ನೃತ್ಯೋಪಾಸನಾ ಕಲಾ ಅಕಾಡೆಮಿ ಪುತ್ತೂರು ಪ್ರಸ್ತುತಿಯಲ್ಲಿ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಅವರ ಶಿಷ್ಯೆ ಶಮಾ ಎಸ್.ಪಿ. ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಶುಕ್ರವಾರ ಪುತ್ತೂರು ಪುರಭವನದಲ್ಲಿ ನಡೆಯಿತು.
ಪುತ್ತೂರು: ನೃತ್ಯೋಪಾಸನಾ ಕಲಾ ಅಕಾಡೆಮಿ ಪುತ್ತೂರು ಪ್ರಸ್ತುತಿಯಲ್ಲಿ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಅವರ ಶಿಷ್ಯೆ ಶಮಾ ಎಸ್.ಪಿ. ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಶುಕ್ರವಾರ ಪುತ್ತೂರು ಪುರಭವನದಲ್ಲಿ ನಡೆಯಿತು.ಶಾಂತಲಾ ಪ್ರಶಸ್ತಿ ಪುರಸ್ಕೃತ ನೃತ್ಯಗುರು, ನಾಟ್ಯನಿಕೇತನ ಕೊಲ್ಯ ಮಂಗಳೂರು ಇದರ
ಉಳ್ಳಾಲ ಮೋಹನ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗುರುವಂದನೆ ನೆರವೇರಿಸಲಾಯಿತು.ನಟರಾಜನಿಗೆ, ಗುರುಗಳಿಗೆ ಹಾಗೂ ಪ್ರೇಕ್ಷಕರಿಗೆ ವಿನಯಪೂರ್ವಕ ನಮನ ಸಲ್ಲಿಸುವ
ಪುಷ್ಪಾಂಜಲಿಯೊಂದಿಗೆ ರಂಗಪ್ರವೇಶ ಆರಂಭವಾಯಿತು. ಗಣಪತಿ ಸ್ತುತಿ, ಶಬ್ದಂ, ವರ್ಣ, ದೇವಿಯ ಕೃತಿ, ಪುರಂದರದಾಸರ ದೇವರನಾಮ, ತಿಲ್ಲಾನ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳನ್ನು ಪ್ರಸ್ತುತಪಡಿಸಿದರು.
ಮಂಗಳದೊಂದಿಗೆ ರಂಗಪ್ರವೇಶ ಸಂಪನ್ನಗೊಂಡಿತು.
ನಟುವಾಂಗದಲ್ಲಿ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್, ಗಾಯನದಲ್ಲಿ ವಿದ್ವಾನ್ ಸ್ವರಾಗ್ ಮಾಹೆ, ಮೃದಂಗದಲ್ಲಿ ಆಕಾಶವಾಣಿ ಕಲಾವಿದ ವಿದ್ವಾನ್ ಸುರೇಶ್ ಬಾಬು ಕಲ್ಲಿಕೋಟೆ, ವಯೋಲಿನ್‌ನಲ್ಲಿ ವಿದ್ವಾನ್ ಗಣರಾಜ್ ಕಾರ್ಲೆ ಹಾಗೂ ವೀಣೆಯಲ್ಲಿ ವಿದ್ವಾನ್ ವಿ. ಸೌಂದರ ರಾಜನ್ ತಿರುವನಂತಪುರ ಸಹಕರಿಸಿದರು. ವಿದುಷಿ ಅಕ್ಷಯಶಂಕರಿ ಹಾಗೂ ಡಾ.ವಿಜಯ ಸರಸ್ವತಿ ನಿರೂಪಿಸಿದರು.
ಈ ಸಂದರ್ಭ ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್ ಮಾತನಾಡಿ, ಸಾಧನೆ ಎಂದರೆ
ತರಗತಿಯಲ್ಲಿ ಕಲಿತಿರುವುದನ್ನು ಪ್ರದರ್ಶಿಸುವುದಷ್ಟೇ ಅಲ್ಲ. ಕಲೆಯ ಬಗ್ಗೆ ಹಗಲು-ರಾತ್ರಿ ಚಿಂತನೆ ಮಾಡಿದಾಗ ಮಾತ್ರ ಉನ್ನತ ಮಟ್ಟದ ಪ್ರಸ್ತುತಿ ಸಾಧ್ಯ ಎಂದರು.
ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾಂಶುಪಾಲ ಜಯರಾಮ ರೈ, ಸಂಗೀತವಾಹಿನಿಯ ಡಾ. ಮಹೇಶ್ ಪದ್ಯಾಣ, ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟಕೃಷ್ಣ ಶರ್ಮ, ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಶುಭ ಹಾರೈಸಿದರು.ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಮತ್ತು ಶಮಾ ಎಸ್.ಪಿ. ಅನಿಸಿಕೆ ವ್ಯಕ್ತಪಡಿಸಿದರು. ಶಮಾ ಹೆತ್ತವರಾದ ಪರಕ್ಕಜೆ ವೇದಮೂರ್ತಿ ಉದಯ ನಾರಾಯಣ ಭಟ್ ಮತ್ತು ಅಶ್ವಿನಿ ಉದಯ ನಾರಾಯಣ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.