ಸಾಕು ಪ್ರಾಣಿಗಳ ಆರೋಗ್ಯ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಜಿ.ಎಚ್.ಶ್ರೀನಿವಾಸ್

KannadaprabhaNewsNetwork |  
Published : Apr 28, 2025, 11:46 PM IST
ಬಳ್ಳಾವರದಲ್ಲಿ ನಡೆದ ವಿಶ್ವ ಪಶುವೈದ್ಯಕೀಯ ದಿನಾಚರಣೆ  | Kannada Prabha

ಸಾರಾಂಶ

ತರೀಕೆರೆ, ಮೂಕ ಪ್ರಾಣಿಗಳ ರೋಗಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡುತ್ತಿರುವ ಪಶುವೈದ್ಯರ ಕಾರ್ಯ ಶ್ಲಾಘನೀಯ. ರಾಜ್ಯ ಸರ್ಕಾರ ಪಶು ಚಿಕಿತ್ಸಾಲಯಗಳಿಗೆ ಅಗತ್ಯವಿರುವ ಔಷಧ ಮಾತ್ರೆಗಳನ್ನು ಕಾಲ ಕಾಲಕ್ಕೆ ಪೂರೈಕೆ ಮಾಡುತ್ತಿರುವುದರಿಂದ ಜಾನುವಾರುಗಳ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

- ಬಳ್ಳಾವರದಲ್ಲಿ ನಡೆದ ವಿಶ್ವ ಪಶುವೈದ್ಯಕೀಯ ದಿನಾಚರಣೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಮೂಕ ಪ್ರಾಣಿಗಳ ರೋಗಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡುತ್ತಿರುವ ಪಶುವೈದ್ಯರ ಕಾರ್ಯ ಶ್ಲಾಘನೀಯ. ರಾಜ್ಯ ಸರ್ಕಾರ ಪಶು ಚಿಕಿತ್ಸಾಲಯಗಳಿಗೆ ಅಗತ್ಯವಿರುವ ಔಷಧ ಮಾತ್ರೆಗಳನ್ನು ಕಾಲ ಕಾಲಕ್ಕೆ ಪೂರೈಕೆ ಮಾಡುತ್ತಿರುವುದರಿಂದ ಜಾನುವಾರುಗಳ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಬಳ್ಳಾವರ ಗ್ರಾಮದಲ್ಲಿ ನಡೆದ ವಿಶ್ವ ಪಶುವೈದ್ಯಕೀಯ ದಿನಾಚರಣೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸಾಕು ಪ್ರಾಣಿಗಳ ಆರೋಗ್ಯ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಇತ್ತೀಚಿನ ದಿನಗಳಲ್ಲಿ ರೈತರು ಹೈನುಗಾರಿಕೆ ಜಾನುವಾರು ಗಳ ಸಾಕಾಣಿಕೆ ಮಾಡುತ್ತಿದ್ದು, ರಾಜ್ಯ ಸರ್ಕಾರ ಜಾನುವಾರುಗಳು ಆಕಸ್ಮಿಕವಾಗಿ ಸಾವನ್ನಪ್ಪಿದಾಗ ನೀಡುತ್ತಿದ್ದ ₹10,000 ಪರಿಹಾರದ ಹಣವನ್ನು ₹15, 000ಕ್ಕೆ ಹೆಚ್ಚಿಸಲಾಗಿದೆ. ಪಶುವೈದ್ಯರು ಈ ಮಾಹಿತಿಯನ್ನು ರೈತರಿಗೆ ತಿಳಿಸಿ ಸರ್ಕಾರದಿಂದ ಸಿಗುವ ಪರಿಹಾರದ ಹಣ ಕೊಡಿಸಬೇಕು ಎಂದು ಹೇಳಿದರು. ರಾಜ್ಯ ಸರ್ಕಾರ ಇತ್ತೀಚೆಗೆ ಪ್ರತಿ ಜಿಲ್ಲೆಯಲ್ಲಿಯೂ ಪಶು ಪಾಲಿ ಕ್ಲೀನಿಕ್‌ಗಳನ್ನು ಆರಂಭಿಸಿದ್ದು, ಇದರಲ್ಲಿರುವ ಲ್ಯಾಬೋರೋಟರಿಗಳ ಮೂಲಕ ಪ್ರಾಣಿಗಳ ಆರೋಗ್ಯ ತಪಾಸಣೆ, ರಕ್ತ ತಪಾಸಣೆ ಮೂಲಕ ಪಶು ವೈದ್ಯರು ಸುಲಭವಾಗಿ ಸಾಕು ಪ್ರಾಣಿಗಳ ರೋಗಗಳನ್ನು ಗುರುತಿಸಿ ಚಿಕಿತ್ಸೆ ನೀಡಲು ಅನುಕೂಲ ವಾಗಲಿದೆ ಎಂದು ಹೇಳಿದರು. ಉಪವಿಭಾಗಧಿಕಾರಿ ಡಾ. ಕೆ.ಜೆ. ಕಾಂತರಾಜ್ ಮಾತನಾಡಿ ತಾವು ಸಹ ಈ ಹಿಂದೆ ಪಶು ವೈದ್ಯರಾಗಿ ಕಾರ್ಯ ನಿರ್ವಹಿಸಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸ್ವಂತ ಮನೆಗೆ ಬಂದಂತಹ ಅನುಭವ ನೀಡುತ್ತಿದೆ. ಪಶುವೈದ್ಯರು ಇಲಾಖೆ ಸಿಬ್ಬಂದಿ ನೆರವಿನೊಂದಿಗೆ ಪಶುವಿಗೆ ಚಿಕಿತ್ಸೆ ಮಾಡಿದಾಗ ಗ್ರಾಮೀಣ ಭಾಗದ ಹೈನುಗಾರರು ಮತ್ತು ಸಾರ್ವಜನಿಕರೊಂದಿಗೆ ನಿಕಟ ಬಾಂಧವ್ಯ ಏರ್ಪಡುವುದರೊಂದಿಗೆ ಮಾಡಿದ ಕೆಲಸದಿಂದ ಆತ್ಮತೃಪ್ತಿ ಪಡೆಯಬಹುದು ಎಂದು ತಿಳಿಸಿದರು. ಜಿಲ್ಲಾ ಪಶು ವೈದ್ಯರ ಸಂಘದ ಅಧ್ಯಕ್ಷ ಡಾ. ಗೋವಿಂದಪ್ಪ ಮಾತನಾಡಿ ಪ್ರತಿ ವರ್ಷದ ಏಪ್ರಿಲ್ ತಿಂಗಳ ಕೊನೆ ವಾರದಲ್ಲಿ ವಿಶ್ವ ಪಶು ವೈದ್ಯಕೀಯ ದಿನ ಆಚರಿಸುತ್ತಾ ಬರುತ್ತಿದ್ದು, ಪಶು ಇಲಾಖೆ ಪ್ರತಿ ವರ್ಷಕ್ಕೊಂದರಂತೆ ವಿಶೇಷ ಪಶು ಚಿಕಿತ್ಸಾ ಕಾರ್ಯಕ್ರಮ ಹಾಕಿಕೊಳ್ಳುತ್ತಾ ಬರುತ್ತಿದೆ. ಈ ವರ್ಷ ಜಾನುವಾರುಗಳ ಆರೋಗ್ಯ ತಪಾಸಣಾ ಆಂದೋಲನ ಮಾಡುವ ತೀರ್ಮಾನ ಮಾಡಿದ್ದು, 2030ರ ವೇಳೆಗೆ ಕಾಲುಬಾಯಿ ರೋಗ ಸಂಪೂರ್ಣ ನಿರ್ಮೂಲನೆಯಾಗಬಹುದೆಂದು ಅಂದಾಜಿಸಲಾಗಿದೆ ಎಂದು ಹೇಳಿದರು. ರಾಜ್ಯ ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಶಿವಶರಣಪ್ಪ ಜಿ. ಯಲಗೊಂಡ, ಮೈಸೂರು ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖಾ ಜಂಟಿ ನಿರ್ದೇಶಕ ಡಾ. ಶಿವಣ್ಣ ಪಶು ಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಚಿಕ್ಕಮಗಳೂರಿನ ಉಪನಿರ್ದೇಶಕ ಡಾ.ಎಂ.ಆರ್ ಮೋಹನ್ ಕುಮಾರ್ ಸಂಘದ ಉಪಾಧ್ಯಕ್ಷ ಡಾ. ಮಣಿಕಾಂತ, ಕಾರ್ಯದರ್ಶಿ ಡಾ.ಹರಿಣಿ, ಪ್ರಧಾನ ಕಾರ್ಯದರ್ಶಿ ಡಾ. ವಿಜಯ್, ಖಜಾಂಚಿ ಡಾ. ಪ್ರದೀಪ್, ಮತ್ತು ತರೀಕೆರೆ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಡಾ, ದೇವೇಂದ್ರಪ್ಪ ಭಾಗವಹಿಸಿದ್ದರು.

28ಕೆಟಿಆರ್.ಕೆ.15ಃ

ಬಳ್ಳಾವರದಲ್ಲಿ ನಡೆದ ವಿಶ್ವ ಪಶು ವೈದ್ಯಕೀಯ ದಿನಾಚರಣೆಯಲ್ಲಿ ನಂದಿಬಟ್ಟಲುವಿನ ನಿವೃತ್ತ ಪಶು ವೈದ್ಯ ಡಾ. ಜಯಣ್ಣ ಅವರನ್ನು ಸನ್ಮಾನಿಸಲಾಯಿತು. ಶಾಸಕ ಜಿ.ಎಚ್.ಶ್ರೀನಿವಾಸ್, ಜಿಲ್ಲಾ ಪಶು ವೈದ್ಯರ ಸಂಘದ ಅಧ್ಯಕ್ಷ ಡಾ. ಗೋವಿಂದಪ್ಪ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!