ಸಾಲದ ಸುಳಿಯಿಂದ ರೈತರ ರಕ್ಷಿಸಿ

KannadaprabhaNewsNetwork |  
Published : Jul 16, 2024, 12:32 AM IST
15ಡಿಡಬ್ಲೂಡಿ1ಅಖಿಲ ಭಾರತ ಬೇಡಿಕೆಗಳ ದಿನದ ಅಂಗವಾಗಿ ತಾಲೂಕಿನ ಮನಸೂರು, ಮುಗದ, ಸಲಕಿನಕೊಪ್ಪ, ಮಾವಿನಕೊಪ್ಪ ಗ್ರಾಮದಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಪ್ರತಿಭಟನೆ ಮಾಡಲಾಯಿತು. | Kannada Prabha

ಸಾರಾಂಶ

ಗೊಬ್ಬರ, ಬೀಜ, ಕೀಟನಾಶಕ, ರೈತರ ಸಲಕರಣೆ ಮತ್ತು ಯಂತ್ರಗಳ ಬೆಲೆಗಳು ದುಬಾರಿಯಾಗಿ ರೈತರ ಉತ್ಪಾದನಾ ವೆಚ್ಚ ಗಗನಕ್ಕೇರಿದೆ. ಆದರೆ, ರೈತನು ಬೆಳೆದ ಉತ್ಪನ್ನಕ್ಕೆ ಖಚಿತವಾದ ಸೂಕ್ತ ಬೆಲೆ ಸಿಗದೆ ನಿರಂತರ ನಷ್ಟವನ್ನು ಅನುಭವಿಸುತ್ತಲೇ ಇದ್ದಾರೆ.

ಧಾರವಾಡ:

ಅಖಿಲ ಭಾರತ ಬೇಡಿಕೆಗಳ ದಿನದ ಅಂಗವಾಗಿ ತಾಲೂಕಿನ ಮನಸೂರು, ಮುಗದ, ಸಲಕಿನಕೊಪ್ಪ, ಮಾವಿನಕೊಪ್ಪ ಗ್ರಾಮದಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಮತ್ತು ಪ್ರಧಾನಿಗೆ ಗ್ರಾಪಂ ಪಿಡಿಒ ಮೂಲಕ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಸಂಘಟನೆ ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ, ಸರ್ಕಾರಗಳ ನೀತಿಗಳಿಂದ ರೈತರ ಬದುಕು ಅತ್ಯಂತ ದುಸ್ಥಿತಿಗೆ ಬಂದಿದ್ದು ಅವನ ಬೆನ್ನೆಲುಬನ್ನೇ ಮುರಿದುಹಾಕಿದೆ. ವ್ಯವಸಾಯವು ಇಂದು ಲಾಭರಹಿತ ಉದ್ದಿಮೆಯಾಗಿ ರೈತರನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ ಆತ್ಮಹತ್ಯೆಗೆ ಮೊರೆಹೋಗುವಂತೆ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೊಬ್ಬರ, ಬೀಜ, ಕೀಟನಾಶಕ, ರೈತರ ಸಲಕರಣೆ ಮತ್ತು ಯಂತ್ರಗಳ ಬೆಲೆಗಳು ದುಬಾರಿಯಾಗಿ ರೈತರ ಉತ್ಪಾದನಾ ವೆಚ್ಚ ಗಗನಕ್ಕೇರಿದೆ. ಆದರೆ, ರೈತನು ಬೆಳೆದ ಉತ್ಪನ್ನಕ್ಕೆ ಖಚಿತವಾದ ಸೂಕ್ತ ಬೆಲೆ ಸಿಗದೆ ನಿರಂತರ ನಷ್ಟವನ್ನು ಅನುಭವಿಸುತ್ತಲೇ ಇದ್ದಾರೆ. ಇದರ ಪರಿಣಾಮವಾಗಿ ರೈತರು ತನ್ನ ಭೂಮಿ ಮಾರಿಕೊಂಡು ಕೃಷಿ ಕಾರ್ಮಿಕನಾಗುತ್ತಿದ್ದಾನೆ. ಇದು ಮಾತ್ರವಲ್ಲದೆ ಹವಾಮಾನ ವೈಪರಿತ್ಯದಿಂದಾಗಿ ಕೆಲವೊಮ್ಮೆ ಅತಿವೃಷ್ಟಿ, ಅನಾವೃಷ್ಟಿಗೆ ಸಿಲುಕಿ ಕಂಗಾಲಾಗಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಜೀವನಗೈಯ್ಯಲು ಪಟ್ಟಣಗಳಿಗೆ ವಲಸೆ ಹೋಗಲೇಬೇಕಾದ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದಾನೆ ಎಂದು ಹೇಳಿದರು.

ಆದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಅವರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ಸಂಘಟನೆ ಉಪಾಧ್ಯಕ್ಷ ಹನುಮೇಶ ಹುಡೇದ, ಸಮಿತಿ ಸದಸ್ಯರಾದ ಉಳವಪ್ಪ ಅಂಗಡಿ, ಮಲ್ಲಪ್ಪ, ರಸೂಲ ನದಾಫ್‌, ಬಸಮ್ಮ , ಶಿವಯ್ಯ ನಾಗಪ್ಪ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌