ಕನ್ನಡಪ್ರಭ ವಾರ್ತೆ ಕೋಲಾರ
ನಗರದ ಹೊರವಲಯದ ಅಂತರಗಂಗೆ ಬೆಟ್ಟದಲ್ಲಿರುವ ಆದಿಮ ಸಾಂಸ್ಕೃತಿಕ ಕೇಂದ್ರದ ೨೦೩ ನೇ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಣ್ಣು ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತು ಪುರಸೊತ್ತಿಲ್ಲದೇ ಎಷ್ಟೇ ದುಡಿದರೂ ಗುರುತಿಸುತ್ತಿಲ್ಲ. ಸಾಮಾಜಿಕವಾಗಿ ಶೋಷಿಣೆಗೊಳಪಡಿಸಿ, ಹಕ್ಕುಗಳನ್ನು ನೀಡದೇ ವಂಚಿಸುತ್ತಿದ್ದಾರೆ. ಹುಡುಗ ಹುಡುಗಿಯರು ಪ್ರೀತಿ, ಪ್ರೇಮ ಎಂದು ಜಾತಿ, ಕುಲ ನೋಡದೇ ಪ್ರೀತಿಸಿಬಿಡುತ್ತಾರೆ. ಅವರ ಜಾತಿಗಳು ಒಂದು ಹೀನ ಮತ್ತೊಂದು ಮೇಲು ಜಾತಿಯಾಗಿದ್ದರೆ ಅವರನ್ನು ಹೊರಗೆ ಹಾಕುತ್ತಾರೆ. ಹಿಂಸಿಸುತ್ತಾರೆ,ಈ ವಿಚಾರಗಳಲ್ಲಿ ಮರ್ಯಾದಾ ಹತ್ಯೆಗಳು ಕೂಡ ನಡೆದಿವೆ ಎಂದರು.ಪಯಣ ಸಂಸ್ಥೆಯ ಯೋಜನಾ ನಿರ್ದೇಶಕಿ ಚಾಂದಿನಿ ಮಾತನಾಡಿ, ಆದಿಮ ೨೦೩ ನೇ ಹುಣ್ಣಿಮೆ ಹಾಡಿನಲ್ಲಿ ನಮ್ಮ ನಾಟಕ ಅಂದರೆ ಮಂಗಳಮುಖಿಯರ ನಾಟಕ ಪ್ರದರ್ಶನವಾಗುತ್ತಿರುವುದು ಅತ್ಯಂತ ಖುಷಿಯ ವಿಚಾರ. ಕಲೆ ಒಬ್ಬರ ಸ್ವತ್ತಲ್ಲ. ಎಲ್ಲರೂ ಒಂದಲ್ಲ ಒಂದು ಪಾತ್ರವನ್ನು ಜೀವನದಲ್ಲಿ ನಟಿಸಿ ಬದುಕುತ್ತೇವೆ. ನಾವೆಲ್ಲರೂ ರಂಗ ಕಲಾವಿದರೇ ಆಗಿರುತ್ತೇವೆ ಎಂದರು.
ಕಲಾವಿದ ಕೆ.ವಿ.ಕಾಳಿದಾಸ ಗದ್ದುಗೆ ಗೌರವ ಸ್ವೀಕರಿಸಿದ ಮೋತಕಪಲ್ಲಿ ರತ್ನಮ್ಮನವರ ಬದುಕು ಮತ್ತು ಕಲೆ ಕುರಿತು ಮಾತನಾಡಿದರು.
ಪಯಣ ಸಂಸ್ಥೆ ಅರ್ಪಿಸಿದ ಮಂಗಳಮುಖಿಯರು ಅಭಿನಯಿಸಿದ ನಾಟಕ ‘ತಲ್ಕಿ’ ಪ್ರೇಕ್ಷಕರ ಗಮನ ಸೆಳೆಯಿತು.
ರಂಗದ ಹಿಂದೆ ತ್ರಿಮೂರ್ತಿ, ಸವಿತಾ, ಹನೀಷ್, ಮದನ್, ಬೆಳಕು ನಿರ್ವಹಣೆಯಲ್ಲಿ ಸಹಕರಿಸಿದ ತುರಂಡಳ್ಳಿ ಶ್ರೀನಿವಾಸ್ ಇದ್ದರು.
ಆದಿಮ ನೀಲಕಂಠೇಗೌಡ, ಹಮಾ ರಾಮಚಂದ್ರ, ಗಂಗನಬೀಡು ಎಂ ವೆಂಕಟಸ್ವಾಮಿ, ಚಾಂದಿನಿ, ರಾಧಾಮಣಿ, ಸವಿತಾ ಗದ್ದುಗೆ ಗೌರವ ನಡೆಸಿಕೊಟ್ಟರು. ಬಾಲಾಜಿ ಪ್ರಿಂಟರ್ಸ್ ಶ್ರೀನಿವಾಸ್, ನಾರಾಯಣಸ್ವಾಮಿ ಶಿಕ್ಷಕರು, ಸಾಹಿತಿ ನ.ಗುರುಮೂರ್ತಿ, ಶಂಕರ್ , ಪ್ರವೀಣ್, ಸಂವಾದ ಪದಾಧಿಕಾರಿಗಳು, ಮಹಿಳಾ ಸಂಘಟನೆಗಳ ಕಾರ್ಯಕರ್ತರು, ರಂಗಾಸಕ್ತರು, ವಿದ್ಯಾರ್ಥಿಗಳು ಇದ್ದರು.