ಕಲಬುರ್ಗಿಗೆ ಪ್ರಿಯಾಂಕ್ ಖರ್ಗೆ ಕೊಡುಗೆ ಶೂನ್ಯ: ಸಂಸದ ಜಾಧವ್‌

KannadaprabhaNewsNetwork |  
Published : Apr 07, 2024, 01:45 AM IST
ಬಿಜೆಪಿ ಕಾರ್ಯಕರ್ತರ ಬೂತ್ ಮಟ್ಟದ ಸಭೆ ಉದ್ದೇಶಿಸಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್ ಮಾತನಾಡಿದರು. ಶಾಸಕ ಬಸವರಾಜ ಮತ್ತಿಮಡು ಹಾಗೂ ಪ್ರಮುಖರು ಇದ್ದರು. | Kannada Prabha

ಸಾರಾಂಶ

ಚುನಾವಣೆ ಬಂದಾಗ ಮಾತ್ರ ಕಲಬುರ್ಗಿಯಲ್ಲಿ ಉಳಿದಿಕೊಳ್ಳವ ಮೂಲಕ ಗೆದ್ದ ಬಳಿಕ ಬೆಂಗಳೂರಿನಲ್ಲಿ ಠಿಕಾಣಿ ಹೂಡುವ ಪ್ರಿಯಾಂಕ್ ಖರ್ಗೆ ಗೆಲುವಿನ ಕನಸಿಗೆ ಈ ಬಾರಿ ಎಳ್ಳುನೀರು ಬೀಡಬೇಕು ಎಂದು ಬಿಜೆಪಿ ಲೋಕಸಭೆ ಅಭ್ಯರ್ಥಿ ಡಾ. ಉಮೇಶ ಜಾಧವ್ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ವಾಡಿಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕೊಡುಗೆ ಕಲಬುರ್ಗಿಗೆ ಶೂನ್ಯವಾಗಿದೆ. ಚುನಾವಣೆ ಬಂದಾಗ ಮಾತ್ರ ಕಲಬುರ್ಗಿಯಲ್ಲಿ ಉಳಿದಿಕೊಳ್ಳವ ಮೂಲಕ ಗೆದ್ದ ಬಳಿಕ ಬೆಂಗಳೂರಿನಲ್ಲಿ ಠಿಕಾಣಿ ಹೂಡುವ ಪ್ರಿಯಾಂಕ್ ಖರ್ಗೆ ಗೆಲುವಿನ ಕನಸಿಗೆ ಈ ಬಾರಿ ಎಳ್ಳುನೀರು ಬೀಡಬೇಕು ಎಂದು ಬಿಜೆಪಿ ಲೋಕಸಭೆ ಅಭ್ಯರ್ಥಿ ಡಾ. ಉಮೇಶ ಜಾಧವ್ ವಾಗ್ದಾಳಿ ನಡೆಸಿದರು.

ಲೋಕಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಪಟ್ಟಣದ ಸಾಹೇಬ್ ಫಂಕ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಭಾರತೀಯ ಜನತಾ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

₹32 ಕೊಟಿ ವೆಚ್ಚದಲ್ಲಿ ವಾಡಿ ರೈಲು ನಿಲ್ದಾಣ ಅಭಿವೃದ್ಧಿಗೆ ಕೇಂದ್ರ ಸರಕಾರ ಕಾಳಜಿ ವಹಿಸಿದೆ. ₹280 ಕೊಟಿ ಜಲ ಜೀವನ ಮಿಷನ್ ಮೂಲಕ ಸನ್ನತಿ ಬ್ಯಾರೇಜ್‍ನಿಂದ ನೂರಾ ಇಪ್ಪತ್ತು ಹಳ್ಳಿಗಳಿಗೆ ಮನೆಮನೆಗೆ ನೀರು ನೀಡಿದ್ದೇವೆ. ಡಾ.ಅಂಬೇಡ್ಕರ ಅವರಿಗೆ ಸಂಭಂದಿಸಿದ ಪವಿತ್ರ ಸ್ಥಳಗಳನ್ನು ಪಂಚ ತಿರ್ಥ ಸ್ಥಳ ಎಂದು ಘೋಷಣೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿಜಿ ಅವರು. ಪ್ರಚಾರಕ್ಕಾಗಿ ಪ್ರತಿ ವೇದಿಕೆಯ ಮೇಲೆ ಡಾ.ಅಂಬೇಡ್ಕರ ಅವರ ಬಗ್ಗೆ ಮಾತಾಡುವ ಕಾಂಗ್ರೆಸ್ ಭಾರತ ರತ್ನ ಪ್ರಶಸ್ತಿ ನೀಡಲಾಗಿಲ್ಲ. ಅದಕ್ಕೂ ಬಿಜೆಪಿ ಸರ್ಕಾರ ಬರಬೇಕಾಯಿತು. ಅಂದಿನ ಕಾಂಗ್ರೆಸ್ ಸರ್ಕಾರ ಪಾರ್ಲಿಮೆಂಟ್ ಸೇಂಟ್ರಲ್ ಹಾಲ್‍ನಲ್ಲಿ ಡಾ.ಅಂಬೇಡ್ಕರ್ ಅವರ ಭಾವಚಿತ್ರ ಹಾಕಲು ಬಿಡಲಿಲ್ಲ ಅದಕ್ಕೂ ಬಿಜೆಪಿ ಸರ್ಕಾರ ಬರುವರೆಗೂ ಕಾಯಬೇಕಾಯಿತು ಎಂದರು.

ಎಂಎಲ್‌ಸಿ ಸುನಿಲ್ ವಲ್ಯಾಪುರೆ ಮಾತನಾಡಿ, ಕಮಲದ ಬಾವುಟ ಹಾರಿಸಲು ಶಹಾಬಾದ-ವಾಡಿ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದೆ. ಕಾಂಗ್ರೆಸ್ ನಾಯಕರ ಕುತಂತ್ರದಿಂದ ಜಿಲ್ಲೆಯಲ್ಲಿ ಬಿಗಿವಿನ ವಾತಾವರಣ ಸೃಷ್ಟಿಯಾಗಿದೆ. ಬಿಜೆಪಿ ಕಾರ್ಯಕರ್ತರನ್ನು ಬಗ್ಗುಬಡಿಯುವ ಕುತಂತ್ರ ಜಿಲ್ಲಾ ಉಸ್ತುವಾರಿ ಸಚಿವರು ಮಾಡಿದ್ದಾರೆ ಎಂದು ಗುಡುಗಿದರು.

ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿ, ಚುನಾವಣೆ ಬಂದಾಗ ಮಾತ್ರ ಕಲಬುರ್ಗಿಯಲ್ಲಿ ಠಿಕಾಣಿ ಹೂಡುವ ಪ್ರಿಯಾಂಕ್ ಖರ್ಗೆ, ಚುನಾವಣೆ ಮುಗಿದ ಬಳಿಕ ಬೆಂಗಳೂರಿಗೆ ಶಿಫ್ಟ್ ಆಗುವ ಅವರ ವರ್ತನೆ ಮತದಾರರಿಗೆ ಗೊತ್ತಿದೆ ಎಂದರು.

ದತ್ತಾತ್ರೇಯ ಪಾಟೀಲ ರೇವೂರ, ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದವಾಡಗಿ, ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ ಮಾತನಾಡಿದರು.

ಬಿಜೆಪಿ ಹಿರಿಯ ಮುಖಂಡ ಬಸವರಾಜ ಪಂಚಾಳ, ಬಸವರಾಜ ಬೇಣ್ಣೂರು, ಚಿತ್ತಾಪುರ ಮಂಡಲದ ಅಧ್ಯಕ್ಷ ರವಿ ಸಜ್ಜನಶೇಟ್ಟಿ, ಶ್ರೀಠಾಕೂರ್ ಮಹಾರಾಜ, ವಿಠ್ಠಲ್ ನಾಯಕ, ರಮೇಶ ಕಾರಬಾರಿ, ಗಿರಿಮಲಪ್ಪ ಕಟ್ಟಿಮನಿ, ಭೀಮರಾವ್ ದೊರೆ, ಸಿದ್ದಣ್ಣ ಕಲಶೇಟ್ಟಿ, ಭಾಗವತ್ ಸುಳೆ, ರಾಮಚಂದ್ರ ರೆಡ್ಡಿ, ಭೀಮಾಶ ಜಿರೋಳ್ಳಿ, ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ, ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಕಿಶನ್ ಜಾಧವ್, ನಾಗರಾಜ ಹೂಗಾರ, ಹರಿ ಗಲಾಂಡೆ, ಅಣ್ಣಾರಾವ ಬಾಳಿ, ಶ್ಯಾಮಸನ್ ಐ.ರೆಡ್ಡಿ, ಅಶೋಕ ದೈಯಾಂಡೆ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಸಂಘಗಳ ಬಲವರ್ಧನೆಗೆ ವಿಮೆ ಅನಿವಾರ್ಯ
ಕವಿಚಕ್ರವರ್ತಿ ರನ್ನನ ಇತಿಹಾಸ ಉಳಿಸಿ, ಬೆಳೆಸಬೇಕಿದೆ: ಎ.ಎಂ. ಕಂಬಾರ