- ಸಿದ್ದು, ಡಿಕೆಶಿ ಬೆಳಗಾವಿಗೆ ಬಂದಾಗ ಚರ್ಚೆ ಆಗಿತ್ತುಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಿಯಾಂಕಾ ಜಾರಕಿಹೊಳಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಜಿಲ್ಲೆ ನಾಯಕರ ಜತೆ ಇನ್ನೊಂದು ಬಾರಿ ಚರ್ಚಿಸಿ ಹೇಳುತ್ತೇನೆಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ತಿಳಿಸಿದ್ದೇನೆ. ಈ ಬಗ್ಗೆ ಅಭ್ಯರ್ಥಿ ಆಗುವವರ ಅಭಿಪ್ರಾಯ ಕೇಳಬೇಕು. ಅವರೇನಾದರೂ ತಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದರೆ ಕಷ್ಟ ಎಂದರು.
ಬೆಳಗಾವಿ, ಚಿಕ್ಕೋಡಿ ಕ್ಷೇತ್ರಗಳ ಆಯ್ಕೆಗಾಗಿ ಒಂದು ಸುತ್ತಿನ ಚರ್ಚೆ ನಡೆದಿದೆ. ಅಭ್ಯರ್ಥಿಗಳ ಆಯ್ಕೆಗಾಗಿ ಇನ್ನೂ ಸಮಯ ಇದೆ. ಇನ್ನೊಂದು ಸುತ್ತಿನ ಚರ್ಚೆ ಮಾಡುತ್ತೇವೆ. ಎಲ್ಲವನ್ನೂ ಅಳೆದು, ತೂಗಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಚುನಾವಣೆ ಘೋಷಣೆ ನಂತರ 15 ದಿನ ಸಮಯ ಇದ್ದು, ಬೆಳಗಾವಿ, ಚಿಕ್ಕೋಡಿ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ 2ನೇ, 3ನೇ ಅಥವಾ ಕೊನೇ ಹಂತದವರೆಗೆ ಹೋಗುತ್ತದೆ ಎಂದರು.