ಕೊನೇ ಭಾಗದ ಜಮೀನುಗಳಿಗೆ ನೀರು ಹರಿಸುವಂತೆ ರೈತರಿಂದ ಪ್ರತಿಭಟನೆ

KannadaprabhaNewsNetwork |  
Published : Apr 02, 2026, 01:45 AM IST
1ಕೆಎಂಎನ್ ಡಿ30 | Kannada Prabha

ಸಾರಾಂಶ

ಬೆಸಗರಹಳ್ಳಿ ಜಿಪಂ. ವ್ಯಾಪ್ತಿಯ ನಿಲುವಾಗಿಲು, ಹೊಸಕೆರೆ, ಕೋಡಿಹಳ್ಳಿ, ಮಾರಸಿಂಗನಹಳ್ಳಿ, ಮಾರ್ಲಾಮಿದೊಡ್ಡಿ, ಪಣ್ಣೆದೊಡ್ಡಿ, ಕೊತ್ತನಹಳ್ಳಿ, ಆನೆದೊಡ್ಡಿ ಇನ್ನಿತರ ಗ್ರಾಮಗಳ ರೈತರ ಜಮೀನುಗಳಲ್ಲಿ ಭತ್ತ, ರಾಗಿ, ಕಬ್ಬು, ತೆಂಗು ಸೇರಿದಂತೆ ಇನ್ನಿತರ ಬೆಳೆಗಳಿದ್ದು ಅಧಿಕಾರಿಗಳ ಬೇಜಾವಾಬ್ದಾರಿತನದಿಂದಾಗಿ ಈಗಾಗಲೇ ಬೆಳೆಗಳು ಒಣಗಿ ಅಧಿಕ ನಷ್ಟವುಂಟಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ವಿಶ್ವೇಶ್ವರಯ್ಯ ನಾಲೆ ಕೊನೆ ಭಾಗದ ಜಮೀನುಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ವಿವಿಧ ಗ್ರಾಮಘಳ ರೈತರು ಹಾಗೂ ರೈತಸಂಘದ ಬೆಂಬಲದೊಂದಿಗೆ ಮದ್ದೂರು-ಕೊಪ್ಪ ಮಾರ್ಗದ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ತಾಲೂಕಿನ ಬೆಸಗರಹಳ್ಳಿ ಅಡ್ಡರಸ್ತೆ ಬಳಿ ಆಗಮಿಸಿದ ನೂರಾರು ಪ್ರತಿಭಟನಾಕಾರರು, ಸ್ಥಳೀಯ ರೈತರು ನೀರಾವರಿ ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂದರು.

ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ರಸ್ತೆ ತಡೆ ನಡೆಸಿದ ಪರಿಣಾಮ ಮದ್ದೂರು-ಕೊಪ್ಪ ಮಾರ್ಗದ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡು ಪ್ರಯಾಣಿಕರು ಪರದಾಡುವಂತಾಯಿತು. ಸ್ಥಳದಲ್ಲಿದ್ದ ಪೋಲೀಸರು ಬದಲಿ ಮಾರ್ಗದಲ್ಲಿ ವಾಹನಗಳನ್ನು ಸಂಚರಿಸಲು ಅನುಕೂಲ ಕಲ್ಪಿಸಿದರು.

ತಾಲೂಕಿನ ಬೆಸಗರಹಳ್ಳಿ ಕೊನೆ ಭಾಗದ ಜಮೀನುಗಳಿಗೆ ಬುಧವಾರ ಸಂಜೆವರೆಗೂ ನಾಲೆಗಳ ಮೂಲಕ ಹರಿಸಬೇಕಾದ ನೀರನ್ನು ಎರಡು ದಿನ ಮುಂಚಿತವಾಗಿಯೇ ಸ್ಥಗತಗೊಳಿಸಿರುವ ಕ್ರಮವನ್ನು ಖಂಡಿಸಿದರು. ಕೆ.ಆರ್.ಎಸ್. ಅಣೆಕಟ್ಟೆ ಬಳಿ ಒಂದು ದಿನ ಮುಂಚಿತವಾಗಿಯೇ ಗೇಟ್ ಬಂದ್ ಮಾಡಿದ್ದಾರೆ ಎಂದು ದೂರಿದರು.

ಬೆಸಗರಹಳ್ಳಿ ಜಿಪಂ. ವ್ಯಾಪ್ತಿಯ ನಿಲುವಾಗಿಲು, ಹೊಸಕೆರೆ, ಕೋಡಿಹಳ್ಳಿ, ಮಾರಸಿಂಗನಹಳ್ಳಿ, ಮಾರ್ಲಾಮಿದೊಡ್ಡಿ, ಪಣ್ಣೆದೊಡ್ಡಿ, ಕೊತ್ತನಹಳ್ಳಿ, ಆನೆದೊಡ್ಡಿ ಇನ್ನಿತರ ಗ್ರಾಮಗಳ ರೈತರ ಜಮೀನುಗಳಲ್ಲಿ ಭತ್ತ, ರಾಗಿ, ಕಬ್ಬು, ತೆಂಗು ಸೇರಿದಂತೆ ಇನ್ನಿತರ ಬೆಳೆಗಳಿದ್ದು ಅಧಿಕಾರಿಗಳ ಬೇಜಾವಾಬ್ಧಾರಿತನದಿಂದಾಗಿ ಈಗಾಗಲೇ ಬೆಳೆಗಳು ಒಣಗಿ ಅಧಿಕ ನಷ್ಟವುಂಟಾಗಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಬೇಸಿಗೆ ಆರಂಭಗೊಂಡಿದೆ. ಜನಜಾನುವಾರುಗಳಿಗೂ ಕುಡಿಯುವ ನೀರಿಗೆ ತೊಂದರೆ ಬಂದಿರುವ ಜತೆಗೆ ಕೆರೆ ಕಟ್ಟೆಗಳು ಭರ್ತಿಯಾಗದೆ ಪ್ರಾಣಿ ಪಕ್ಷಿಗಳಿಗೂ ತೊಡಕಾಗಿದೆ. ಅಧಿಕಾರಿಗಳ ಬೇಜಾವಾಬ್ಧಾರಿತನದಿಂದ ರೈತರಿಗೆ ಸಮರ್ಪಕವಾಗಿ ಮಾಹಿತಿ ನೀಡದೆ ಏಕಾಏಕಿ ನೀರು ಸ್ಥಗಿತಗೊಳಿಸಿರುವ ಕ್ರಮವನ್ನು ಖಂಡಿಸಿದರು.

ಜಮೀನುಗಳಲ್ಲಿ ಬೆಳೆಗಳು ಒಣಗುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಒಣಗಿರುವ ಬೆಳೆಗಳಿಗೆ ಸರಕಾರ ಪರಿಹಾರ ನೀಡಲು ಮೀನಮೇಷ ಎಣಿಸುತ್ತಿದ್ದಾರೆ. ಪ್ರಸಕ್ತ ಸಾಲಿನ ಬೆಳೆಗಳು ಒಣಗಲು ನೀರಾವರಿ ಅಧಿಕಾರಿಗಳೇ ಕಾರಣ. ಕೂಡಲೇ ಬೆಳೆ ಪರಿಹಾರ ನೀಡುವಂತೆ ತಪ್ಪಿದಲ್ಲಿ ಕಾನೂನು ಹೋರಾಟದ ಮೂಲಕ ಪರಿಹಾರ ತೆಗೆದುಕೊಳ್ಳಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.

ಕೆ.ಆರ್.ಎಸ್. ಜಲಾಶಯದಲ್ಲಿ 104 ಅಡಿ ನೀರಿದ್ದರೂ ರೈತರ ಬೇಸಾಯಕ್ಕೆ ಮತ್ತು ಬೆಳೆಗಳಿಗೆ ನೀರು ಹರಿಸದೆ ಅಧಿಕಾರಿಗಳು ನಿರ್ಲಕ್ಷ ಧೋರಣೆ ಸರಿಯಲ್ಲ. ಆರ್ಥಿಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕು ಎಂದು ಪಟ್ಟು ಹಿಡಿದರು.

ಸ್ಥಳಕ್ಕಾಗಮಿಸಿದ ಕೆರಗೋಡು ವಿಭಾಗದ ಎ.ಇ.ಇ ಅಜಯ್, ರೈತರೊಂದಿಗೆ ಚರ್ಚಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ನಾಲೆಗಳಿಗೆ ನೀರು ಹರಿಸುವ ಜೊತೆಗೆ ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆ ವೇಳೆ ರೈತ ಸಂಘಟನೆ ತಾಲೂಕು ಅಧ್ಯಕ್ಷ ಎಚ್.ಜಿ.ಪ್ರಭುಲಿಂಗು, ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ಸೋ.ಶಿ.ಪ್ರಕಾಶ್, ಶಿವಲಿಂಗು, ಎಚ್.ಎಲ್.ದಯಾನಂದ, ಕೆ.ಜಿ.ಉಮೇಶ್, ಗೋಪಿ, ರಾಮಕೃಷ್ಣ, ಚನ್ನಪ್ಪ, ವೆಂಕಟೇಶ್, ಮುತ್ತರಾಜು, ಜಯರಾಮು, ಶಿವರಾಮು, ರಾಹುಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ಧಗಂಗಾ ಮಠ ಪ್ರಜಾಪ್ರಭುತ್ವದ ಕೈಗನ್ನಡಿ: ಮುರ್ಮು
ಅಯತೊಲ್ಲಾ ಖಮೇನಿ ನಿಧನಕ್ಕೆ ಕಲಬುರಗಿ ಪಾಲಿಕೆ ಸಂತಾಪ