ಕೈದಿ ಸಂತೋಷನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

KannadaprabhaNewsNetwork |  
Published : Jul 16, 2026, 01:30 AM IST
ಫೋಟೋ- ಸೆಂಟ್ರಾ ಕೈದಿಪೊಲೀಸ್‌ ಫೈರಿಂಗ್‌ನಲ್ಲಿ ಗಾಯಗೊಂಡಿರುವ ಕೈದಿ ಸಂತೋಷನಿಗೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡುತ್ತಿರುವ ನೋಟ | Kannada Prabha

ಸಾರಾಂಶ

Prisoner Santosh undergoing treatment at the hospital.

ಕಲಬುರಗಿ‌: ಜೈಲಿನ ಬ್ಯಾರಕ್ ಕಂಬಿಗಳನ್ನ ಕಟ್ ಮಾಡಿ ಸೆಂಟ್ರಲ್ ಜೈಲಿನಿಂದ ಎಸ್ಕೇಪ್ ಆಗಿದ್ದ ಮೂವರು ಸಜಾ ಕೈದಿಗಳಲ್ಲಿ ಓರ್ವ ಕೈದಿ ಸಂತೋಷ ಮೇಲೆ ಬುಧವಾರ ಬೆಳಗ್ಗೆ ನಗರ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಬೀದರ ಜಿಲ್ಲೆಯ ಔರಾದ ತಾಲೂಕಿನ ಸಂತಾಪುರ ಗ್ರಾಮದ ಪೋಸ್ಕೊ ಕೇಸ್ ನಡಿ ಸಜಾ ಬಂಧಿ ಸಂತೋಷ ಬಸಪ್ಪ ಮೇತ್ರೆ ಎಂಬ ಕೈದಿ ಮೇಲೆ ಫೈರಿಂಗ್ ಮಾಡಿ ಬಂಧಿಸಲಾಗಿದೆ. ಜಿಲ್ಲಾ ಆಸ್ಪತ್ರೆ ಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಗರ ಹೊರವಲಯದ ಕಪನೂರ ಕೈಗಾರಿಕಾ ಪ್ರದೇಶದಲ್ಲಿ ಕಾಲಿಗೆ ಗುಂಡು ಹೊಡೆದು ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ. ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಮೂಲಕ ಎಸ್ಕೇಪ್ ಆಗಿದ್ದರು. ಸಜಾ ಕೈದಿಗಳು ಹೇಗೆ ಪರಾರಿಯಾದರೆಂಬ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕೈದಿಗಳು ಬಿಂದಾಸ್ ಆಗಿ ನಡೆದುಕೊಂಡು ಹೋಗಿ ಕಾರ್ ಹತ್ತಿದ್ದ ಆರೋಪಿಗಳು, ಅಲ್ಲಿಂದ ಬೀದರ್ ಕಡೆಗೆ ಏಸ್ಕೇಪ್ ಆಗಿದ್ದಾರೆ.

ಫೋಟೋ- ಸೆಂಟ್ರಾ ಕೈದಿ

ಪೊಲೀಸ್‌ ಫೈರಿಂಗ್‌ನಲ್ಲಿ ಗಾಯಗೊಂಡಿರುವ ಕೈದಿ ಸಂತೋಷನಿಗೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡುತ್ತಿರುವ ನೋಟ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ರಮವಾಗಿ ಬಂದು ಸಿಂಧನೂರಲ್ಲಿ ನೆಲೆಸಿದ್ದ ಬಾಂಗ್ಲಾ ನಿವಾಸಿ
ಕಾಯೋ ಮಳೆರಾಯ ಬಿಡಬೇಡ ಜನರ ಕೈಯ್ಯ