ಹೊಳೆಆಲೂರು: ನಮ್ಮ ಮತಕ್ಷೇತ್ರದ ಗ್ರಾಮಗಳ ಅಭಿವೃದ್ಧಿಯನ್ನೇ ಮೂಲಮಂತ್ರವಾಗಿಸಿಕೊಂಡು ಸಿಸಿ ರಸ್ತೆ, ಟಾರು ರಸ್ತೆ, ಆರೋಗ್ಯ ಕೇಂದ್ರ, ರೈತರಿಗೆ ಅನುಕೂಲವಾಗುವಂತೆ ಕೃಷಿ ಕೇಂದ್ರ ಹೀಗೆ ಹಲವಾರು ಯೋಜನೆಗಳ ಮೂಲಕ ಸಾಕಷ್ಟು ಅನುದಾನ ನೀಡಲಾಗಿದೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಹೊಳೆಆಲೂರು ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮಗಳು ಪ್ರವಾಹಕ್ಕೀಡಾದಾಗ ಜನರ ನೋವು ನೋಡದೇ ಅಂದಿನ ಮುಖ್ಯ ಮಂತ್ರಿಗಳು ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿ ನವಗ್ರಾಮ ಮಾಡಿದ್ದೇವೆ. ಅವುಗಳನ್ನು ಕ್ರಮೇಣ ಅಭಿವೃದ್ಧಿಪಡಿಸುತ್ತಿದ್ದೇವೆ ಎಂದರು.
ಸಾನ್ನಿಧ್ಯವನ್ನು ಯಚ್ಚರಸ್ವಾಮಿಗಳು ವಹಿಸಿದ್ದರು. ಶಾಸಕ ಎಂ.ಆರ್. ಪಾಟೀಲ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ನಿಂಗನಗೌಡ್ರು ಪಾಟೀಲ, ರುದ್ರಗೌಡ ಪಾಟೀಲ, ಜಿ.ಪಿ. ಪಾಟೀಲ, ಅಂದಪ್ಪ ಮಾಳವಾಡ, ಸೋಮಶೇಖರ ಚರೆದ, ಉಮೇಶಗೌಡ ಪಾಟೀಲ, ಸುರೇಶಗೌಡ ಪಾಟೀಲ, ಅಶೋಕ ಹೆಬ್ಬಳ್ಳಿ, ಮುತ್ತಣ್ಣ ಜಂಗಣ್ಣವರ, ಶಶಿಧರ ಪಾಟೀಲ, ಅಡಿವೆಪ್ಪ ಮೇಟಿ, ಸೋಮು ಹುಡೇದ, ಶಿವಕುಮಾರ ನೀಲಗುಂದ, ವಿ.ಎಸ್. ಹಿರೇಮಠ, ದೇವರಾಜ ದೇಸಾಯಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಸವರಾಜ ಗಿರಿತಿಮ್ಮಣ್ಣವರ ಸೇರಿದಂತೆ ಇತರರು ಇದ್ದರು.8ರಂದು ಸಂಗೀತ ಸಂಜೆ ಕಾರ್ಯಕ್ರಮ
ಗದಗ: ಗಾನಲಹರಿ ಸಾಂಸ್ಕೃತಿಕ, ಕಲಾ ಸಂಸ್ಥೆ ಹಾವೇರಿ, ಅಜೆಯ ಮ್ಯೂಜಿಕಲ್ ಅಕಾಡೆಮಿ ಕೊಪ್ಪಳ ಇವರ ಸಹಯೋಗದಲ್ಲಿ ಆ. 8ರಂದು ನಗರದ ಭೀಮಸೇನ್ ಜೋಶಿ ರಂಗಮಂದಿರದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದ್ದು, ನಟ ಡಾ. ಶ್ರೀನಾಥ್ ಆಗಮಿಸಲಿದ್ದಾರೆ ಎಂದು ಶೀಲಾ ಪಾಟೀಲ ಹೇಳಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಸಾನಿಧ್ಯವನ್ನು ವೀರೇಶ್ವರ ಪುಣ್ಯಾಶ್ರಮದ ಡಾ. ಕಲ್ಲಯ್ಯಜ್ಜನವರು, ಬಳಗಾನೂರಿನ ಶಿವಶಾಂತವೀರ ಶರಣರು ವಹಿಸುವರು. ಫೀರಸಾಬ್ ಕೌತಾಳ್ ಕಾರ್ಯಕ್ರಮವನ್ನು ಉದ್ಘಾಟಿಸುವರು ಎಂದರು.ಅಧ್ಯಕ್ಷತೆಯನ್ನು ಶೀಲಾ ವೀರನಗೌಡ ಪಾಟೀಲ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಎಚ್.ಕೆ. ಪಾಟೀಲ, ಸಭಾಪತಿ ಜಿ.ಎಸ್. ಪಾಟೀಲ, ಶಾಸಕ ಸಿ.ಸಿ. ಪಾಟೀಲ, ಸಚಿನ್ ಪಾಟೀಲ, ರಾಜಶೇಖರ ಕಲ್ಲೂರ, ಡಾ. ಬಸವರಾಜ ಬಳ್ಳಾರಿ, ಗವಿಸಿದ್ದಪ್ಪ ಪಲ್ಲೇದ, ಡಾ. ಶ್ರೀಧರ ಕುರಡಗಿ, ಸಿದ್ದರಾಮೇಶ್ವರ ಗಡೇದ, ವಿಜಯಕುಮಾರ ಗಡ್ಡಿ, ಇಮಾಮ್ ಮೊರಬದ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಮರ ಜವಳಿ, ಶಶಾಂಕ್ ಗಜಾಕೋಶ ಇದ್ದರು.