- ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ರಿಂದ ಪದಕ ಪ್ರದಾನ - - -
ಕುಂಬಳೂರು ಗ್ರಾಮದ ದಿವಂಗತ ಎಂ.ಚನ್ನಯ್ಯ ಹಾಗೂ ಕೊಟ್ರಮ್ಮ ದಂಪತಿ ಪುತ್ರರಾಗಿರುವ ಎಂ. ಮುರುಗೇಂದ್ರಯ್ಯ ಅವರು ಪ್ರಸ್ತುತ ಬೆಂಗಳೂರಿನ ಸಂಪಿಗೆಹಳ್ಳಿ ಉಪ ವಿಭಾಗದ ಸಹಾಯಕ ಪೋಲಿಸ್ ಆಯುಕ್ತರಾಗಿದ್ದಾರೆ.
ರಾಜಭವನದಲ್ಲಿ ಜರುಗಿದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಸಮ್ಮುಖ ರಾಜ್ಯಪಾಲರಿಂದ ರಾಷ್ಟ್ರಪತಿ ಪದಕ ಮತ್ತು ೨೦೨೦ರ ಗುಪ್ತಚರ ಮಾಹಿತಿ ಸಂಗ್ರಹಣೆಗಾಗಿ ಕೇಂದ್ರ ಗೃಹ ಸಚಿವರ ಕುಶಲತಾ ಪದಕ ಸ್ವೀಕರಿಸಿದರು.ಎಂ.ಮುರುಗೇಂದ್ರಯ್ಯ ಅವರು ಕುಂಬಳೂರಿನ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಚಿತ್ರದುರ್ಗದ ನವೋದಯ ಶಾಲೆಯಲ್ಲಿ ಪ್ರೌಢ ಮತ್ತು ಪಿಯು ಶಿಕ್ಷಣ, ಮೈಸೂರಲ್ಲಿ ಪದವಿ, ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಪಡೆದು ೨೦೦೧ರಲ್ಲಿ ಆರಕ್ಷಕ ಇಲಾಖೆಯಲ್ಲಿ ಉಪನಿರೀಕ್ಷಕರಾಗಿ ಕರ್ತವ್ಯಕ್ಕೆ ನೇಮಕಗೊಂಡಿದ್ದರು. ಉಡುಪಿ, ಹಾಸನ, ದಕ್ಷಿಣ ಕನ್ನಡ, ಮಂಡ್ಯ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವಿಗಳು.
ರಾಷ್ಟ್ರಪತಿಗಳ ಪದಕ ಪಡೆದು ತಂದೆ. ತಾಯಿ, ಪೊಲೀಸ್ ಇಲಾಖೆ ಹಾಗೂ ಇಡೀ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಅವರ ಸೇವೆ, ಸಾಧನೆ ಬೇರೆಯವರಿಗೂ ಮಾದರಿಯಾಗಿದೆ.
- - --ಚಿತ್ರ-೧.ಜೆಪಿಜಿ: ರಾಜ್ಯಪಾಲರಿಂದ ಮುರುಗೇಂದ್ರಯ್ಯ ಅವರು ರಾಷ್ಟ್ರಪತಿ ಪದಕ ಸ್ವೀಕರಿಸಿದರು.
-ಚಿತ್ರ-೨. ಕೇಂದ್ರ ಗೃಹ ಸಚಿವರ ಪದಕ.