ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಿ: ರಾಹುಲ್

KannadaprabhaNewsNetwork |  
Published : Jan 28, 2025, 12:50 AM IST
27ಕೆಪಿಎಲ್23 ಶಾಲಾ ಮಕ್ಕಳೊಂದಿಗೆ ಜಿಪಂ ಸಿಇಓ ಬಿಸಿಯೂಟ ಸವಿಯುತ್ತಿರುವುದು. | Kannada Prabha

ಸಾರಾಂಶ

ಶೌಚಾಲಯ ಅವಶ್ಯವಿರುವುದರಿಂದ ಗುಣಮಟ್ಟದ ಕಾಮಗಾರಿ ನಿರ್ವಹಿಸಿ ಮಕ್ಕಳಿಗೆ ಬಳಕೆ ನೀಡಬೇಕು.

ಶಾಲಾ ಶೌಚಾಲಯ, ಸಂಜಿವಿನಿ ಶೆಡ್‌ ಕಾಮಗಾರಿ ಪರಿಶೀಲನೆ

ಶಾಲಾ ಮಕ್ಕಳೊಂದಿಗೆ ಬಿಸಿಯೂಟ ಸವಿದ ಜಿಪಂ ಸಿಇಒ

ಕನ್ನಡಪ್ರಭ ವಾರ್ತೆ ಕೊಪ್ಪಳ

ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಒಗ್ಗೂಡಿಸುವಿಕೆ ಮೂಲಕ ಜಾರಿ ಮಾಡುತ್ತಿರುವ ಶಾಲಾ ಶೌಚಾಲಯ ಕಾಮಗಾರಿಗಳನ್ನು ಗುಣಮಟ್ಟದಿಂದ ಅನುಷ್ಠಾನ ಮಾಡಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಕರೆ ನೀಡಿದರು.

ತಾಲೂಕಿನ ಹಾಲವರ್ತಿ, ಗಿಣಿಗೇರಾ ಹಾಗೂ ಚಿಕ್ಕಬೊಮ್ಮನಾಳ ಗ್ರಾಪಂಗಳಲ್ಲಿ ಅನುಷ್ಠಾನಗೊಂಡ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದರು.

ಗ್ರಾಮ ಪಂಚಾಯಿತಿಯ ಕಿಡದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗಿಣಿಗೇರಾ ಗ್ರಾಪಂ ಹಳೆಕನಕಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಒಗ್ಗೂಡಿಸುವಿಕೆ ಮೂಲಕ ಅನುಷ್ಠಾನಗೊಳಿಸಿದ ಶೌಚಾಲಯ ಕಾಮಗಾರಿಗಳನ್ನು ಪರಿಶೀಲಿಸಿದರು. ಶೌಚಾಲಯವನ್ನು ಬಳಕೆಗೆ ನೀಡುವಂತೆ ಸೂಚಿಸಿದರು. ಮಕ್ಕಳಿಗೆ ಇರುವ ಸೌಲಭ್ಯ ಕುರಿತು ಪರಿಶೀಲಿಸಿದರು.

ಶೌಚಾಲಯ ಅವಶ್ಯವಿರುವುದರಿಂದ ಗುಣಮಟ್ಟದ ಕಾಮಗಾರಿ ನಿರ್ವಹಿಸಿ ಮಕ್ಕಳಿಗೆ ಬಳಕೆ ನೀಡಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ತಾಂತ್ರಿಕ ಸಹಾಯಕರಿಗೆ ಸೂಚಿಸಿದರು.

ಚಿಕ್ಕಬೊಮ್ಮನಾಳ ಗ್ರಾಪಂ ಸಂಜಿವಿನಿ ಸಂಘದ ಮಹಿಳೆಯರಿಗೆ ತಮ್ಮ ಚಟುವಟಿಕೆ ನಿರ್ವಹಿಸಲು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಚಿಕ್ಕಬೊಮ್ಮನಾಳ ಗ್ರಾಮ ಪಂಚಾಯಿತಿಯಿಂದ ಅನುಷ್ಠಾನಿಸಲಾದ ಸಂಜಿವಿನಿ ಕಾಮನವರ್ಕ್ ಶೆಡ್‌ ಕಾಮಗಾರಿ ಮುಕ್ತಾಯಗೊಂಡಿದ್ದು, ಕೂಡಲೇ ಸಂಜಿವಿನಿ ಸಂಘದ ಮಹಿಳೆಯರಿಗೆ ಹಸ್ತಾಂತರಿಸಬೇಕೆಂದು ಪಿಡಿಒ, ಆಡಳಿತ ಮಂಡಳಿಗೆ ಸೂಚಿಸಿದರು. 2024-25ನೇ ಸಾಲಿನಲ್ಲಿ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ತುರ್ತಾಗಿ ಮುಕ್ತಾಯಗೊಳಿಸುವಂತೆ ಪಿಡಿಒ ಮತ್ತು ತಾಂತ್ರಿಕ ಸಹಾಯಕರಿಗೆ ಸೂಚಿಸಿದರು. ನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ಆಹಾರ ವಿತರಣೆ ಪರಿಶೀಲಿಸಿದರು.

ಬಿಸಿಯೂಟ ಸವಿದ ಸಿಇಒ:

ಚಿಕ್ಕಬೊಮ್ಮನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಮೊಟ್ಟೆ, ಬಾಳೆಹಣ್ಣು, ಆಹಾರ ವಿತರಣೆ ಕುರಿತು ಚರ್ಚಿಸಿದರು. ಮಕ್ಕಳಿಗೆ ಸ್ವಚ್ಛತೆಯ ಕುರಿತು ಪಾಠ ಮಾಡಿದರು. ಎಲ್ಲ ಮಕ್ಕಳು ತಮ್ಮ ಮನೆಯಲ್ಲಿರುವ ಶೌಚಾಲಯ ಕಡ್ಡಾಯವಾಗಿ ಬಳಕೆ ಮಾಡುವಂತೆ ಕರೆ ನೀಡಿದರು.

ಶಾಲೆಯ ಆವರಣದಲ್ಲಿದ್ದ ಕೂಸಿನ ಮನೆಗೆ ಭೇಟಿ ಕೂಸಿನ ಮನೆಯ ದಾಖಲಾತಿಗಳನ್ನು ಪರಿಶೀಲಿಸಿದರು. ಮಕ್ಕಳಿಗೆ ಆಹಾರ ವಿತರಣೆ ಕುರಿತು ಕೆರ್‌ ಟೆಕರ್ ಮಾಹಿತಿ ನೀಡಿದರು. ಕೂಸಿನ ಮನೆಗೆ ಹೆಚ್ಚಿನ ಆದ್ಯತೆ ನೀಡಿ ಹೆಚ್ಚು ಹೆಚ್ಚು ಮಕ್ಕಳು ದಾಖಲಾಗುವಂತೆ ಕ್ರಮವಹಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ಪ್ರಕಾಶ್‌ ವಿ., ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಜಿಲ್ಲಾ ಪಂಚಾಯಿತಿ ಎಡಿಪಿಸಿ ಮಹಾಂತಸ್ವಾಮಿ, ಗಿಣಿಗೇರಾ ಗ್ರಾಪಂ ಉಪಾಧ್ಯಕ್ಷ ಮಂಜುನಾಥ ಪಾಟೀಲ್‌, ಸದಸ್ಯರಾದ ರವಿಕುಮಾರ ಹಲಗೇರಿ, ಪಿಡಿಒ ಮಂಜುಳಾದೇವಿ ಹೂಗಾರ, ಚಿಕ್ಕಬೊಮ್ಮನಾಳ ಪಿಡಿಒ ಅಂದಿಗಲ್ಲಪ್ಪ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ ಯಮನೂರಪ್ಪ, ಕಾರ್ಯದರ್ಶಿ ಬಸಯ್ಯ ಕೆಂಬೊಡಿಮಠ, ಮಂಜುನಾಥ, ಯಮನೂರಪ್ಪ ತಾಂತ್ರಿಕ ಸಹಾಯಕರಾದ ಮುರುಳಿಧರ, ಅಕ್ಷತಾ, ಮಲ್ಲಿಕಾರ್ಜುನ ಮೆಗಳಮನಿ, ಗ್ರಾಮ ಪಂಚಾಯತಿ, ನರೇಗಾ ಸಿಬ್ಬಂದಿ, ಗ್ರಾಪಂ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನೀತರಾಜಕುಮಾರ ಪುತ್ಥಳಿ ಅನಾವರಣ
ಬೆಂಗಳೂರು ನಗರದಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಾಣ