- ಬಸವಣ್ಣನವರ ಭಾವಚಿತ್ರಕ್ಕೆ ಅಪಮಾನ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Oct 20, 2023, 01:00 AM IST
ಮಸ್ಕಿ ಪಟ್ಟಣದ ಶ್ರೀಬಸವೇಶ್ವರ ಮೂರ್ತಿ ಬಳಿ ತಹಸೀಲ್ದಾರ ಅರಮನೆ ಸುಧಾ ಅವರಿಗೆ ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಚಾರ್ಯರು ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ದುಷ್ಕರ್ಮಿಗಳ ಬಂಧನಕ್ಕೆ ವರರುದ್ರಮಿನಿ ಶಿವಾಚಾರ್ಯರ ಆಗ್ರಹ

ಮಸ್ಕಿ: ಮಹಾ ಮಾನವತಾವಾದಿ ಜಗಜ್ಯೋತಿ ಬಸವೇಶ್ವರರು ಇಡೀ ಮನವ ಕುಲಕ್ಕೆ ಒಳಿತನ್ನು ಬಯಸಿದವರು. ಸಮ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದವರು, ಅಂತವರ ಕುರಿತು ಅಸಂಬದ್ಧವಾಗಿ ಮಾತಾಡುವುದು, ಅವರ ಮೂರ್ತಿ, ಭಾವಚಿತ್ರಗಳಿಗೆ ಅಪಮಾನ ಮಾಡುವುದು ಸರಿಯಲ್ಲ. ಯಾರೇ ಮಾಡಿರಲಿ ಅಂತವರ ಮೇಲೆ ಸೂಕ್ತ ಕ್ರಮಕೈಕೊಳ್ಳಬೇಕೆಂದು ಪಟ್ಟಣದ ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಚಾರ್ಯರು ಹೇಳಿದರು. ಪಟ್ಟಣದಲ್ಲಿ ವೀರಶೈವ ಲಿಂಗಾಯತ ಸಮಾಜದಿಂದ ನಡೆದ ಪ್ರತಿಭಟನಾ ರ್‍ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ಕೆಲವು ಕಿಡಿಗೇಡಿಗಳು ಬಸವಣ್ಣನವರ ಭಾವಚಿತ್ರಕ್ಕೆ ಅಪಮಾನ ಮಾಡಿದ್ದಾರೆ. ಅವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಭ್ರಮರಾಂಭ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರಣಿಗೆ ಕನಕವೃತ್ತ, ದೈವದಕಟ್ಟೆ, ಖಲೀಲವೃತ್ತ, ಪುರಸಭೆಯ ಮಾರ್ಗದಿಂದ ಹಳೆಯ ಬಸ್ನಿಲ್ದಾಣದ ಮುಖಾಂತರ ಬಸವೇಶ್ವರ ನಗರದ ಬಸವೇಶ್ವರ ಪುತ್ಥಳಿ ಇರುವ ಸ್ಥಾಳಕ್ಕೆ ಆಗಮಿಸಿತು. ನಂತರ ತಹಸೀಲ್ದಾರ್‌ ಅರಮನೆ ಸುಧಾ ಅವರಿಗೆ ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಚಾರ್ಯರು ಮನವಿ ಪತ್ರ ಸಲ್ಲಿಸಿದರು. ಉಮಾಕಾಂತಪ್ಪ ಸಂಗನಾಳ, ಸಿದ್ದಲಿಂಗಯ್ಯ ಹಿರೇಮಠ, ಪಂಪಣ್ಣ ಗುಂಡಳ್ಳಿ, ಸಿದ್ದರಾಮಯ್ಯ ಗಡ್ಡಿಮಠ, ಬಸಪ್ಪ ಬ್ಯಾಳಿ, ಚನ್ನಪ್ಪ ಬ್ಯಾಳಿ, ಸಿದ್ದಲಿಂಗಯ್ಯ ಸೊಪ್ಪಿಮಠ, ಡಾ.ಮಲ್ಲಿಕಾರ್ಜುನ ಇತ್ಲಿ, ಬಸವಲಿಂಗ ಶಟ್ಟಿ, ಸುಗಣ್ಣ ಬಾಳೆಕಾಯಿ, ಶಿವಪ್ರಸಾದ ಕ್ಯಾತ್ನಟ್ಟಿ, ಘನಮಠದಯ್ಯ ಸಾಲಿಮಠ, ಶಿವರಾಜ ಇತ್ಲಿ, ಚನ್ನಪ್ಪ ಕೊಡಿಹಾಳ, ಮಲ್ಲಿಕಾರ್ಜುನ ಸೊಪ್ಪಿಮಠ, ನಾಗರಾಜ ಯಂಬಲದ, ಕರಬಸಯ್ಯಸ್ವಾಮಿ, ಆದಯ್ಯ ಸ್ವಾಮಿ ಕ್ಯಾತ್ನಟ್ಟಿ, ಮಲ್ಲಿಕಾರ್ಜುನ ಕ್ಯಾತ್ನಟ್ಟಿ ಹಾಗೂ ಇತರರು ಭಾಗವಹಿಸಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ