ಚಿನ್ನ, ಖನಿಜ, ಗಿಡಮೂಲಿಕೆ ಸಂಪತ್ತಿನ ಕಪ್ಪತ್ತಗುಡ್ಡ ಪರಂಪರೆಯುಳ್ಳದ್ದು. ಪರಿಶುದ್ಧ ಹವೆಗೆ ದೇಶದಲ್ಲಿಯೇ ನಂ.1ನೇ ಸ್ಥಾನದಲ್ಲಿರುವ ಕಪ್ಪತ್ತಗುಡ್ಡದ ಮೇಲೆ ಬಂಡವಾಳ ಶಾಹಿಗಳು ಕಣ್ಣಿಟ್ಟಿದ್ದಾರೆ. ಕಪ್ಪತ್ತಗುಡ್ಡವನ್ನು ಮುಂದಿನ ಜನಾಂಗಕ್ಕೆ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕಪ್ಪತ್ತಗಿರಿಯ ನಂದಿವೇರಿ ಸಂಸ್ಥಾನಮಠದ ಶ್ರೀ ಶಿವಕುಮಾರ ಸ್ವಾಮಿಗಳು ಹೇಳಿದರು.
ಗದಗ: ಚಿನ್ನ, ಖನಿಜ, ಗಿಡಮೂಲಿಕೆ ಸಂಪತ್ತಿನ ಕಪ್ಪತ್ತಗುಡ್ಡ ಪರಂಪರೆಯುಳ್ಳದ್ದು. ಪರಿಶುದ್ಧ ಹವೆಗೆ ದೇಶದಲ್ಲಿಯೇ ನಂ.1ನೇ ಸ್ಥಾನದಲ್ಲಿರುವ ಕಪ್ಪತ್ತಗುಡ್ಡದ ಮೇಲೆ ಬಂಡವಾಳ ಶಾಹಿಗಳು ಕಣ್ಣಿಟ್ಟಿದ್ದಾರೆ. ಕಪ್ಪತ್ತಗುಡ್ಡವನ್ನು ಮುಂದಿನ ಜನಾಂಗಕ್ಕೆ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕಪ್ಪತ್ತಗಿರಿಯ ನಂದಿವೇರಿ ಸಂಸ್ಥಾನಮಠದ ಶ್ರೀ ಶಿವಕುಮಾರ ಸ್ವಾಮಿಗಳು ಹೇಳಿದರು.
ನಗರದ ಅಕ್ಕನ ಬಳಗದಲ್ಲಿ ನಡೆದ ವನಮಹೋತ್ಸವ ಹಾಗೂ ಮಾಸಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.ಕಪ್ಪತ್ತಗುಡ್ಡದ ಸಕಲ ಸಂಪತ್ತನ್ನು ಅರಿತ ಬ್ರಿಟಿಷರು 1892ರಲ್ಲಿ ಕಪ್ಪತ್ತಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶವೆಂದು ಗೆಜೆಟ್‌ದಲ್ಲಿ ದಾಖಲಿಸಿ 144 ವರ್ಷಗಳೇ ಕಳೆದಿವೆ. ಇಂತಹ ಸಂಪದ್ಭರಿತ ಕಪ್ಪತ್ತಗುಡ್ಡದ ಮೇಲೆ ನೇತಾಡುತ್ತಿರುವ ತೂಗುಕತ್ತಿಯನ್ನು ತಪ್ಪಿಸಲು ಬಂಡವಾಳಶಾಹಿಗಳ ಕಣ್ಣಿನಿಂದ ಕಪ್ಪತ್ತಗುಡ್ಡವನ್ನು ಸಂರಕ್ಷಿಸಲು ನಾವೆಲ್ಲರೂ ಬದ್ಧತೆಯಿಂದ ಹೋರಾಟಕ್ಕೆ ಸಜ್ಜಾಗಬೇಕಿದೆ ಎಂದರು.ಚಲಿಸುವ ಮೂಡಗಳಿಂದ ಮಳೆ ಸುರಿಯುವಂತೆ ಮಾಡುವ ಕಪ್ಪತ್ತಗುಡ್ಡದಿಂದಾಗಿ ಸುತ್ತಲಿನ 15 ಜಿಲ್ಲೆಗಳು ಮಳೆ, ಬೆಳೆ ಕಾಣುವಂತಾಗಿದೆ. ಪರಿಶುದ್ಧ ಹವೆಗೆ ಖ್ಯಾತಿಯಾಗಿದೆ, ಇಂತಹ ಕಪ್ಪತ್ತಗುಡ್ಡಕ್ಕೆ ನಾವೆಲ್ಲರೂ ವಾರಸುದಾರರಾಗಬೇಕು. ಕಪ್ಪತ್ತಗುಡ್ಡ ಎಲ್ಲರ ಸ್ವತ್ತು ಎಂದರು.ಕೃಷಿ ಪ್ರಧಾನವಾದ ಭಾರತದಲ್ಲಿ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಕೃಷಿಕ ಕುಟುಂಬಗಳು ಉಳಿಯಬೇಕು, ಅವಿಭಕ್ತ ಕುಟುಬಗಳು ಹೆಚ್ಚಾಗಬೇಕು. ಗಂಡ-ಹೆಂಡತಿ ಒಂದೆರಡು ಮಕ್ಕಳಿಗೆ ಸೀಮಿತಗೊಳ್ಳುತ್ತಿರುವ ಕುಟುಂಬಗಳು ದ್ವೀಪಗಳಾಗದೇ ಮನ-ಮನೆ ಬೆಳಗುವ ದೀಪಗಳಾಗಬೇಕು ಎಂದರು.ಈ ವೇಳೆ ಅಕ್ಕನ ಬಳಗಕ್ಕೆ 11 ಲಕ್ಷ ರು.ಗಳನ್ನು ದೇಣಿಗೆ ನೀಡಿದ ಶಾಂತಾ ಅಂದಾನಪ್ಪ ಗೌಡರ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ವಿಮಲಾ ಪರ್ವತಗೌಡ್ರ, ಜ್ಯೋತಿ ದಾನಪ್ಪಗೌಡ್ರ, ದೀಪಾ ಉಗಲಾಟದ, ಭಾಗ್ಯಾ ಗಡ್ಡಿ, ಸುಮೇದಾ ಕೋಟಿ, ವಿಜಯಲಕ್ಷ್ಮೀ ಬಿರಾದಾರ, ಪ್ರಭಾವತಿ ಚವಡಿ, ಮಂಜುಳಾ ಹೊಳಗುಂದಿ ಅವರನ್ನು ಅಕ್ಕನ ಬಳಗದ ನೂತನ ಸದಸ್ಯರನ್ನಾಗಿ ಬರಮಾಡಿಕೊಳ್ಳಲಾಯಿತು. ಹಸಿರು ಬಣ್ಣದ ಮ್ಯಾಚಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪವಿತ್ರಾ ಬಿರಾದಾರ ಅವರನ್ನು ಗೌರವಿಸಲಾಯಿತು. ಡಾ. ಶೇಖರ ಸಜ್ಜನರ, ಆನಂದ ಪೋತ್ನೀಸ್, ಡಾ. ಮಹಾಂತೇಶ ಬಾತಾಖಾನಿ ಮಾತನಾಡಿದರು.
ಶಿವಲೀಲಾ ಹಿರೇಮಠ, ಮೃತ್ಯುಂಜಯ ಸಂಕೇಶ್ವರ, ಕಸ್ತೂರಿ ಹಿರೇಗೌಡ್ರ, ಅನ್ನಪೂರ್ಣ ಮಾಳೆಕೊಪ್ಪಮಠ, ಶಾಂತಾ ಗೌಡರ, ಉಷಾ ದಡೂತಿ, ಶಿವಲೀಲಾ ಕುರಡಗಿ, ನಾಗರತ್ನ ಹುಬ್ಬಳ್ಳಿಮಠ, ಮೀನಾಕ್ಷಿ ಸಜ್ಜನ, ಪ್ರೇಮಾ ಮೇಟಿ, ಶಾರದಾ ಹಿರೇಮಠ ಸೇರಿದಂತೆ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.