ಐ.ಒ.ಸಿ.ಎಲ್. ಎಸ್.ಆರ್.ಪಿ.ಎಲ್. ಸಂಸ್ಥೆಯು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‌ನ ಅಂಗವಾಗಿದ್ದು, ಚೆನ್ನೈಯಿಂದ ಬೆಂಗಳೂರಿಗೆ ಮತ್ತು ಬೆಂಗಳೂರಿನಿಂದ ದೇವನಹಳ್ಳಿಗೆ ಪೆಟ್ರೋಲಿಯಂ ಪೈಪ್ ಲೈನಿನ ಮುಖಾಂತರ ಪೆಟ್ರೋಲಿಯಂ ಉತ್ಪನ್ನಗಳ ಸಾಗಾಣಿಕೆ ಕಾರ್ಯದಲ್ಲಿ ತೊಡಗಿದೆ. ಐ.ಓ.ಸಿ.ಎಲ್.ಯ ಎಸ್.ಆರ್.ಪಿ.ಎಲ್. ಪೈಪ್ ಲೈನಿನ ಸುರಕ್ಷತೆ ಮತ್ತು ಭದ್ರತೆ ಹಾಗೂ ಪರಿಸರ ರಕ್ಷಣೆಗೆ ಆದ್ಯತೆ ನೀಡಲಿದೆ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯವನ್ನು ತಡೆಗಟ್ಟುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ಪೈಪ್ ಲೈನ್ ಸುರಕ್ಷತೆ, ಪೆಟ್ರೋಲಿಯಂ ಉತ್ಪನ್ನಗಳ ಕಳ್ಳತನವನ್ನು ತಡೆಯುವುದು, ಪರಿಸರ ಹಾಗೂ ಜನರ ಹಿತಕ್ಕಾಗಿ ಸಹಕಾರ ನೀಡಬೇಕೆಂದು ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳ ಸೂಚಿಸಿದರು. ತಾಲೂಕಿನ ಸಿದ್ದನಹಳ್ಳಿ ಗ್ರಾಮದ ಹೊರವಲಯದಲ್ಲಿ ಸೋಮವಾರ ಐ.ಒ.ಸಿ.ಎಲ್ ಮತ್ತು ಎಸ್.ಆರ್.ಪಿ.ಎಲ್. ಪೈಪ್ ಲೈನಿನ ಸುರಕ್ಷತೆಯ ಮತ್ತು ತುರ್ತು ಸಂದರ್ಭದಲ್ಲಿ ಅಗ್ನಿ ಅನಾಹುತಗಳ ಬಗ್ಗೆ ಅಣಕು ಪ್ರದರ್ಶನ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಐ.ಒ.ಸಿ.ಎಲ್. ಎಸ್.ಆರ್.ಪಿ.ಎಲ್ ಕಂಟ್ರೋಲ್ ರೂಂ ಇದ್ದು ತುರ್ತು ಸಮಯದಲ್ಲಿ ತಕ್ಷಣ ಸ್ಪಂದಿಸಲಾಗುವುದು ಎಂದರು.
ಪೆಟ್ರೋಲಿಯಂ ಉತ್ಪನ್ನ ಸಾಗಣೆ
ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆಯ ಉಪ ವ್ಯವಸ್ಥಾಪಕ ಶ್ರೀನಿವಾಸ್ ಮಾತನಾಡಿ ಐ.ಒ.ಸಿ.ಎಲ್. ಎಸ್.ಆರ್.ಪಿ.ಎಲ್. ಸಂಸ್ಥೆಯು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‌ನ ಅಂಗವಾಗಿದ್ದು, ಚೆನ್ನೈಯಿಂದ ಬೆಂಗಳೂರಿಗೆ ಮತ್ತು ಬೆಂಗಳೂರಿನಿಂದ ದೇವನಹಳ್ಳಿಗೆ ಪೆಟ್ರೋಲಿಯಂ ಪೈಪ್ ಲೈನಿನ ಮುಖಾಂತರ ಪೆಟ್ರೋಲಿಯಂ ಉತ್ಪನ್ನಗಳ ಸಾಗಾಣಿಕೆ ಕಾರ್ಯದಲ್ಲಿ ತೊಡಗಿದೆ. ಐ.ಓ.ಸಿ.ಎಲ್.ಯ ಎಸ್.ಆರ್.ಪಿ.ಎಲ್. ಪೈಪ್ ಲೈನಿನ ಸುರಕ್ಷತೆ ಮತ್ತು ಭದ್ರತೆ ಹಾಗೂ ಪರಿಸರ ರಕ್ಷಣೆಗೆ ಆದ್ಯತೆ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹನುಮಂತರಾಯಪ್ಪ, ಗ್ರಾಪಂ ಸದಸ್ಯ ಸೀನಪ್ಪ, ಗ್ರಾಮ ಆಡಳಿತ ಅಧಿಕಾರಿ ಮಧುಚಂದ್ರ, ಪೋಲಿಸ್ ಸಿಬ್ಬಂದಿಯಾದ ನಾಗೇಶ್, ಮಂಜುನಾಥ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.