ಪ್ರತಿ ಮನೆಗೆ ಕಸದ ಬುಟ್ಟಿ ವಿತರಣೆ ಕಾರ್ಯಕ್ರಮ
ಕಸದ್ದೆ ಬಹಳ ದೊಡ್ಡ ಸಮಸ್ಯೆ, ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸಿ ಕೊಡಿ ಆಗ ಸಮಸ್ಯೆ ಪರಿಹಾರ ಆಗುತ್ತದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಬೆಂಗಳೂರು ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾಡಳಿತ ಚಿಕ್ಕಮಗಳೂರು, ಪುರಸಭೆ ತರೀಕೆರೆಯಿಂದ ಪಟ್ಟಣದ ಶ್ರೀ ರೇವಣಸಿದ್ದೇಶ್ವರ ಸರ್ಕಲ್‌ನಲ್ಲಿ ಸ್ವಚ್ಚ ಭಾರತ (ನಗರ)1.0 ಯೋಜನೆಯಡಿ ಮನೆ ಮನೆ ತ್ಯಾಜ್ಯ ಸಂಗ್ರಹಿಸಲು ಪ್ರತಿ ಮನಗೆ ಕಸದ ಬುಟ್ಟಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಈ ಊರು ನಮ್ಮದೇ ಎಂದು ತಿಳಿದು ಕಸವನ್ನು ಚರಂಡಿಗೆ ಹಾಕಬೇಡಿ, ಕಸ ವಿಂಗಡಿಸಿದರೆ ಅರ್ಧ ಕೆಲಸ ಮುಗಿದ ಹಾಗೆ, ಮನೆ ಚರಂಡಿ ಸ್ವಚ್ಛವಾಗಿರುತ್ತದೆ. ಸಂಗ್ರಹಿಸಿದ ಕಸವನ್ನು ಗೊಬ್ಬರವನ್ನಾಗಿ ಮಾರ್ಪಡಿಸಲಾಗುತ್ತಿದೆ. ಜನರು ಸಹಕಾರ ನೀಡಿದರೆ ಅಭಿವೃದ್ಧಿ ಕಾರ್ಯ ಆಗುತ್ತದೆ ಎಂದು ಹೇಳಿದರು.
ಪುರಸಭೆ ಅದ್ಯಕ್ಷ ವಸಂತ ಕುಮಾರ್ ಮಾತನಾಡಿ, ಒಣ ಹಾಗೂ ಹಸಿ ಕಸ ಬೇರ್ಪಡಿಸಿ ಕೊಡಬೇಕು ಎಂದು ಹೇಳಿದರು.
ಪುರಸಭೆ ಉಪಾಧ್ಯಕ್ಷೆ ಪಾರ್ವತಮ್ಮ, ಪುರಸಭಾ ಸದಸ್ಯರಾದ ಗಿರಿಜಾ ಪ್ರಕಾಶ್ ವರ್ಮ, ದಿವ್ಯ, ಪುರಸಭೆ ನಾಮಿನಿ ಸದಸ್ಯ ಆದಿಲ್ ಪಾಶ ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮತ್ತಿತರರು ಮಾತನಾಡಿದರು. ಪುರಸಭೆ ಸದಸ್ಯರಾದ ಕುಮಾರಪ್ಪ, ರಿಹಾನ ಪರ್ವಿನ್, ಯಶೋದಮ್ಮ ಮತ್ತಿತರರು ಭಾಗವಹಿಸಿದ್ದರು.