ಕನ್ನಡಪ್ರಭ ವಾರ್ತೆ ವಿಜಯಪುರ:
ಇರಫಾನ ಶೇಖ ಮಾತನಾಡಿ, ಭಾರತವು ತನ್ನ ಸಂವಿಧಾನದ ಮೂಲಕ ಸಮಾನತೆ, ನ್ಯಾಯ, ಮತ್ತು ಸಹಬಾಳ್ವೆಯ ತತ್ವಗಳಿಗೆ ಬದ್ಧವಾಗಿದೆ. ಭಾರತರತ್ನ ಡಾ.ಅಂಬೇಡ್ಕರ್ ಅವರು ಈ ತತ್ವಗಳಿಗೆ ಜೀವ ತುಂಬಿ, ದೇಶದ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ ಮಹಾನ್ ನಾಯಕ. ಇಂತಹ ನಾಯಕರ ಬಗ್ಗೆ ಕೇವಲವಾಗಿ ಮಾತನಾಡಿದ ಅಮಿತ್ ಶಾ ಅವರ ಮೇಲೆ ತಕ್ಷಣ ಕ್ರಮ ಕೈಗೊಂಡು ಅವರನ್ನು ಸಚಿವ ಸಂಪುಟದಿಂದ ಉಚ್ಛಾಟಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಸೈಯದ್ ಜೈನುಲ್ ಅಬಿದಿನ್, ಅಕ್ರಂ ಮಾಶಾಳಕರ, ಹಫಿಜ್ ಸಿದ್ದಿಕಿ ಮಾತನಾಡಿದರು. ಮುಖಂಡರಾದ ಮುನ್ನಾ ಬಕ್ಷಿ, ಕುಲದೀಪ ಪೋತಿವಾಲೆ, ಇಖಲಾಸ್ ಸುನೇವಾಲೆ, ಇಮ್ರಾನ್ ಜಹಾಗಿರದಾರ, ಹಿದಾಯತ್ ಮಾಶಾಳಕರ, ಇಂಮ್ತಿಯಾಜ್ ಮುಲ್ಲಾ, ಹಬ್ಬು ಅಂಬಾರಖಾನೆ, ಅತಿಕ್ ನಾಲ್ಬಂದ, ಮುಸ್ತಫಾ ಆಲಮೇಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.