ಕನ್ನಡಪ್ರಭ ವಾರ್ತೆ ಕಲಘಟಗಿ
ಪಟ್ಟಣದ ಬಮ್ಮಿಗಟ್ಟಿ ಕ್ರಾಸ್ ಬಳಿ ಸೇರಿದ ನೂರಾರು ಮುಸ್ಲಿಂ ಬಾಂಧವರು, ಬಸ್ ನಿಲ್ದಾಣ, ಆಂಜನೇಯ ವೃತ್ತ ಮೂಲಕ ತಹಸೀಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ದಾರಿಯುದ್ದಕ್ಕೂ ನೇಹಾ ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಘೋಷಣೆ ಕೂಗಿದರು.
ನೇಹಾ ಹಿರೇಮಠ ವಿದ್ಯಾರ್ಥಿನಿಯನ್ನು ಫಯಾಜ್ ಎಂಬಾತ ಅಮಾನುಷವಾಗಿ ಹತ್ಯೆ ಮಾಡಿದ್ದು, ಈ ಘಟನೆಯನ್ನು ಕಲಘಟಗಿಯ ಅಂಜುಮನ್ ಇಸ್ಲಾಂ ಸಂಸ್ಥೆ ಹಾಗೂ ಸಮಸ್ತ ತಾಲೂಕಿನ ಮುಸ್ಲಿಂ ಸಮುದಾಯ ಖಂಡಿಸುತ್ತದೆ. ಇದೊಂದು ಅಮಾನವೀಯ, ಅಕ್ಷಮ್ಯ ಅಪರಾಧವಾಗಿದೆ. ನ್ಯಾಯಾಲಯ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತ್ವರಿತವಾಗಿ ತೀರ್ಪು ನೀಡಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಅಂಜುಮನ್ ಅಧ್ಯಕ್ಷರಾದ ಅಜ್ಮತ್ ಜಾಗೀರದಾರ, ಹಜರೇಸಾಬ ಶಿಗ್ಗಾಂವ, ಬಾಷಾಸಾಬ್ ಕರಿಗಾರ, ಅಬ್ದುಲಸಾಬ್ ಗಡಿವಾಲೆ, ಆಜಾದ್ ಮಲಿಕನವರ, ಸಾದಿಕ್ ಹೆಬ್ಬಾಳ, ಬಾಷಾಸಾಬ್ ಕಲ್ಕೇರಿ, ನಜೀರ್ ಹುಬ್ಬಳ್ಳಿ, ಹಸನ್ ಗಂಜಿಗಟ್ಟಿ, ಶೌಕತ್ ಅಲಿ, ರಫೀಕ್ ಸುಂಕದ, ರುಸ್ತುಂಸಾಬ್, ದಾವಲಸಾಬ್ ಓಲೆಕಾರ, ಬಾಷಾಸಾಬ ನಲಬಾದ್, ಸಿಕಂದರಬಾಷಾ ಬೇಫಾರಿ, ಇಸ್ಮಾಯಿಲ್ ಮಿಶ್ರಿಕೋಟಿ, ಜೀಲಾನಿ ಅಂಗಡಿ, ರಿಯಾಜ್, ಸೈಯದ್ ಸೇರಿದಂತೆ ತಾಲೂಕಿನ ಮುಸ್ಲಿಂ ಸಮಾಜ ಮುಖಂಡರು ಭಾಗವಹಿಸಿದ್ದರು.