7ಗಂಟೆ ವಿದ್ಯುತ್‌ ನೀಡಲು ಘಟಕ ಸ್ಥಾಪನೆಗೆ ಆದ್ಯತೆ

KannadaprabhaNewsNetwork |  
Published : Feb 22, 2026, 03:00 AM IST
ಸವದಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಅಥಣಿ ತಾಲೂಕಿನ ರೈತರು ಸ್ವಾವಲಂಬಿಗಳಾಗಿಬೇಕು. ರೈತರ ಸರ್ವಾಂಗಿಣ ಅಭಿವೃದ್ಧಿಗೆ ವಿದ್ಯುತ್ ಶಕ್ತಿ ಮಹತ್ವದ್ದಾಗಿದೆ. ದಿನದ 7 ಗಂಟೆ ವಿದ್ಯುತ್ ಸೌಲಭ್ಯ ದೊರಕುವ ನಿಟ್ಟಿನಲ್ಲಿ ಅಗತ್ಯವಿರುವ ಗ್ರಾಮಗಳಲ್ಲಿ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಆದ್ಯತೆ ನೀಡಲಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ತಾಲೂಕಿನ ರೈತರು ಸ್ವಾವಲಂಬಿಗಳಾಗಿಬೇಕು. ರೈತರ ಸರ್ವಾಂಗಿಣ ಅಭಿವೃದ್ಧಿಗೆ ವಿದ್ಯುತ್ ಶಕ್ತಿ ಮಹತ್ವದ್ದಾಗಿದೆ. ದಿನದ 7 ಗಂಟೆ ವಿದ್ಯುತ್ ಸೌಲಭ್ಯ ದೊರಕುವ ನಿಟ್ಟಿನಲ್ಲಿ ಅಗತ್ಯವಿರುವ ಗ್ರಾಮಗಳಲ್ಲಿ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಆದ್ಯತೆ ನೀಡಲಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.ತಾಲೂಕಿನ ಯಲಿಹಡಲಗಿ ಗ್ರಾಮದಲ್ಲಿ ₹ 18.59 ಕೋಟಿ ವೆಚ್ಚದಲ್ಲಿ 110 ಕೆ.ವಿ ವಿದ್ಯುತ್ ವಿತರಣಾ ಘಟಕ ಹಾಗೂ ₹ 65 ಲಕ್ಷ ವೆಚ್ಚದ ಆರೋಗ್ಯ ಇಲಾಖೆಯ ಉಪ-ಕೇಂದ್ರದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿದ್ಯುತ್‌ ಮೂಲಾಧಾರ. ಲೋ-ವೋಲ್ಟೇಜ್ ಸಮಸ್ಯೆಯಿಂದ ರೈತರ ಪಂಪ್‌ಸೆಟ್‌ಗಳು ಸುಟ್ಟು ಹೋಗುತ್ತಿರುವುದನ್ನು ತಡೆಗಟ್ಟಲು ಈ ನೂತನ ಉಪಕೇಂದ್ರ ಮಂಜೂರು ಮಾಡಿಸಲಾಗಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಇಂತಹ 4 ಕೇಂದ್ರಗಳ ಕಾಮಗಾರಿ ಆರಂಭವಾಗಲಿದ್ದು, ಇವು ಪೂರ್ಣಗೊಂಡರೆ ಮುಂದಿನ 20 ವರ್ಷಗಳ ಕಾಲ ರೈತರಿಗೆ ಗುಣಮಟ್ಟದ ವಿದ್ಯುತ್ ಲಭ್ಯವಾಗಲಿದೆ ಎಂದರು.ಮುಂಬರುವ ದಿನಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಮೂಲಕ ಆಧುನಿಕ ಕೃಷಿ ಮಾಡುವ ಕಾಲ ಬರಲಿದೆ. ಅದಕ್ಕೆ ಪೂರಕವಾಗಿ ಅಥಣಿಯಲ್ಲಿ 120 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದಿಸುವ ನಿಟ್ಟಿನಲ್ಲಿ ರೂಪರೇಷಗಳು ಸಿದ್ದಗೊಳ್ಳುತ್ತಿವೆ. ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಸುವವರಿಗೆ ವಿದ್ಯುತ್ ಕೊರತೆಯಾಗದಂತೆ ಕ್ರಮ ಜರುಗಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.ರೈತಾಪಿ ಜನರಿಗೆ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ದೊರಕಬೇಕು ಎಂಬ ತಾಲೂಕಿನ 9 ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರಗಳನ್ನು ಸ್ಥಾಪಿಸುವ ಸಂಕಲ್ಪ ಹೊಂದಲಾಗಿದೆ. ಯಲಡಗಿ ಗ್ರಾಮದಲ್ಲಿ ಒಂದು ಉಪ ಕೇಂದ್ರ ಆರಂಬಿಸಲು ಇಂದು ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಹೆಸ್ಕಾಂ ಕಾರ್ಯಪಾಲಕ ಅಭಿಯಂತರ ಜಿ.ವ್ಹಿ.ಸಂಪಣ್ಣವರ, ಕೆಪಿಟಿಸಿಎಲ್ ಅಧಿಕಾರಿ ಮಂಜಪ್ಪ ಅಪ್ಪಣ್ಣವರ, ತಾಲೂಕ ಆರೋಗ್ಯ ಅಧಿಕಾರಿ ಡಾ.ಬಸಗೌಡ ಕಾಗೆ, ಡಾ.ಎಂ.ಬಿ.ಬಾಲಪ್ಪನವರ, ಸಂಜು ಅಮ್ಮನವರ, ಮಾನಸಿಂಗ, ಬೋರಡೆ, ಚಂದ್ರಶೇಖರ್ ನೇಮಗೌಡ, ಆರ್.ಆರ್.ತೆಲಸoಗ, ಶಿವಾನಂದ ಗುಡ್ಡಾಪುರ, ಸಿದ್ರಾಯ ನಾಯಕ, ಘಟವಾಳಪ್ಪ ಗುಡ್ಡಾಪುರ, ನೂರ್ ಅಹ್ಮದ್ ಡೊಂಗರಗಾವ, ಗುರುದತ್ತ ಕಲಕರ್ಣಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಐ ಶೃಂಗಸಭೆ ಕಾಂಗ್ರೆಸ್‌ ಅಡ್ಡಿಗೆ ಬಿಜೆಪಿ ಆಕ್ರೋಶ
ಬಾಗಲಕೋಟೆಯಲ್ಲಿ ಹಿಂದೂಗಳ ಭವ್ಯ ಶೋಭಾಯಾತ್ರೆ