನ್ನಡ ಜಿಲ್ಲಾಮಟ್ಟದ ಒಂದು ದಿನದ ಕಾರ್ಯಾಗಾರವನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ. ನಾಗೇಶ ನಾಯ್ಕ ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ, ಹುಬ್ಬಳ್ಳಿಯ ವಿಚಾರ ಸಂಕಿರಣಕ್ಕೆ ನಮ್ಮ ಜಿಲ್ಲೆಯಿಂದ ೧೫೦ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದೇವೆ. ಸ್ವಾತಂತ್ರ್ಯ ಪೂರ್ವ, ಬಳಿಕವೂ ಶೋಷಿತ ಸಮಾಜಗಳ ಕಲ್ಯಾಣಕ್ಕಾಗಿ ಹಲವಾರು ಕಾನೂನು, ಯೋಜನೆ ಜಾರಿಗೆ ಬಂದಿವೆ. ೧೯೭೦ರ ದಶಕದಲ್ಲಿ ಭೂಸುಧಾರಣೆ, ಹಿಂದುಳಿದ ವರ್ಗಗಳ ಸಬಲೀಕರಣ ನೀತಿಗಳು ಕರ್ನಾಟಕದಲ್ಲಿ ಅಹಿಂದ ರೂಪುಗೊಳಿಸಲು ಪ್ರಮುಖ ನೆಲೆಯಾಯಿತು. ನಂತರದ ದಿನಗಳಲ್ಲಿ ಸಾಮಾಜಿಕ ಅಸಮಾನತೆ, ಅಸ್ಪ್ರಷ್ಯತೆ, ಮೂಢನಂಬಿಕೆ ಮುಂತಾದವುಗಳ ವಿರುದ್ಧ ಜಾಗೃತಿ ಹೆಚ್ಚಿದೆ. ಹಾವನೂರ ವರದಿಯೂ ನ್ಯಾಯ ಕೊಡಿಸುವ ಪ್ರಯತ್ನ ಮಾಡಿ, ಶೈಕ್ಷಣಿಕ ಕ್ರಾಂತಿಗೆ ಕಾರಣವಾಗಿದೆ. ಅಹಿಂದ ನಡೆದುಬಂದ ದಾರಿ, ಹೋರಾಟ, ಸಾಧನೆಗಳ ಅವಲೋಕನ ಹೊಸ ಸವಾಲುಗಳನ್ನು ಎದುರಿಸುವ ಸಂಕಲ್ಪಕ್ಕಾಗಿ ವಿಚಾರ ಸಂಕಿರಣ ಪ್ರಾಮುಖ್ಯತೆ ಪಡೆದಿದೆ. ನಮ್ಮ ಜಿಲ್ಲೆಯಲ್ಲೂ ಅಹಿಂದ ಚಿಂತನೆ ಹರಿದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯಿಂದ ಅಹಿಂದ ವಿಚಾರ ಸಂಕಿರಣಕ್ಕೆ ಪಾಲ್ಗೊಳ್ಳಬೇಕಿದೆ ಎಂದರು. ರಾಮಾ ಮೊಗೇರ, ಸುಧಾಕರ ತಾರಿ, ಐತು ಬಿ. ಗೊಂಡ, ಎಂ.ಡಿ. ನಾಯ್ಕ ಭಟ್ಕಳ, ಶಿವಾನಂದ ಪಿ. ನಾಯ್ಕ ಶಿರಸಿ, ಅಬ್ದುಲ್ ಕರೀಂ ಶೇಖ ಶಿರಸಿ, ದಾಮೋದರ ಜೆ. ನಾಯ್ಕ ಅಂಕೋಲಾ, ಯೋಗಾನಂದ ಗಾಂಧಿ, ತಿಮ್ಮಪ್ಪ ಮುಕ್ರಿ, ಸವಿತಾ ಮುಕ್ರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂಗಳೂರು: ಗಾಳಿ ಮಳೆಗೆ ಮರ, ಕಂಪೌಂಡ್‌ ಬಿದ್ದು ಮನೆ, ವಾಹನ ಜಖಂ
ಕುಲಶೇಖರ: ಬ್ರಹ್ಮಕಲಶೋತ್ಸವ ಹೊರೆ ಕಾಣಿಕೆ ಮೆರವಣಿಗೆ