ಧಾರವಾಡ:
ಭಾರತ ಚುನಾವಣಾ ಆಯೋಗ ಜಿಲ್ಲಾಡಳಿತದ ಸಹಯೋಗದಲ್ಲಿ ಇಲ್ಲಿಯ ಆಲೂರು ವೆಂಕಟರಾವ್ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರ ದಿನಾಚರಣೆಯಲ್ಲಿ ಮಾತನಾಡಿದರು.
ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸುವ ಅವಕಾಶವನ್ನು ಸಂವಿಧಾನ ನೀಡಿದೆ. ನಾವು ತಪ್ಪದೇ ಮತದಾನ ಮಾಡುವ ಮೂಲಕ ನಮ್ಮ ಹಕ್ಕು ಚಲಾಯಿಸಬೇಕು ಎಂದ ಅವರು, ಯುವ ಮತದಾರರನ್ನು ಸೆಳೆಯಲು, ಭಾರತ ಚುನಾವಣಾ ಆಯೋಗ ಆ್ಯಪ್ ಬಿಡುಗಡೆ ಮಾಡಿದೆ. ತಮ್ಮ ಆ್ಯಂಡ್ರೈಡ್ ಮೊಬೈಲ್ ಮೂಲಕ ವಿಎಚ್ಐ ಆ್ಯಪ್ ಬಳಸಿ, ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ, ಪಿ.ಎಫ್. ದೊಡ್ಡಮನಿ ಮಾತನಾಡಿ, ರಾಷ್ಟ್ರೀಯ ಮತದಾನ ದಿನಾಚರಣೆಯಲ್ಲಿ ಸಾರ್ವಜನಿಕರ ಜಾಗೃತಿ ಕಾರ್ಯಕ್ರಮಗಳು ಹೆಚ್ಚು ಸಂಘಟಿಸಬೇಕು ಎಂದರು.
ಜಿಪಂ ಉಪ ಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಚುನಾವಣಾ ರಾಯಭಾರಿ ರಾಕೇಶ ನಿಡಗುಂದಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ, ಕೆ.ಎಂ. ಶೇಖ ಮತ್ತಿತರರು ಇದ್ದರು.
ಜಿಲ್ಲಾ ಮಟ್ಟದ ಬಿಎಲ್‌ಒ ಮೇಲ್ವಿಚಾರಕರಾಗಿ ಗ್ರಾಮ ಆಡಳಿತ ಅಧಿಕಾರಿ ಕರಿಯಪ್ಪ ಗುಡ್ಡದ ಮತ್ತು ಉತ್ತಮ ಬಿಎಲ್‌ಒ ಆಗಿ ಅಂಗನವಾಡಿ ಕಾರ್ಯಕರ್ತೆ ಸವಿತಾ ಶೀಲವಂತರಗೆ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಧಾರವಾಡ 71 ಮತಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಮತಗಟ್ಟೆ ಮೇಲ್ವಿಚಾರಕರಾದ ಆನಂದ ಆನಿಕಿವಿ, ಸಾವಿತ್ರಿ ಡೊಣ್ಣಿ, ಮಂಜುನಾಥ ಬಾಗೇವಾಡಿ ಅವರನ್ನು ಹಾಗೂ ಉತ್ತಮ ಬಿಎಲ್‌ಒಗಳಾದ ಶ್ರುತಿ ಕಡ್ಲಿಮಠ, ವಿಜಯಾ ನದಗಂಟಿ ಮತ್ತು ಗೌರವ್ವ ಚರಂತಿಮಠ ಅವರಿಗೆ ಪ್ರಶಸ್ತಿ ನೀಡಲಾಯಿತು.