ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಬೋಧಿ ಸತ್ವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಅನಾವರಣಗೊಳಿಸುವಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಹಲವಾರು ಸಂಘಸಂಸ್ಥೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಟಾರ್ಪಲ್ ಸುತ್ತಿರುವ ಅಂಬೇಡ್ಕರ್ ಅವರ ಪ್ರತಿಮೆಯ ಕೆಳಗಡೆ ಅನಿರ್ದಿಷ್ಟಕಾಲ ಪ್ರತಿಭಟನೆ ನಡೆಸಿ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ, ಕೂಡಲೇ ಅಂಬೇಡ್ಕರ್ ಅವರ ಪ್ರತಿಮೆ ಅನಾವರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ದಲಿತ ಮುಖಂಡರಾದ ದಮ್ಮನಿಂಗಲ ಶಂಕರ್ ಮಾತನಾಡಿ ತಾಲೂಕಿನ ಎಲ್ಲಾ ದಲಿತ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳು ಪೂರ್ವಭಾವಿ ಸಭೆಯನ್ನು ನಡೆಸಿ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ೨೦೨೬ ನೇ ನವೆಂಬರ್ ೩೦ನೇ ತಾರೀಕು ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬರುವಂತೆ ತಾಲೂಕಿನ ಸಮಸ್ತ ಜನತೆಗೆ ಕರೆ ನೀಡಲಾಗಿದೆ. ಈಗ ಇದ್ದಕ್ಕಿದ್ದಂತೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂಬ ಮಾಹಿತಿ ಸುದ್ದಿ ಹರಡಿದೆ, ಈ ಸುದ್ದಿಯಿಂದ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ, ನವಂಬರ್ ೩೦ನೇ ತಾರೀಕು ಅಂಬೇಡ್ಕರ್ ಪ್ರತಿಮೆಯನ್ನು ಉದ್ಘಾಟನೆ ಮಾಡಿ ತೀರುತ್ತೇವೆ ಎಂದು ಸಂಘ ಸಂಸ್ಥೆಗಳ ಮುಖಂಡರು ಹೇಳಿಕೆ ನೀಡಿದರು.ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆಗೆ ಈಗಾಗಲೇ ಲಕ್ಷಾಂತರ ರುಪಾಯಿ ಹಣವನ್ನು ಖರ್ಚು ಮಾಡಿ ತಾಲೂಕಿನ ಎಲ್ಲಾ ಗ್ರಾಮಗಳಿಗೂ ಭೇಟಿ ಮಾಡಿ ಜನರನ್ನು ಕರೆತರಲು ಪೂರ್ವ ತಯಾರಿ ಮಾಡಿಕೊಂಡು ಮುಂಗಡ ಹಣವನ್ನು ನೀಡಲಾಗಿದೆ, ವಿಶ್ವ ರತ್ನ ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಪೂರ್ವ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ, ಆದಕಾರಣ ಯಾರೇ ಬರಲಿ, ಯಾರೇ ಬರದೇ ಇರಲಿ ನವೆಂಬರ್ ೩೦ನೇ ತಾರೀಕು ಬಾಬಾ ಸಾಹೇಬ್ ಡಾ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದು ತಿಳಿಸಿದರು. ಈ ಪ್ರತಿಭಟನೆಯಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಡಿ.ಎಸ್.ರವಿ, ಅಂಬೇಡ್ಕರ್ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷರಾದ ಈಶ್ವರನ್, ದಲಿತ ಮುಖಂಡರು ಹಾಗೂ ಗುತ್ತಿಗೆದಾರರಾದ ನಲ್ಲೂರು ಸಂತೋಷ್, ನವೀನ್ ರಂಗಸ್ವಾಮಿ, ಸಿ ಪಿ ಮಂಜುನಾಥ್, ಬಿ ಪಿ ಧರ್ಮರಾಜ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ರಾಮಚಂದ್ರು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ನವಿಲೇ ಹೊಸೂರು ಚಂದ್ರಪ್ಪ, ರೈತ ಸಂಘದ ರಾಜ್ಯಾಧ್ಯಕ್ಷರಾದ ಅರಳಾಪುರ ಮಂಜೇಗೌಡ, ಜೋಗಿಪುರ ಪ್ರಕಾಶ್, ದಲಿತ ಮುಖಂಡರಾದ ಆಲದಹಳ್ಳಿ ವೆಂಕಟೇಶ್, ದಿಂಡಗೂರು ಗೋವಿಂದ, ವಿರೂಪಾಕ್ಷಪುರ ಪ್ರಕಾಶ್, ಸಿ. ಜಿ. ಸೋಮಶೇಖರ್, ಕುರುವಂಕ ಮಂಜುನಾಥ್, ದಮ್ಮನಿಂಗಲ ಶಂಕರ್, ಮಂಜುನಾಥ್, ಎ ಕೆ ಕಾಲೋನಿ ಕೃಷ್ಣ, ದೇವರಾಜು, ಹರೀಶ್, ಕೆ ಆರ್ ರವಿಕುಮಾರ್, ಟಿ. ಡಿ. ಹರೀಶ್, ಬಿ ಪಿ ಗೋವಿಂದರಾಜು, ಕುಮಾರ್, ನಿವೃತ್ತ ನೌಕರರುಗಳಾದ ಆಲೂರು ವೆಂಕಟೇಶ್, ನರಸಿಂಹಮೂರ್ತಿ ಬೌದ್ಧ , ಎಂ ಎಲ್ ಅಣ್ಣಪ್ಪ, ಮತ್ತಿಘಟ್ಟ ಶಂಕರಪ್ಪ, ಕಾರ್ಮಿಕ ಸಂಘಟನೆಯ ಮುಖಂಡರಾದ ಗೋವಿನಕೆರೆ ತೇಜಸ್, ಜೋಗಿಪುರ ಮಂಜೇಗೌಡ, ಭೂಮಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಮಡಬ ಶಂಕರಲಿoಗೇಗೌಡ, ಗೌರವ ಅಧ್ಯಕ್ಷರಾದ ರಾಜಕುಮಾರ್, ಸವಿತಾ ಸಮಾಜ ಮುಖಂಡರಾದ ಡಿಶ್ ಕುಮಾರ, ಗಾಣಿಗ ಸಮಾಜದ ಮುಖಂಡರಾದ ಮೋಹನ್, ರೈತ ಸಂಘದ ಅಧ್ಯಕ್ಷರಾದ ಟೈಲರ್ ಕುಮಾರ್, ಮುಸ್ಲಿಂ ಮುಖಂಡರಾದ ಸಯೀದ್, ಇಮ್ರಾನ್ ಪಾಷಾ ಸೇರಿದಂತೆ ಇತರರು ಹಾಜರಿದ್ದರು.
* ಬಾಕ್ಸ್:::: ವರ್ಷ ಕಳೆದರೂ ಅನಾವರಣಗೊಳ್ಳದಿರುವುದು ಬೇಸರ ತಂದಿದೆ: ಮಂಜುನಾಥ್ಪ್ರತಿಭಟನೆ ವೇಳೆ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್. ಎಸ್. ಮಂಜುನಾಥ್, ಅಂಬೇಡ್ಕರ್ ಅವರ ಪ್ರತಿಮೆಯನ್ನು ಬರಮಾಡಿಕೊಂಡು ಸುಮಾರು ಒಂದು ವರ್ಷ, ಎರಡು ತಿಂಗಳು ಕಳೆದಿದ್ದರೂ ಇದುವರೆಗೂ ಅನಾವರಣಗೊಳಿಸದಿರುವುದು ತುಂಬಾ ಬೇಸರದ ಸಂಗತಿಯಾಗಿದೆ. ಕಳೆದ ವರ್ಷ ಜನವರಿ ೨೬ರಂದೇ ಪ್ರತಿಮೆ ಅನಾವರಣಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ ವಿವಿಧ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಬಳಿಕ ತಾಲೂಕು ಆಡಳಿತ ಸಭೆ ನಡೆಸಿ ನವೆಂಬರ್ ೨೬ರಂದು ಅನಾವರಣಕ್ಕೆ ದಿನಾಂಕ ನಿಗದಿಪಡಿಸಿತ್ತು, ಸಾಧ್ಯವಾಗಲಿಲ್ಲ. ನಂತರ ನವೆಂಬರ್ ೩೦ಕ್ಕೆ ದಿನಾಂಕ ನಿಗದಿಪಡಿಸಲಾಯಿತು ಎಂದು ತಿಳಿಸಿದರು. ಆದರೆ ಈಗ ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿತಿಯ ಕಾರಣದಿಂದ ನವೆಂಬರ್ ೩೦ರಂದು ನಿಗದಿಯಾಗಿದ್ದ ಕಾರ್ಯಕ್ರಮವೂ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ತಿಳಿದುಬಂದಿದೆ. ರಾಜಕೀಯ ಪಕ್ಷಗಳ ಪ್ರತಿಷ್ಠೆ ಹಾಗೂ ಸ್ವಾರ್ಥ ಕಾರಣಗಳಿಂದ ಅಂಬೇಡ್ಕರ್ ಪ್ರತಿಮೆ ಅನಾವರಣದ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.* ಹೇಳಿಕೆ1
=======ಪೋಟೋ: ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆಯ ಅನಾವರಣ ಕಾರ್ಯಕ್ರಮ ಪದೇ ಪದೆ ಮುಂದೂಡಿಕೆಗೆ ಆಕ್ರೋಶ ವ್ಯಕ್ತಪಡಿಸಿ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತದ ನಡೆಯನ್ನು ಖಂಡಿಸಿ ಅಂಬೇಡ್ಕರ್ ಅವರ ಪ್ರತಿಮೆ ಎದುರು ದಲಿತಪರ ಸಂಘಟನೆಗಳು, ರೈತಪರ ಸಂಘಟನೆಗಳು, ಕಾರ್ಮಿಕರ ಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.