ಕಿತ್ತೂರ ಚೆನ್ನಮ್ಮ, ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ

KannadaprabhaNewsNetwork |  
Published : Nov 04, 2026, 03:15 AM IST
ಶಿಗ್ಗಾಂವಿ ತಾಲೂಕು ಕ್ರೀಡಾಂಗಣದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ, ಕನ್ನಡ ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ ಜರುಗಿತು. | Kannada Prabha

ಸಾರಾಂಶ

ಶಿಗ್ಗಾಂವಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ಮತ್ತು ಕನ್ನಡ ನಾಡಿನ ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆಗೆ ಜರುಗಿತು.

ಶಿಗ್ಗಾಂವಿ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ಮತ್ತು ಕನ್ನಡ ನಾಡಿನ ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆಗೆ ಜರುಗಿತು.ಕ್ರೀಡಾಂಗಣದಿಂದ ಆರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದವರೆಗೆ ಸಾಗಿ ಬಂದಿತು.ಝಾಂಜಮೇಳ, ಡೊಳ್ಳು ಕುಣಿತ ಹಾಗೂ ಗೊಂಬೆಗಳು ಕುಣಿತ ಆಕರ್ಷಕವಾಗಿತ್ತು. ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಧ್ವನಿವರ್ಧಕ (ಡಿ.ಜೆ.) ಹಾಡಿಗೆ ಯುವಕರು ತಂಡೋಪ ತಂಡವಾಗಿ ಸಾಮೂಹಿಕವಾಗಿ ಕುಣಿದು ಕುಪ್ಪಳಿಸಿದರು. ಕಿತ್ತೂರ ರಾಣಿ ಚೆನ್ನಮ್ಮ ಮತ್ತು ಕನ್ನಡ ನಾಡಿನ ಭುವನೇಶ್ವರಿದೇವಿ ಭಾವಚಿತ್ರಗಳಿಗೆ ವಿವಿಧ ಗಣ್ಯರು, ಮಹಿಳೆಯರು ಮಕ್ಕಳು ಸೇರಿದಂತೆ ಸಾರ್ವಜನಿಕರು ಪ್ರತಿ ಓಣಿಗಳಲ್ಲಿ ಹೂಹಾರ ಹಾಕಿ ಹಣ್ಣು ಕಾಯಿಗಳಿಂದ ವಿಶೇಷ ಪೂಜೆ ಸಲ್ಲಿಸಿದರು. ಕುದರೆ ಮೇಲೆ ಕುಳಿತ ಬಾಲ ಕಿತ್ತೂರ ಚೆನ್ನಮ್ಮ ಮೆರವಣಿಗೆಗೆ ಮೆರುಗು ತಂದಳು.ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಂಸದ ಮಂಜುನಾಥ ಕುನ್ನೂರ, ಕಾಂಗ್ರೆಸ್ ಮುಖಂಡ ಎಂ.ಎಂ. ಪಠಾಣ, ಮುಖಂಡರಾದ ಸಿದ್ದಾರ್ಥಗೌಡ ಪಾಟೀಲ, ವೀರೇಶ ಆಜೂರ, ಶಿವಾನಂದ ಬಾಗೂರ, ಭರಮಜ್ಜ ನವಲಗುಂದ, ವೀರಣ್ಣ ಬಡ್ಡಿ, ಮಾಲತೇಶ ಯಲಿಗಾರ, ಉಮೇಶ ಗೌಳಿ, ಶಿವಾನಂದ ಮ್ಯಾಗೇರಿ, ತಿಪ್ಪಣ್ಣ ಸಾತಣ್ಣವರ, ರಮೇಶ ವನಹಳ್ಳಿ, ಶ್ರೀಕಾಂತ ಬುಳ್ಳಕ್ಕನವರ, ಪ್ರಶಾಂತ ಬಡ್ಡಿ, ಕರೆಪ್ಪ ಕಟ್ಟಿಮನಿ, ವಸಂತಾ ಬಾಗೂರ, ಪ್ರೇಮಾ ಪಾಟೀಲ, ಶಂಭಣ್ಣ ಆಜೂರ, ಮಂಜುನಾಥ ಕಾರಡಗಿ, ಮಂಜುನಾಥ ಮಣ್ಣಣ್ಣವರ, ಬಸಲಿಂಗಪ್ಪ ನವಲಗುಂದ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ