ಸಮಾಜ ಸುಧಾರಣೆಗೆ ಪೈಗಂಬರರ ಕೊಡುಗೆ ಅನನ್ಯ

KannadaprabhaNewsNetwork |  
Published : Aug 27, 2026, 02:30 AM IST
ಯಲಬುರ್ಗಾ ತಾಲೂಕಿನ ಮುಧೋಳದಲ್ಲಿ ಮುಸ್ಲಿಂ ಸಮಾಜದವರು ಈದ್ ಮಿಲಾದ್‌ನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಿದರು. | Kannada Prabha

ಸಾರಾಂಶ

ಜಾಮೀಯಾ ಮಸೀದಿಯಿಂದ ಮದಿನಾ ಸ್ತಬ್ಧ ಮೆರವಣಿಗೆ ಭಾವಚಿತ್ರದೊಂದಿಗೆ ನಡೆಯಿತು

ಯಲಬುರ್ಗಾ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರಿಂದ ಈದ್-ಮಿಲಾದ್ ಹಬ್ಬ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಬೆಳಗ್ಗೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ತಾಲೂಕಿನ ಮುಧೋಳದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್‌ ಜನ್ಮದಿನ ಅಂಗವಾಗಿ ಮುಸ್ಲಿಂ ಸಮಾಜದ ಹಜರತ್ ಸಯ್ಯದ್ ಶಾವಲಿ ಅಂಜುಮನ್ ಕಮಿಟಿಯ ಹಾಗೂ ನೌ ಜವಾನ್ ಯೂಥ್ ಕಮಿಟಿ ಮತ್ತು ಜಾಮಿಯಾ ಮಜೀದ್ ಇವರಿಂದ ಈದ್ ಮಿಲಾದ್ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಜಾಮೀಯಾ ಮಸೀದಿಯಿಂದ ಮದಿನಾ ಸ್ತಬ್ಧ ಮೆರವಣಿಗೆ ಭಾವಚಿತ್ರದೊಂದಿಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ಮಕ್ಕಳು, ಯುವಕರು ಸೇರಿದಂತೆ ಇತರರು ಹಬ್ಬದ ನಿಮಿತ್ತ ಝಲಸಾ ಘೋಷಣೆ ಕೂಗಿದರು.

ಹಜರತ್ ಮೌಲಾನ ಆಫೀಜ್ ದಾನೇಶ್ ಖಾಜಿ ಮಾತನಾಡಿ, ಪ್ರವಾದಿ ಮುಹ್ಮದ್ ಪೈಗಂಬರರ ಜಯಂತಿ ಸಮಾಜದ ಏಕತೆ, ಶಾಂತಿ ಕಾಪಾಡುವ ಸುದಿನವಾಗಿದ್ದು ಸಮಾಜ ಸುಧಾರಣೆಯಲ್ಲಿ ಪೈಗಂಬರರ ಕೊಡುಗೆ ಅನನ್ಯವಾದದು ಮತ್ತು ಈ ಸಮಾಜದಲ್ಲಿ ಪ್ರತಿಯೊಬ್ಬರೂ ಸ್ನೇಹ, ಶಾಂತಿ ಹಾಗೂ ಸೌಹಾರ್ದತೆಯಿಂದ ಬದುಕಬೇಕು. ಪ್ರವಾದಿ ಮುಹಮ್ಮದ್ ಪೈಗಂಬರ್‌ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ್ದಾರೆ. ಅವರ ಆದರ್ಶ ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಹಸನಸಾಬ ಹಿರೇಮನಿ, ಲಾಲಸಾಬ್ ಆರಬಳ್ಳಿನ, ಫಕುರಸಾಬ ಮೋತೆಖಾನ್, ಸೈದುಸಾಬ ಹಿರೇಮನಿ ಸಿಳ್ಳಿನ, ಖಾದಿರ್‌ಬಾಷಾ ತೋಳಗಲ್, ಬಾಷುಸಾಬ ಆರಬಳ್ಳಿನ, ಕಾಶಿಮಸಾಬ ಕೊಪ್ಪಳ, ಗುಡಾಸಾಬ ರಾಟಿ, ಗಣಿಸಾಬ್ ನೂರಾಬಾಷಾ, ಹೊನ್ನೂ‌ಸಾಬ ವಟಪರ್ವಿ, ದಾದೇಸಾಬ್ ತೋಳಗಲ್, ಕೂತುಬ್‌ಸಾಬ್ ನದಾಫ್, ಹಸೇನ್ ಮೇಸ್ತ್ರಿ, ಅಬ್ದುಲ್ ರಜಾಕ್, ಮಾಬುಸಾಬ್, ರಹಿಮಾನ್, ಹಸೇನಸಾಬ್‌, ಹುಸ್ಮಾನ ಸೇರಿದಂತೆ ಹಜರತ್‌ ಸಯ್ಯದ್ ಶಾವಲಿ ಅಂಜುಮನ್ ಕಮಿಟಿ ಹಾಗೂ ನೌ ಜವಾನ್ ಯೂಥ್ ಕಮಿಟಿ ಸದಸ್ಯರು ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಕ್ತದಾನದಿಂದ ಜೀವ ಉಳಿಸುವ ಪುಣ್ಯ ಪ್ರಾಪ್ತಿ
ಭಾರತೀಯರಲ್ಲಿ ಸಹಬಾಳ್ವೆ ಬಾಂಧವ್ಯ ಮುಖ್ಯ