ಕನ್ನಡಪ್ರಭ ವಾರ್ತೆ ರಾಯಚೂರು
ಮೊದಲಿಗೆ ಸಿರವಾರ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಮಾನ್ಯರು, ಗ್ರಾಮೀಣ ಭಾಗದ ಮಹಿಳೆಯರು ತಮ್ಮ ವೈಯಕ್ತಿಕ ಅರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸುವ ದಿಶೆಯಲ್ಲಿ ಸೂಕ್ತ ಸಲಹೆ ಸೂಚನೆ, ಜಾಗೃತಿ, ಆಪ್ತ ಸಮಾಲೊಚನೆ ಕೈಗೊಳ್ಳಲು ಇದಕ್ಕಾಗಿ ಬೇಕಾಗುವ ಸೂಕ್ತ ಕ್ರಿಯಾ ಯೋಜನೆ ಸಿದ್ಧಪಡಿಸಿ ಪಡೆದುಕೊಳ್ಳಬೇಕು.
ಚಿಕಿತ್ಸೆಗಾಗಿ ಆಗಮಿಸಿದ ತಾಯಂದಿರು, ಸಾರ್ವಜನಿಕರೊಂದಿಗೆ ಖುದ್ದು ಮಾತನಾಡಿದರಲ್ಲದೆ, ಹೆರಿಗೆಗೆ ಆಗಮಿಸಿದಾಗ ಗರ್ಭಿಣಿಯ ಅರೋಗ್ಯದ ಸ್ಥಿರತೆ, ಪ್ರತಿ ತಿಂಗಳು ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿ ಗರ್ಭಿಣಿಯರ ತಪಾಸಣೆಯ ಕಾರ್ಯವಿಧಾನ, ತಾಯಿಕಾರ್ಡ್‌ಗಳು, ಹೆರಿಗೆ ಕೊಠಡಿ, ವಾರ್ಡ್, ಪ್ರಯೋಗಾಲಯ, ದಾಖಲಾತಿಗಳ ನಿರ್ವಹಣೆ ಪರಿಶೀಲಿಸಿ, ಗರ್ಭಿಣಿ ತಾಯಂದಿರಲ್ಲಿ ಕಂಡು ಬರುತ್ತಿರುವ ಅಧಿಕ ರಕ್ತದೊತ್ತಡದ ನಿಯಂತ್ರಣಕ್ಕಾಗಿ, ಆಹಾರ ಪದ್ಧತಿ, ಚಿಕಿತ್ಸಾ ವಿಧಾನಗಳು ಹಾಗೂ ಜೀವನ ಶೈಲಿಯಲ್ಲಿ ಮಾಡಬಹುದಾದ ಬದಲಾವಣೆಗಾಗಿ ಈಗಾಗಲೇ ರಾಜ್ಯಮಟ್ಟದಿಂದ ಪಡೆಯುತ್ತಿರುವ ತಾಂತ್ರಿಕ ಸಹಾಯ ವನ್ನು ಪರಿಣಾಮಕಾರಿಯಾಗಿ ವಿಶ್ಲೇಷಣೆ ಕೈಗೊಂಡು, ಈ ಭಾಗದ ಜನರಿಗೆ ಹೆಚ್ಚಿನ ಜಾಗೃತಿ ನೀಡಬೇಕೆಂದು ಸೂಚಿಸಿದರು.ಅಂಗನವಾಡಿ ಕೇಂದ್ರ - 23ಕ್ಕೆ ಭೇಟಿ ನೀಡಿ, ತೀವ್ರ ಅಪೌಷ್ಠಿಕ ತೆಯಿಂದ ಬಳಲುತ್ತಿರುವ ಮಕ್ಕಳನ್ನು ಮೇಲ್ವಿಚಾರಣೆ ಮಾಡಬೇಕು. ತೋಕ, ಮೊಟ್ಟೆ ವಿತರಣೆ ಹಾಗೂ ಪೌಷ್ಠಿಕಾಂಶವುಳ್ಳ ಪದಾರ್ಥಗಳನ್ನು ಪೂರೈಸಬೇಕು. ಗರ್ಭೀಣಿ ಬಾಣಂತಯರಿಗೆ ಸರ್ಮಪಕವಾಗಿ ಪೌಷ್ಠಿಕ ವಿತರಿಸಬೇಕು. ಶಾಲಾ ಪೂರ್ವ ಶಿಕ್ಷಣ ತರಬೇತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಪ್ರತಿ ದಿನ ಮಕ್ಕಳ ಹಾಜರಾತಿ ಸಂಖ್ಯೆ ಪರಿಶೀಲಿಸಿ, ಅಂಗನವಾಡಿ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಸೂಚಿಸಿದರು.
ತದನಂತರ ಹಿರೇಹಣಗಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಳ ಸಂಪರ್ಕ ಕಲ್ಪಿಸಿರುವ ಪರಿಶೀಲಿಸುತ್ತ ಪ್ರತಿ ದಿನ ಕುಡಿಯುವದಕ್ಕೆ ನೀರು ಪೂರೈಕೆ ಹಾಗೂ ನಳ್ಳದ ತೆರಿಗೆ ಪಾವತಿಸುವ ಕುರಿತು ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು.
(ಎಟಿಎಲ್): ಅಟಲ್ ಟಿಂಕರಿಂಗ್ ಲ್ಯಾಬ್ (ಎಟಿಎಲ್) ಮಕ್ಕಳ ಮಾಡಿರುವ ಮಾದರಿಗಳನ್ನು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು. ಸೆನ್ಸರ್ , ಕ್ಯೂರ್ ಕೋಡ್, ಸ್ಮಾರ್ಟ್ ವಿದ್ಯಾಲಯ, ಮೆಕಾನಿಕ್ ಹಾಗೂ ತ್ರೀಡಿ ಪ್ರಿಂಟರ್ ಮಾದರಿಗಳನ್ನು ವೀಕ್ಷಣೆ ಮಾಡಿ ಮೆಚ್ಚುಗೆ ಮಾಡಿದರು. ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ, ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಜಿಪಂ,ತಾಪಂ ಹಾಗೂ ಗ್ರಾಪಂನ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ಗದವರು ಇದ್ದರು.