ಕನ್ನಡಪ್ರಭ ವಾರ್ತೆ ಮೂಡಲಗಿ
ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯ ಪುನರುಜ್ಜೀವನಕ್ಕೆ ಈ ಬಜೆಟ್ ವಿಶೇಷ ಆದ್ಯತೆ ನೀಡಿದೆ. ಬಹುಭಾಷಾ ಎಐ ಆಧಾರಿತ ‘ಭಾರತ್ ವಿಸ್ತಾರ್’ ಸಾಧನದ ಮೂಲಕ ರೈತರಿಗೆ ಬೆಳೆ ಸಲಹೆ, ಅಪಾಯ ನಿರ್ವಹಣೆ ಮತ್ತು ಮಾರುಕಟ್ಟೆ ಮಾರ್ಗದರ್ಶನ ಒದಗಿಸಲಾಗುತ್ತದೆ. 500 ಜಲಾಶಯಗಳ ಅಭಿವೃದ್ಧಿ ಹಾಗೂ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ ಇವುಗಳೆಲ್ಲವೂ ರೈತರ ಆದಾಯ ವೃದ್ಧಿ ಮತ್ತು ಗ್ರಾಮೀಣ ಆರ್ಥಿಕ ಚೈತನ್ಯಕ್ಕೆ ಶಕ್ತಿ ತುಂಬಲಿವೆ. ರೇಷ್ಮೆ, ಉಣ್ಣೆ, ಸೆಣಬು ಹಾಗೂ ಜವಳಿ ವಲಯಕ್ಕೆ ಸಂಬಂಧಿಸಿದ ರಾಷ್ಟ್ರೀಯ ಫೈಬರ್ ಯೋಜನೆ, ಮೆಗಾ ಟೆಕ್‌ಟೈಲ್ಸ್ ಪಾರ್ಕ್‌ಗಳು, ಕೈಮಗ್ಗ ಮತ್ತು ಕರಕುಶಲ ಯೋಜನೆಗಳು, ಕರ್ನಾಟಕದ ಸಾಂಪ್ರದಾಯಿಕ ಉದ್ಯೋಗಗಳಿಗೆ ಹೊಸ ಜೀವ ತುಂಬಲಿವೆ. ತೆಂಗು, ಶ್ರೀಗಂಧ, ಗೇರು ಮತ್ತು ಕೊಕೊ ಬೆಳೆಗಳಿಗೆ ಉತ್ತೇಜನ, ಕರ್ನಾಟಕದಲ್ಲಿ ಕೃಷಿ ವೈವಿಧ್ಯತೆ ಮತ್ತು ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರಿಯಾಗಿವೆ ಎಂಬುದನ್ನು ವಿವರಿಸಿದರು.
ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂ.ಎಸ್.ಎಂ.ಇ) ನೀಡಿರುವ ಬಲಿಷ್ಠ ಬೆಂಬಲ, 2 ಮತ್ತು 3ನೇ ಹಂತದ ನಗರಗಳ ಆರ್ಥಿಕ ಚಟುವಟಿಕೆಗಳನ್ನು ವೇಗಗೊಳಿಸಲಿದೆ. ಕಾರ್ಪೊರೇಟ್ ಮಿತ್ರ ಯೋಜನೆ, ಸ್ವಾವಲಂಬಿ ಭಾರತ ನಿಧಿಯಡಿ ₹ 4 ಸಾವಿರ ಕೋಟಿ ನೆರವು ಹಾಗೂ ಸೆಮಿಕಂಡಕ್ಟರ್ ವಲಯಕ್ಕೆ ₹ 40 ಸಾವಿರ ಕೋಟಿ ಮೀಸಲು, ಇವುಗಳು ಬೆಂಗಳೂರು ಮತ್ತು ಕರ್ನಾಟಕವನ್ನು ಜಾಗತಿಕ ಕೈಗಾರಿಕಾ ನಕ್ಷೆಯಲ್ಲಿ ಮತ್ತಷ್ಟು ಬಲಿಷ್ಠವಾಗಿ ಸ್ಥಾಪಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ಧಾರೆ.ಆರೋಗ್ಯ ಮತ್ತು ಸಾಮಾಜಿಕ ಮೂಲಸೌಕರ್ಯಕ್ಕೆ ನೀಡಿರುವ ಒತ್ತು, ಜಿಲ್ಲಾ ಆಸ್ಪತ್ರೆಗಳ ಮೇಲ್ದರ್ಜೆಗೇರಿಕೆ, ಅಪಘಾತ ಚಿಕಿತ್ಸಾ ಕೇಂದ್ರಗಳ ವಿಸ್ತರಣೆ, ಬಾಲಕಿಯರಿಗಾಗಿ ಪ್ರತಿ ಜಿಲ್ಲೆಯಲ್ಲಿ ಹಾಸ್ಟೆಲ್ ನಿರ್ಮಾಣ, ಇವುಗಳು ಮೂಲಕ ಸಾಮಾಜಿಕ ನ್ಯಾಯ ಒದಗಿಸಲಾಗಿದೆ ಎಂದರು.
----ಕೋಟ್
ಮೂಲಸೌಕರ್ಯ ಮತ್ತು ಗ್ರಾಮೀಣ ಆರ್ಥಿಕತೆಗೆ ಈ ಬಜೆಟ್ ನೀಡಿರುವ ಕೊಡುಗೆ ಅತ್ಯಂತ ಮಹತ್ವದ್ದು ಬೆಂಗಳೂರು-ಹೈದರಾಬಾದ, ಚೆನ್ನೈ-ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ 7 ಹೈ-ಸ್ಪೀಡ್ ರೈಲು ಕಾರಿಡಾರ್‌ಗಳ ಘೋಷಣೆ, ಗ್ರಾಮಾಂತರ ಪ್ರದೇಶದ ಕೈಗಾರಿಕೆ, ವ್ಯಾಪಾರ, ಉದ್ಯೋಗ ಹಾಗೂ ಹೂಡಿಕೆ ಚಟುವಟಿಕೆಗಳಿಗೆ ಅಪಾರ ಅವಕಾಶಗಳನ್ನು ಸೃಷ್ಟಿಸಲಿದೆ.ಈರಣ್ಣಾ ಕಡಾಡಿ, ರಾಜ್ಯಸಭಾ ಸದಸ್ಯ