ಡಾ.ಪದ್ಮಪ್ರಸಾದ್ ಕೃತಿಗಳಲ್ಲಿ ಬದಲಾವಣೆಗಳ ಭರವಸೆ

KannadaprabhaNewsNetwork |  
Published : Feb 02, 2024, 01:03 AM IST
ಪೋಟೋ: 1ಎಸ್ಎಂಜಿಕೆಪಿ08ಶಿವಮೊಗ್ಗದ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಗುರುವಾರ ಆಯೋಜಿಸಿದ್ದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಸಮ್ಮೇಳನಾಧ್ಯಕ್ಷರ ಬದುಕು ಬರಹ  ಗೋಷ್ಠಿಯಲ್ಲಿ ಉಪನ್ಯಾಸಕ ಡಾ.ಶ್ರೀಪತಿ ಹಳಗುಂದ ಮಾತನಾಡಿದರು. | Kannada Prabha

ಸಾರಾಂಶ

ಕರುಳ ಸಂಬಂಧದ ಜನಶೀಲತೆಯನ್ನು ಸಮ್ಮೆಳನಾದ್ಯಕ್ಷ ಡಾ. ಎಸ್.ಪಿ. ಪದ್ಮಪ್ರಸಾದ್ ಅವರ ಬರಹದಲ್ಲಿ ಕಾಣಬಹುದು. ಸಾಹಿತಿ ಪದ್ಮಪ್ರಸಾದ್ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರ ಕೃತಿಗಳಲ್ಲಿ ಬದಲಾವಣೆಗಳ ಭರವಸೆ ಇದೆ. ಸತ್ಯಗಳ ಅನ್ವೇಷಣೆ ಇದೆ. ಪ್ರತಿಫಲಾಪೇಕ್ಷೆ ಇಲ್ಲ. ಕೆರಳಿಸುವ ಇಂದಿನ ದಿನಗಳಲ್ಲಿ ಅರಳುಸುವ ಸಾಹಿತ್ಯ ಅವರದು ಎಂದು ಉಪನ್ಯಾಸಕ ಡಾ.ಶ್ರೀಪತಿ ಹಳಗುಂದ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕರುಳ ಸಂಬಂಧದ ಸೃಜನಶೀಲತೆಯನ್ನು ಸಮ್ಮೆಳನಾದ್ಯಕ್ಷ ಡಾ. ಎಸ್.ಪಿ. ಪದ್ಮಪ್ರಸಾದ್ ಅವರ ಬರಹದಲ್ಲಿ ಕಾಣಬಹುದು ಎಂದು ಉಪನ್ಯಾಸಕ ಡಾ.ಶ್ರೀಪತಿ ಹಳಗುಂದ ಹೇಳಿದರು.

ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗುರುವಾರ ಆಯೋಜಿಸಿದ್ದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಸಮ್ಮೇಳನಾಧ್ಯಕ್ಷರ ಬದುಕು- ಬರಹ ಗೋಷ್ಠಿಯಲ್ಲಿ ಸೃಜನ ಸಾಹಿತ್ಯ ಕುರಿತು ಅವರು ಮಾತಾನಾಡಿದರು.

ಸಾಹಿತಿ ಪದ್ಮಪ್ರಸಾದ್ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರ ಕೃತಿಗಳಲ್ಲಿ ಬದಲಾವಣೆಗಳ ಭರವಸೆ ಇದೆ. ಸತ್ಯಗಳ ಅನ್ವೇಷಣೆ ಇದೆ. ಪ್ರತಿಫಲಾಪೇಕ್ಷೆ ಇಲ್ಲ. ಕೆರಳಿಸುವ ಇಂದಿನ ದಿನಗಳಲ್ಲಿ ಅರಳುಸುವ ಸಾಹಿತ್ಯ ಅವರದು ಎಂದರು.

ವಿವೇಕ ವಿವೇಚನೆ ಅವರ ಕವಿತೆಗಳಲ್ಲಿ ಕಾಣಬಹುದು. ರಾಗ ಸಂಯೋಜನೆ ಮಾಡಬಹುದಾಗಿವೆ. ಸಾತ್ವಿಕ ತೆ ಇದೆ. ಶ್ರದ್ಧೆ ವೈಚಾರಿಕತೆ ಇದೆ ಎಂದರು.

ಸಂಪಾದಿತ ಮತ್ತು ಅನುವಾದಿತ ಕೃತಿ ಕುರಿತು ಸಾಹಿತಿ ಡಾ.ಸುಂಕಂ ಗೋವರ್ಧನ ಮಾತನಾಡಿ, ಪದ್ಮಪ್ರಸಾದ್ ಅವರು ಸರಳತೆಯನ್ನು ಆಚೆಯಿಟ್ಟು ವಿವರವಾಗಿ ಬರೆಯುತ್ತಾರೆ. ಸಂಪಾದಿತ ಕೃತಿಗಳು ಸಾಹಿತ್ಯ ಲೋಕದಲ್ಲಿ ಗುರುತಿಸಿಗೊಂಡಿವೆ. ಜೈನ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾಗಿದೆ. ಪರಂಪರೆಯ ಪ್ರತಿರೂಪ ಅವರ ಕೃತಿಯಲ್ಲಿ ಕಾಣಬಹುದು ಎಂದರು.

ನೂರಕ್ಕೂ ಹೆಚ್ಚು ಕೃತಿ ಬರೆದಿರುವ ಅವರು ಅಧ್ಯಯನಪ್ರಿಯರು. ಕನ್ನಡ ಸಾಹಿತ್ಯ ಲೋಕದ ನಿಷ್ಠಾವಂತ ಅನುವಾದಕರು ಮತ್ತು ಸಂಪಾದಕರು ಎಂದರು.

ಉಪನ್ಯಾಸಕ ಡಾ.ರತ್ನಾಕರ್ ಕುನುಗೋಡು ಮಾತನಾಡಿ, ಡಾ. ಎಸ್.ಪಿ. ಪದ್ಮಪ್ರಸಾದ್ ಅವರು ಜಾನಪದ ಕೃತಿ, ವಿಮರ್ಶೆ, ಅಂಕಣ ಬರಹ ಕುರಿತು ಮಾತಾನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶ್ರಾಂತ ಸಹಾಯಕ ನಿರ್ದೇಶಕ ಎನ್.ಹರಿಕುಮಾರ್, ತುಮಕೂರು ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಇದ್ದರು. ಜಗದೀಶ್ ಸ್ವಾಗತಿಸಿ, ರೇಣುಕಾ ಹೆಗಡೆ ನಿರೂಪಿಸಿದರು.

- - - -1ಎಸ್ಎಂಜಿಕೆಪಿ08:

18ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಬದುಕು- ಬರಹ ಗೋಷ್ಠಿಯಲ್ಲಿ ಉಪನ್ಯಾಸಕ ಡಾ.ಶ್ರೀಪತಿ ಹಳಗುಂದ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಸ್ಯೆ ಬಗೆಹರಿದ್ರೆ 6 ತಿಂಗಳಲ್ಲಿ 1 ಲಕ್ಷ ನೇಮಕಾತಿ : ಸಾರಿಗೆ ಸಚಿವ
ಸರ್ಕಾರದಿಂದ ಮಹತ್ವದ ನಿರ್ಧಾರ : ವಿಪತ್ತು ವೇಳೆ ಇಡೀ ಊರಿನ ರೈತರಿಗೆ ಪರಿಹಾರ