ರಸ್ತೆಯಲ್ಲಿ ಮಲಗಿ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Feb 06, 2024, 01:37 AM IST
4.ಮೇಡಮಾರನಹಳ್ಳಿ ಗ್ರಾಮದ ಬಳಿ ಹಾರೋಹಳ್ಳಿ-ಬಿಡದಿ ರಸ್ತೆಯಲ್ಲಿ  ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಹಾರೋಹಳ್ಳಿ: ತಾಲೂಕಿನ ಮೇಡಮಾರನಹಳ್ಳಿ ಬಳಿ ಹಾರೋಹಳ್ಳಿ-ಬಿಡದಿ ರಸ್ತೆಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಲಗಿ ವಾಹನಗಳನ್ನ ತಡೆದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಹಾರೋಹಳ್ಳಿ: ತಾಲೂಕಿನ ಮೇಡಮಾರನಹಳ್ಳಿ ಬಳಿ ಹಾರೋಹಳ್ಳಿ-ಬಿಡದಿ ರಸ್ತೆಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಲಗಿ ವಾಹನಗಳನ್ನ ತಡೆದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಹಾರೋಹಳ್ಳ-ಕಂಚುಗಾರನಹಳ್ಳಿವರೆಗೆ ರಸ್ತೆ ದುರಸ್ತಿ ಮಾಡದೆ ಅಸಡ್ಡೆ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಾರ್ಯಕರ್ತರು, ಪ್ರತಿಭಟನೆ ನಡೆಸಿದ್ದರಿಂದ ಸುಮಾರು 3 ಕಿಲೋ ಮೀಟರ್ ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಪ್ರಯಾಣಿಕರು ಮತ್ತು ಉದ್ಯೋಗಸ್ಥರಿಗೆ ತೊಂದರೆಯಾಯಿತು. ವಿದ್ಯಾರ್ಥಿಗಳು ನಡೆದುಕೊಂಡು ಶಾಲಾ - ಕಾಲೇಜುಗಳಿಗೆ ತೆರಳಿದರು.

ವಿವಿಧ ಸಂಘಟನೆಗಳ ಮುಖಂಡರು ಬಿಡದಿ - ಹಾರೋಹಳ್ಳಿ ರಸ್ತೆಯಲ್ಲಿ ಚಾಪೆ ಹಾಸಿ ಮಲಗಿ ಸರ್ಕಾರ ಹಾಗೂ ಜನ ಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು.

ಭಿಕ್ಷೆ ಬೇಡಿ ಅಕ್ರೋಶ :

ಸರ್ಕಾರದ ಬಳಿ ಹಣ ಇಲ್ಲವೆಂದು ನಾವೇ ಸ್ವತಃ ಸಾರ್ವಜನಿಕರ ಬಳಿ ಭಿಕ್ಷೆ ಬೇಡಿ ಹಣ ಕೊಡುವೆವು ಅದನ್ನು ಹಡೆದು ರಸ್ತೆ ಅಭಿವೃದ್ದಿ ಮಾಡಿ, ನಿಮ್ಮ ಯೋಗ್ಯತೆ ಇಲ್ಲ ಎಂದು ರೈತ ಸಂಘದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ನಾಲಾಯಕ್ ಜನ ಪ್ರತಿನಿಧಿಗಳು:

ಸುಮಾರು ವರ್ಷಗಳಿಂದ ಈ ರಸ್ತೆ ಅಭಿವೃದ್ದಿ ಮಾಡದೇ ಇರುವರು ಯಾವ ರೀತಿ ಜನರಿಗೆ ಉತ್ತಮ ಅಡಳಿತ ನೀಡಲು ಸಾಧ್ಯ. ಈ ಭಾಗದ ಉಪ ಮುಖ್ಯ ಮಂತ್ರಿಗಳು ಸಂಸದರು ಶಾಸಕರುಗಳು ಯಾವುದಕ್ಕೂ ಪ್ರಯೋಜನಕ್ಕೆ ಬಾರದ ನಾಲಾಯಕ್ ಜನಪ್ರತಿನಿಧಿಗಳು ಎಂದು ಧಿಕ್ಕಾರ ಕೂಗಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಸಂಪತ್‌ಕುಮಾರ್, ದೇವರಾಜ್, ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೇಗೌಡ, ಮರಳವಾ ಡಿ.ನಾಗರಾಜು, ನದೀಮ್, ಮೇಡಮಾರನಹಳ್ಳಿ ಸುರೇಶ್, ನವೀನ್, ನರಸಿಂಹಯ್ಯ, ಭೈರಪ್ಪ ನಾಗರಾಜು, ಗಜೇಂದ್ರಸಿಂಗ್, ಸೀನಪ್ಪ ಹಾಗೂ ಮೇಡಮಾರನಹಳ್ಳಿ ಗ್ರಾಮಸ್ಥರು ಮುಖಂಡರು ಭಾಗವಹಿಸಿದ್ದರು.

5ಕೆಆರ್ ಎಂಎನ್ 4,5,6.ಜೆಪಿಜಿ

4.ಮೇಡಮಾರನಹಳ್ಳಿ ಗ್ರಾಮದ ಬಳಿ ಹಾರೋಹಳ್ಳಿ-ಬಿಡದಿ ರಸ್ತೆಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು