ಇಂದು ಕೆಕೆಆರ್‌ಡಿಬಿ ಕಾಮಗಾರಿಗಳ ಪ್ರಗತಿ ಪರಿಶೀಲನೆ

KannadaprabhaNewsNetwork | Published : Jan 24, 2024 2:01 AM

ಸಾರಾಂಶ

ಯಾದಗಿರಿಯಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಸಭಾಂಗಣದಲ್ಲಿ ಜ.24ರಂದು ಮಧ್ಯಾಹ್ನ 3 ಗಂಟೆಗಯಿಂದ ಪ್ರಗತಿ ಪರಿಶೀಲನೆ ಸಭೆ ನಡೆಯಲಿದ್ದು, ಅದಕ್ಕಾಗಿ ಸಕಲ ಸಿದ್ಧತೆಗಳು ಆಗಿವೆ. ಕೆಕೆಆರ್‌ಡಿಬಿ ಕಾರ್ಯದರ್ಶಿ ಸುಂದರೇಶ ಬಾಬು ಜೊತೆಯಲ್ಲಿ ಡಾ. ಅಜಯ್‌ ಸಿಂಗ್‌ ಹಾಗೂ ಯಾದಗಿರಿ ಜಿಲ್ಲಾಡ‍ಿತದ ಅಧಿಕಾರಿಗಳು, ಅಲ್ಲಿನ ಅನುಷ್ಠಾನ ಏಜನ್ಸಿಗಳವರು ಸೇರಿದಂತೆ ಕೆಕೆಆರ್‌ಡಿಬಿ ಕಾಮಗಾರಿಗಳಿಗೆ ಸಂಬಂಧಪಟ್ಟಂತಹ ಎಲ್ಲರು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಇಂದಿನ, ಹಿಂದಿನ ಕಾಮಗಾರಿಗಳ ಅನುಷ್ಠಾನ ತ್ವರಿತಗೊಳಿಸಲು, ಹೆಚ್ಚಿನ ಅನುದಾನ ಬಳಕೆಯಾಗುವಂತೆ ಅಗತ್ಯ ಕಮ ಕೈಗೊಳ್ಳಲು ಮಂಡಳಿ ಅಧ್ಯಕ್ಷ ಅಜಯ್‌ ಸಿಂಗ್‌ ತಾವು ಅಧ್ಯಕ್ಷರಾದ ನಂತರ ಇದೀಗ ಕೆಕೆಆರ್‌ಡಿಬಿ ವ್ಯಾಪ್ತಿಯ ಕಲ್ಯಾಣ ನಾಡಿನ ಜಿಲ್ಲೆಗಳ ಪ್ರವಾಸ, ಕಾಮಗಾರಿ ಪ್ರಗತಿ ಪರಿಶೀಲನೆಗೆ ಮುಂದಾಗಿದ್ದಾರೆ.

ಜ.24ರ ಬುಧವಾರ ಕಲ್ಯಾಣ ನಾಡಿನ ಗಿರಿ ಜಿಲ್ಲೆ ಯಾದಗಿರಿಯಿಂದಲೇ ಅಧ್ಯಕ್ಷ ಡಾ. ಅಜಯ್‌ ಸಿಂಗ್‌ ತಮ್ಮ ಪ್ರಗತಿ ಪರಿಶೀಲನೆ ಜಿಲ್ಲಾ ಪ್ರವಾಸಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ.

ಯಾದಗಿರಿಯಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಸಭಾಂಗಣದಲ್ಲಿ ಜ.24ರಂದು ಮಧ್ಯಾಹ್ನ 3 ಗಂಟೆಗಯಿಂದ ಪ್ರಗತಿ ಪರಿಶೀಲನೆ ಸಭೆ ನಡೆಯಲಿದ್ದು, ಅದಕ್ಕಾಗಿ ಸಕಲ ಸಿದ್ಧತೆಗಳು ಆಗಿವೆ. ಕೆಕೆಆರ್‌ಡಿಬಿ ಕಾರ್ಯದರ್ಶಿ ಸುಂದರೇಶ ಬಾಬು ಜೊತೆಯಲ್ಲಿ ಡಾ. ಅಜಯ್‌ ಸಿಂಗ್‌ ಹಾಗೂ ಯಾದಗಿರಿ ಜಿಲ್ಲಾಡ‍ಿತದ ಅಧಿಕಾರಿಗಳು, ಅಲ್ಲಿನ ಅನುಷ್ಠಾನ ಏಜನ್ಸಿಗಳವರು ಸೇರಿದಂತೆ ಕೆಕೆಆರ್‌ಡಿಬಿ ಕಾಮಗಾರಿಗಳಿಗೆ ಸಂಬಂಧಪಟ್ಟಂತಹ ಎಲ್ಲರು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಈಗಾಗಲೇ ಕೆಕೆಆರ್‌ಡಿಬಿ ಕಳೆದ 2 ತಿಂಗಳಲ್ಲೇ ದಾಖಲೆ ಎನ್ನುವಂತೆ 1, 600 ಕೋಟಿ ರು ಮೊತ್ತದ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಿದೆ. ಮುಂಚಿನತೆ ಕ್ರಿಯಾ ಯೋಜನೆ ಒಟ್ಟಿಗೇ ಬರಲಿ, ಅನುಮೋದನೆ ಒಟ್ಟಿಗೇ ನೀಡೋಣ ಎಂಬ ಪದ್ಧತಿಗೆ ಇತಿಶ್ರೀ ಹೇಳಿದ್ದೇವೆ. ಯಾರೇ ಶಾಸಕರು ಕ್ರಿಯಾ ಯೋಜನೆ ಒಟ್ಟಿಗೆ ನೀಡಲಿ, ಬಿಡಿಬಿಡಿಯಾಗಿ ನೀಡಿದರೂ ತಕ್ಷಣ ಅದನ್ನು ಪರಿಶೀಲಿಸಿ ಮಂಜೂರಾತಿ ನೀಡಲಾಗುತ್ತಿದೆ, ಇದರಿಂದಾಗಿ ಮಂಡಳಿಯ ಕಾಮಗಾರಿಗಳಿಗೆ ಮಂಜೂರಾತಿ ನೀಡುವ ಒಟ್ಟಾರೆ ಪ್ರಕಿಯೆಯಲ್ಲಿ ವೇಗ ಕಂಡಿದೆ ಎಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

ಮಂಡಳಿಯಿಂದ ಮಂಜೂರಾತಿ ನೀಡಿದ ಕಾಮಗಾರಿಗಳ ಅನುಷ್ಠಾನ ಮತ್ತು ಟೆಂಡರ್‌ ಪ್ರಕ್ರಿಯೆನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ವಿಸ್ತೃತತವಾದ ಸುತ್ತೋಲೆಗಳನ್ನು ಸೂಚನೆಗಳನ್ನು ಹೊರಡಿಸಲಾಗುತ್ತಿದೆ. ಅದರಂತೆಯೇ ಕಾಮಗಾರಿಗಳ ಅನುದೋಮದನೆ, ಅನುಷ್ಠಾನಕ್ಕೆ ಗಮನ ನೀಡಲಾಗುತ್ತಿದೆ ಎಂದೂ ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

Share this article